Advertisement

ದೇವಸ್ಥಾನಗಳ ರಕ್ಷಣೆಗೆ ಸರಕಾರ ಬದ್ಧ: ಕೋಟ ಶ್ರೀನಿವಾಸ ಪೂಜಾರಿ

03:18 PM Oct 26, 2020 | sudhir |

ಪುಂಜಾಲಕಟ್ಟೆ : ಎಲ್ಲ ದೇವಸ್ಥಾನಗಳ ರಕ್ಷಣೆಗೆ ಸರಕಾರ, ಜಿಲ್ಲಾಡಳಿತ ಬದ್ಧವಾಗಿದ್ದು, ಐತಿಹಾಸಿಕ ಶ್ರೀ  ಕಾರಿಂಜೇಶ್ವರ ದೇವಸ್ಥಾನದ ಹಿತದೃಷ್ಟಿಯಿಂದ  ಆಸುಪಾಸಿನಲ್ಲಿ ಗಣಿಗಾರಿಕೆಗೆ  ತಾತ್ಕಾಲಿಕ ತಡೆ ನೀಡಲು ನಿರ್ಧರಿಸಲಾಗಿದೆ ಎಂದು ಧಾರ್ಮಿಕ ದತ್ತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನದ ತಡೆಗೋಡೆ ಕೆಲವು ದಿನಗಳ ಹಿಂದೆ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಜತೆಗೆ  ಸೋಮವಾರ ಭೇಟಿ ನೀಡಿದ ಅವರು, ತಡೆಗೋಡೆಯನ್ನು ವೀಕ್ಷಿಸಿ, ಅಧಿಕಾರಿಗಳ ಸಭೆ ನಡೆಸಿ ಬಳಿಕ  ಮಾತನಾಡಿದರು.

ಕಲ್ಲುಕೋರೆ ಹಾಗೂ ಜಲ್ಲಿಕ್ರಷರ್ ನಿಂದ ದೇವಸ್ಥಾನಕ್ಕೆ ಸಮಸ್ಯೆಯಾಗುತ್ತಿದೆ ಎಂಬ ಭಕ್ತಾದಿಗಳ ದೂರಿನ ಹಿನ್ನೆಲೆಯಲ್ಲಿ ಶಾಸಕರ ಜೊತೆ ಪರಿಶೀಲನೆ ನಡೆಸಿ, ಅಧಿಕಾರಿಗಳ ಸಭೆ ನಡೆಸಿದ್ದೇನೆ.

ಇದನ್ನೂ ಓದಿ:ರಾಜಸ್ಥಾನದ ಗೆಲುವಿನೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ಕೂಟದಿಂದಲೇ ಔಟ್

ಸುತ್ತಮುತ್ತಲಿನ ಮೂರು ಕಲ್ಲಿನ ಕೋರೆಗಳು ಅಧಿಕೃತವಾಗಿದ್ದು, ಅದರಲ್ಲಿ ಪದ್ಮಶೇಖರ್ ಹಾಗೂ ಲಕ್ಷ್ಮಣ್ ಎಂಬವರ ಎರಡು ಕೋರೆಗಳು ತಾಂತ್ರಿಕ ಕಾರಣಗಳಿಂದ ಕಾರ್ಯಸ್ಥಗಿತಗೊಳಿಸಿದೆ. ಪ್ರಸ್ತುತ ಕಾರ್ಯಾಚರಿಸುತ್ತಿರುವ ಮರ್ವಿನ್ ಎಂಬವರ ಕೋರೆಯನ್ನು ತತ್‌ಕ್ಷಣದಿಂದಲೇ ಸ್ಥಗಿತಗೊಳಿಸಲು ಅಧಿಕಾರಿಗಳ ಮೂಲಕ ಸೂಚನೆ ನೀಡಲಾಗುವುದು ಎಂದ ಅವರು, ಗಣಿಗಾರಿಕೆಯಿಂದ ದೇವಳಕ್ಕೆ ಹಾಗೂ ಇಲ್ಲಿನ ಬಂಡೆಗಳಿಗೆ ಆಗುವ ತೊಂದರೆಗಳ ಬಗ್ಗೆ ಎನ್‌ಐಟಿಕೆ ಯ ತಜ್ಞರಿಂದ ಪರಿಶೀಲನೆ ನಡೆಸಿ ಅವರ ವರದಿಯನ್ನಾಧರಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

