Advertisement

ಸಮುದಾಯಗಳ ಮೀಸಲು ಬೇಡಿಕೆ ಸರ್ಕಾರ ಕಾನೂನಾತ್ಮಕ ಕ್ರಮ: ಕೋಟ ಶ್ರೀನಿವಾಸ ಪೂಜಾರಿ

01:12 PM Feb 11, 2021 | keerthan |

ವಿಜಯಪುರ: ವಿವಿಧ ಸಮುದಾಯಗಳು ಮೀಸಲು ಬೇಡಿಕೆ ಕುರಿತು ನಡೆಯುತ್ತಿರುವ ಹೋರಾಟಗಳ ಬಗ್ಗೆ ಸರ್ಕಾರ ಕಾನೂನಾತ್ಮಕ ಕ್ರಮ ಕೈಗೊಳ್ಳಲಿದೆ ಎಂದು ಧಾರ್ಮಿಕ ದತ್ತಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ಗುರುವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ಅವರ ಭಾವನೆ ಹೇಳಿಕೊಳ್ಳುವ, ಬೇಡಿಕೆ ಮಂಡಿಸುವ ಅವಕಾಶವಿದೆ ಎಂದರು.

ಇದನ್ನೂ ಓದಿ:ಕುರುಬ ಸಮಾವೇಶಕ್ಕೆ ಬಂದ ಜನ ನೋಡಿದ ಸಿದ್ದರಾಮಯ್ಯಗೆ ಕಿರಿಕಿರಿಯಾಗಿದೆ: ಈಶ್ವರಪ್ಪ ವಾಗ್ದಾಳಿ

ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಸರ್ಕಾರದ ವಿರುದ್ಧ ಮಾತನಾಡುವುದು ಸಹಜ. ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಅವರು ಮಾಡುತ್ತಿರುವ ಯಾವ ಪ್ರಯತ್ನವೂ ಫಲ ನೀಡುವುದಿಲ್ಲ ಎಂದರು.

ಸಿದ್ಧರಾಮಯ್ಯ ಅವರ ಹೇಳಿಕೆ ಫಲ ನೀಡುತ್ತದೆ ಎಂದಾದರೆ ಅದು ಕನಕಪುರ ಬಂಡೆ ವಿಷಯದಲ್ಲಿ ಮಾತ್ರ ಎಂದು ತಿರುಗೇಟು ನೀಡಿದರು.

Advertisement

ಇದನ್ನೂ ಓದಿ: “ಹೂ ಈಸ್ ಈಶ್ವರಪ್ಪ, ಐ ಡೋಂಟ್ ಕೇರ್ ಈಶ್ವರಪ್ಪ”: ತಿರುಗೇಟು ನೀಡಿದ ಸಿದ್ದರಾಮಯ್ಯ

ಸ್ವಪಕ್ಷೀಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಹೇಳಿಕೆ ಬಗ್ಗೆ ಮುಖ್ಯಮಂತ್ರಿ ಗಮನ ಹರಿಸುತ್ತಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಆಡಳಿತ ನೀಡುತ್ತಿದ್ದಾರೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next