Advertisement
ಈ ವರ್ಷವೂ ಅದೇ ಪರಿಸ್ಥಿತಿ, ಕೋವಿಡ್ ಸೋಂಕಿನ ಎರಡನೇ ಅಲೆಯ ಕಾರಣದಿಂದಾಗಿ ಮತ್ತೆ ಲಾಕ್ ಡೌನ್, ಕರ್ಫ್ಯೂ ನಂತಹ ಬಿಗಿ ಕ್ರಮಗಳ ಕಾರಣದಿಂದಾಗಿ ಮತ್ತೆ ಈ ಸೀಸನ್ ನಲ್ಲಿ ನಡೆಯಬೇಕಾಗಿದ್ದ ಧಾರ್ಮಿಕ ಕಾರ್ಯಕ್ರಮಗಳೆಲ್ಲವೂ ಮುಂದೂಡಲ್ಪಟ್ಟಿವೆ. ವಿಶೇಷವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ವಿಶಿಷ್ಟವಾಗಿ ಕಂಡುಬರುವ ಸಂಪ್ರದಾಯ `ಭೂತಾರಾಧನೆ’ಗೂ ಲಾಕ್ ಡೌನ್ ಕರಿ ಛಾಯೆ ಬಿದ್ದಿದೆ.
Related Articles
Advertisement
ಸರ್ಕಾರ, ಸಚಿವರು ಸ್ಪಂದಿಸುತ್ತಿಲ್ಲ
ಕೋವಿಡ್ ಕಾರಣದಿಂದ ಕಳೆದ ಬಾರಿ ದೇಶದಲ್ಲಿ ಲಾಕ್ ಡೌನ್ ಸಂದರ್ಭದಲ್ಲಿ ಎಲ್ಲಾ ಧಾರ್ಮಿಕ ಚಟುವಟಿಕೆಗಳು ಮುಂದೂಡಲಾಗಿತ್ತು. ಈ ಬಾರಿಯೂ ಕೂಡ ಅದೇ ಪರಿಸ್ಥಿತಿ. ದೈವ ಚಾಕ್ರಿ(ದೈವಾರಾಧನೆ ಮಾಡುವವರು) ಮಾಡುವ ವರ್ಗದವರಿಗೆ ದೊಡ್ಡ ಪ್ರಮಾಣದಲ್ಲಿ ಹೊಡೆತ ಬಿದ್ದಿದೆ. ಸರ್ಕಾರ ಈ ಹಿಂದುಳಿದ ವರ್ಗದವರಿಗೆ ಇದುವೆರೆಗೂ ಯಾವುದೇ ಪರಿಹಾರವನ್ನು ನೀಡಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನಗಳನ್ನು ಕೂಡ ಮಾಡುತ್ತಿದ್ದೇವೆ. ಆದರೇ, ಯಾವುದೇ ಪ್ರಯೋಜನವಾಗುತ್ತಿಲ್ಲ. ಜನಪ್ರತಿನಿಧಿಗಳು, ಸಚಿವರುಗಳು ಈ ವಿಚಾರವಾಗಿ ಮೌನ ತಾಳಿದ್ದಾರೆ. ದೈವ ಚಾಕ್ರಿ ಮಾಡುವ ವರ್ಗದ ಪರವಾಗಿ ಸರ್ಕಾರ ನಿಲ್ಲಬೇಕಾಗಿದೆ.
-ವಿನೋದ್ ಶೆಟ್ಟಿ
ಪ್ರಧಾನ ಕಾರ್ಯದರ್ಶಿ, ಅಖಿಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟ.
——————————————————–
ಸರ್ಕಾರದಿಂದ ಯಾವುದೇ ಪರಿಹಾರ ಸಿಕ್ಕಿಲ್ಲ
ಲಾಕ್ ಡೌನ್ ನ ಕಾರಣದಿಂದ ಈ ಬಾರಿಯೂ ದೈವಾರಧನೆ ನಡೆಸಲು ಅವಕಾಶವಿರಲಿಲ್ಲ. ದೈವಾರಾಧನೆಯಲ್ಲಿ ತೊಡಗಿಕೊಂಡವರಿಗೆ ಸರ್ಕಾರ ಯಾವುದೇ ರೀತಿಯಲ್ಲಿ ಸಹಾಯ ನೀಡಿಲ್ಲ. ದೈವಾರಾಧನೆಯಲ್ಲಿ ತೊಡಗಿಕೊಂಡಿರುವ ಸಮುದಾಯದವರು ಬದುಕಿಗೆ ದೈವ ಚಾಕ್ರಿಯನ್ನೇ ಆಧರಿಸಿಕೊಂಡಿದ್ದಾರೆ. ಲಾಕ್ ಡೌನ್ ಕಾರಣದಿಂದಾಗಿ ಬದುಕು ಸಂಕಷ್ಟದಲ್ಲಿದೆ.
-ರಕ್ಷಿತ್ ಕೋಟ್ಯಾನ್
ದೈವ ಮಧ್ಯಸ್ಥರು
——————————————————–
ಪರಿಹಾರ ನಿಡುವಂತೆ ಮತ್ತೊಮ್ಮೆ ಮನವಿ ಮುಂದಿಡುತ್ತೇನೆ : ಸಚಿವ ಕೋಟ
ಕೋಲ ಕಟ್ಟುವವರು ಹಾಗೂ ಗರಡಿಯ ಅರ್ಚಕರು ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲ. ಆದರೇ, ಆ ವರ್ಗದವರಿಗೆ ಪರಿಹಾರ ನೀಡುವಂತೆ ಈಗಾಗಲೇ ನಾವು ಮುಖ್ಯಮಂತ್ರಿಗಳೊಂದಿಗೆ ಮಾತಾಡಿದ್ದೇವೆ. ಆರ್ಥಿಕ ಸಮಸ್ಯೆಯ ಕಾರಣದಿಂದ ಸರ್ಕಾರ ನಮ್ಮ ಮನವಿಯನ್ನು ಮಂಜೂರು ಮಾಡಿಲ್ಲ. ಮತ್ತೊಮ್ಮೆ, ದೈವಾರಾಧನೆ ಮಾಡುವವರಿಗೆ ಪರಿಹಾರ ನೀಡುವಂತೆ ಮನವಿ ಮಾಡಿಕೊಳ್ಳುತ್ತೆನೆ.