Advertisement

ಕುಸಿದು ಬಿದ್ದಿರುವ ಆವರಣಗೋಡೆಯ ಪುನರ್ ನಿರ್ಮಾಣ ಹಾಗೂ ಅನೇಕ ತುರ್ತು ಕಾಮಗಾರಿಗಳನ್ನು ಶೀಘ್ರ ನಡೆಸುವುದಾಗಿ ಹೇಳಿದ ಅವರು ಶಾಸಕ ರಾಜೇಶ್ ನಾಯ್ಕ್ ಅವರ ಕೋರಿಕೆಯಂತೆ ಕಾರಿಂಜೇಶ್ವರ ಕ್ಷೇತ್ರವನ್ನು ಪ್ರವಾಸೋದ್ಯಮಕ್ಕೆ ಸೇರ್ಪಡೆಗೊಳಿಸಲಾಗಿದ್ದು,  ತಜ್ಞರ ಸಲಹೆಯೊಂದಿಗೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್ ಸಿದ್ಧಪಡಿಸಲಾಗುವುದು ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿ:ಆಗ್ನೇಯ ಪದವೀಧರ ಕ್ಷೇತ್ರವನ್ನು ವೈ.ಎ. ನಾರಾಯಣಸ್ವಾಮಿ ಅಪವಿತ್ರಗೊಳಿಸಿದ್ದಾರೆ: ಡಾ.ಹಾಲನೂರ್

ಬಂಟ್ವಾಳ ಬೂಡ ಅಧ್ಯಕ್ಷ ದೇವದಾಸ ಶೆಟ್ಟಿ, ಮುಜರಾಯಿ ಇಲಾಖೆ ಸಹಾಯಕ ಕಮೀಷನರ್ ವೆಂಕಟೇಶ್,  ಗಣಿ ಇಲಾಖಾಧಿಕಾರಿ ಮಾದೇಶ್ವರ, ತಹಶಿಲ್ದಾರ್ ರಶ್ಮಿ ಎಸ್. ಆರ್., ಆಡಳಿತಾಧಿಕಾರಿ ನೋಣಯ್ಯ ನಾಯ್ಕ್, ಕಂದಾಯ ಅಧಿಕಾರಿ ನವೀನ್, ಗ್ರಾಮ ಕರಣಿಕೆ ಆಶಾ ಮೆಹಂದಳೆ,   ಗ್ರಾಮಣಿಗಳಾದ ಗಣಪತಿ ಮಚ್ಚಿನ್ನಾಯ, ವೆಂಕಟರಮಣ ಮುಚ್ಚಿನ್ನಾಯ, ಪ್ರಮುಖರಾದ ಶಿವಪ್ಪ ಗೌಡ, ಪ್ರಮೋದ್ ಕುಮಾರ್ ರೈ, ಡೊಂಬಯ ಅರಳ, ರವೀಶ್ ಶೆಟ್ಟಿ,   ಮೋಹನ  ಆಚಾರ್ಯ, ರಾಜಾರಾಮ್ ನಾಯಕ್, ಪ್ರಭಾಕರ ಪ್ರಭು,ಚಿದಾನಂದ ರೈ, ರಮಾನಾಥ ರಾಯಿ,  ಪುರುಷೋತ್ತಮ ಶೆಟ್ಟಿ, ಗಣೇಶ್ ರೈ ಮಾಣಿ, ಸುದರ್ಶನ ಬಜ, ಪ್ರದೀಪ್ ಅಜ್ಜಿಬೆಟ್ಟು, ರಾಜಗೋಪಾಲ ಪ್ರಭು, ರಾಮಕೃಷ್ಣ ಮಯ್ಯ, ರಾಧಾಕೃಷ್ಣ ಮಯ್ಯ, ಪುರುಷೋತ್ತಮ ಪೂಜಾರಿ, ಅರ್ಚಕರಾದ ಜಯಶಂಕರ ಉಪಾಧ್ಯಾಯ, ಮಿಥುನ್ ರಾಜ್ ನಾವಡ, ಚಂದ್ರಶೇಖರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next