Advertisement

ವಿಧಾನ ಪರಿಷತ್ ಗದ್ದಲಕ್ಕೆ ಕಾಂಗ್ರೇಸ್ ಸದಸ್ಯರೇ ನೇರ ಹೊಣೆ : ಕೋಟ ಶ್ರೀನಿವಾಸ್ ಪೂಜಾರಿ

12:48 PM Dec 17, 2020 | sudhir |

ಉಡುಪಿ : ವಿಧಾನ ಪರಿಷತ್ ನಲ್ಲಿ ಸಭಾಪತಿಯ ಸ್ಥಾನದ ಬಗ್ಗೆ ಎಲ್ಲರಿಗೂ ಗೌರವ ಇದೆ ಆದರೆ ಕಾಂಗ್ರೆಸ್ ಮುಖಂಡರು ಸಭಾಪತಿ ಸ್ಥಾನವನ್ನು ಕಾಂಗ್ರೆಸ್ಸಿಕರಣ ಮಾಡಿ ರಾಜಕಾರಣ ಮಾಡಿದ ಹಿನ್ನೆಲೆಯಲ್ಲಿ ಗೊಂದಲ ಸೃಷ್ಟಿಯಾಗಿದೆ ಹಾಗಾಗಿ ಇದಕ್ಕೆ ನೇರವಾಗಿ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

Advertisement

ಉಡುಪಿಯಲ್ಲಿ ಮಾತನಾಡಿದ ಸಚಿವರು ಈ ಹಿಂದೆ ಶಂಕರಮೂರ್ತಿ ಅವರು ಸಭಾಪತಿಯಾಗಿದ್ದ ಸಂದರ್ಭ ಕಾಂಗ್ರೆಸ್ ನಾಯಕರು ಅವಿಶ್ವಾಸ ಗೊತ್ತುವಳಿಯನ್ನು ಮಂಡನೆ ಮಾಡಿದ್ದರು ಅವಿಶ್ವಾಸ ಗೊತ್ತುವಳಿ ಮಾಡಿದ ಹದಿನಾಲ್ಕು ದಿನಕ್ಕೆ ಸಭಾಪತಿಯಾಗಿದ್ದ ಶಂಕರಮೂರ್ತಿ ಅವರು ನನ್ನ ಮೇಲೆ ಅವಿಶ್ವಾಸ ಗೊತ್ತುವಳಿ ಮಾಡಿದವರು ಎದ್ದು ನಿಲ್ಲಿ ಎಂದು ಹೇಳಿದಾಗ ಸದನದಲ್ಲಿ ಹತ್ತಕ್ಕಿಂತ ಹೆಚ್ಚಿನ ಸದಸ್ಯರು ಎದ್ದು ನಿಲ್ಲುತ್ತಾರೆ ಈ ವೇಳೆ ಸಭಾಪತಿಗಳು ತಮ್ಮ ಪೀಠದಿಂದ ಕೆಳೆಗಿಳಿದು ಉಪ ಸಭಾಪತಿಯನ್ನು ಪೀಠದಲ್ಲಿ ಕೂರಿಸಿ ತಾವು ಸದನದ ಕೆಳಗೆ ಬಂದು ಕುಳಿತುಕೊಳ್ಳುತ್ತಾರೆ. ಹೀಗೆ ನಂತರ ಸಭಾಪತಿಗಳು ತನ್ನ ಮೇಲೆ ಅವಿಶ್ವಾಸ ಗೊತ್ತುವಳಿ ಮಂಡನೆಯಾಗಿದೆ ಮತ್ತೆ ಅವಕಾಶಕ್ಕಾಗಿ ಕೋರಿಕೆ ಸಲ್ಲಿಸಿ ಬಹುಮತ ಬಂದ ಹಿನ್ನೆಲೆಯಲ್ಲಿ ಮತ್ತೆ ಸಭಾಪತಿಯಾಗಿ ಮುಂದುವರೆಯುತ್ತಾರೆ, ಇದೆ ವಿದ್ಯಮಾನ ಮೊನ್ನೆ ನೆಡೆದಿದ್ದು ಬಿಜೆಪಿಯ ಹದಿಮೂರು ಜನ ಸದಸ್ಯರು ಸಭಾಪತಿಯವರ ಮೇಲೆ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಿದ್ದು ಅದೇ ರೀತಿ ಸಭಾಪತಿಗಳು ಹದಿನಾಲ್ಕು ದಿನಗಳ ಬಳಿಕ ಒಂದು ದಿನವನ್ನು ನಿಗದಿಪಡಿಸಬೇಕಿತ್ತು ಕೊನೆಯ ಐದು ದಿವಸದ ಅವಧಿಯಲ್ಲಿ ಅವಿಶ್ವಾಸ ಗೊತ್ತುವಳಿಯ ಕುರಿತು ಮಾತನಾಡಬೇಕಿತ್ತು ಆದರೆ ಅದು ನಡೆಯಲಿಲ್ಲ.

ಇದನ್ನೂ ಓದಿ:ನನ್ನ ಹತ್ಯೆಗೂ ಸುಪಾರಿ ಕೊಟ್ಟಿದ್ದರು ಎಂಬ ವಿಷಯ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ: ಮುತ್ತಗಿ

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸದಸ್ಯರು ಸಭಾಪತಿಯವರ ಮೇಲೆ ಒತ್ತಡ ತಂದು ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡದಂತೆ ಮಾಡಿದ್ದಾರೆ ಹಾಗಾಗಿ ಗದ್ದಲ ಸೃಷ್ಟಿಯಾಗಿದೆ ಎಂದು ಸಚಿವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next