Advertisement

Kota: ಬಾಲಕಿ ಮೇಲೆ ಸಂಬಂಧಿಯಿಂದ ಅತ್ಯಾಚಾರ: ಆರೋಪಿ ವಶಕ್ಕೆ

12:06 AM Oct 17, 2024 | Team Udayavani |

ಕೋಟ: ಬಾಲಕಿಯ ಮೇಲೆ ಸಂಬಂಧಿಯೊಬ್ಬನಿಂದಲೇ ಅತ್ಯಾಚಾರ ನಡೆದಿದೆ. ಬನ್ನಾಡಿ ನಿವಾಸಿ ಹರೀಶ್‌ ಪೂಜಾರಿ ಪ್ರಕರಣದ ಆರೋಪಿ. ಆರೋಪಿಯು ಸಂತ್ರಸ್ತ ಬಾಲಕಿಯ ಸಂಬಂಧಿಯಾಗಿದ್ದು, ಜುಲೈ28ರಂದು ಉಡುಪಿಯಲ್ಲಿರುವ ಬಾಲಕಿಯ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಅತ್ಯಾಚಾರ ಎಸಗಿದ್ದಾನೆ.

Advertisement

ಆರೋಪಿಯ ಬೆದರಿಕೆಗೆ ಹೆದರಿ ಬಾಲಕಿ ವಿಷಯವನ್ನು ಯಾರಿಗೂ ತಿಳಿಸಿರಲಿಲ್ಲ. ಆದರೆ ಆಕೆ ಗರ್ಭವತಿಯಾದ ಹಿನ್ನೆಲೆ ಘಟನೆ ಬೆಳಕಿಗೆ ಬಂದಿದ್ದು, ಹೆತ್ತವರು ಉಡುಪಿ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next