Advertisement
ಕೋಟ: ಸುತ್ತಲಿನ ಗ್ರಾಮಗಳ ಜನರು ಹೈನುಗಾರಿಕೆಯಲ್ಲಿ ತೊಡಗುವಂತೆ ಮಾಡಬೇಕು ಎನ್ನುವ ಸಂಕಲ್ಪದೊಂದಿಗೆ ಜನ್ಮ ತಾಳಿದ ಕೋಟ ಹಾಲು ಉತ್ಪಾದಕರ ಸಂಘ ಅನಂತರದ ದಿನದಲ್ಲಿ ಸಾವಿರಾರು ಹೈನುಗಾರರನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ. ಹೈನುಗಾರಿಕೆ ಅಭಿವೃದ್ಧಿಗೂ ತನ್ನದೇ ಆದ ಯೋಜನೆಗಳನ್ನು ಅದು ರೂಪಿಸಿದೆ.
1974ರಲ್ಲಿ ಮಾ.5ರಂದು ಕೆನರಾ ಮಿಲ್ಕ್ ಯೂನಿಯನ್‌ನ ಜತೆ-ಜತೆಗೆ ಈ ಸಂಸ್ಥೆ ಸ್ಥಾಪನೆಯಾಗಿತ್ತು. ಕೃಷಿಕ ಚಂದ್ರಶೇಖರ ಐತಾಳರು ಸಂಘದ ಸ್ಥಾಪಕಾಧ್ಯಕ್ಷರು. ಆರಂಭದಲ್ಲಿ ಕೋಟ ಸಹಕಾರಿ ವ್ಯಾವಸಾಯಿಕ ಸಂಘದ ಕಟ್ಟಡದಲ್ಲಿ ಸಂಘ ಆರಂಭವಾದಾಗ 15 ಮಂದಿ ಸದಸ್ಯರು, 50 ಲೀ. ಸಂಗ್ರಹವಾಗುತ್ತಿತ್ತು. ಅನಂತರ 1991-92 ಮತ್ತು 1992-93ನೇ ಸಾಲಿನಲ್ಲಿ ಜಿಲ್ಲೆಯಲ್ಲೇ ಅತೀ ಹೆಚ್ಚು ಹಾಲು ಪೂರೈಸುವ ಸಂಘವಾಗಿ ಬೆಳೆದುನಿಂತು, ಕೋಟತಟ್ಟು, ಹಂದಟ್ಟಿನಲ್ಲಿ ಉಪಕೇಂದ್ರವನ್ನು ಹೊಂದಿದ್ದು ಸಂಘದ ಬೆಳವಣಿಗೆಗೆ ಹಿಡಿದ ಕೈಗನ್ನಡಿಯಾಗಿದೆ. 1996ರಲ್ಲಿ ಹಾಲು ಉತ್ಪಾದಕರ ಸಂಘ ಶ್ರೀಕೃಷ್ಣ ರಸ್ತೆಯಲ್ಲಿ ಜಾಗ ಖರೀದಿಸಿ ಸ್ವಂತ ಕಟ್ಟಡ ರಚಿಸಿತು. 10 ಸಾವಿರಾರು ಹೈನುಗಾರರಿಗೆ ಪ್ರೇರಣೆ
ಸಂಘದ ಅಂದಿನ ಐದು ಗ್ರಾಮಗಳ ವ್ಯಾಪ್ತಿಯಲ್ಲಿ ಈಗ ಏಳೆಂಟು ಹಾಲು ಉತ್ಪಾದಕರ ಸಂಘಗಳಿವೆ. ಸಾವಿರಾರು ಮಂದಿ ಹೈನುಗಾರರು 4500-5000 ಲೀಟರ್ ಹಾಲು ದಿನ ನಿತ್ಯ ಡೇರಿಗೆ ಪೂರೈಕೆ ಮಾಡುತ್ತಿದ್ದಾರೆ.
Related Articles
ಪ್ರಸ್ತುತ ಸಂಘದಲ್ಲಿ 170 ಮಂದಿ ಸದಸ್ಯರಿದ್ದು 500-550 ಲೀ. ಹಾಲು ಸಂಗ್ರಹವಾಗುತ್ತಿದೆ. ಪ್ರಸ್ತುತ ಅಧ್ಯಕ್ಷರಾಗಿ ಪ್ರಕಾಶ್ ಶೆಟ್ಟಿ ಹಾಗೂ ಕಾರ್ಯದರ್ಶಿಯಾಗಿ ಎಸ್. ರಾಜೇಶ್ ಸೇವೆ ಸಲ್ಲಿಸುತ್ತಿದ್ದಾರೆ.
Advertisement
ಖಾಸಗಿಗೆ ಪೈಪೋಟಿ1995-96ನೇ ಸಾಲಿನಲ್ಲಿ ಖಾಸಗಿ ಡೇರಿಯೊಂದು ಉಡುಪಿ ಜಿಲ್ಲೆಯ ಮನೆ-ಮನೆಗೆ ತೆರಳಿ ಹಾಲು ಸಂಗ್ರಹಿಸುತ್ತಿದ್ದ ಕಾರಣದಿಂದಾಗಿ ಹಾ.ಉ.ಸಂಘಗಳಿಗೆ ಸಾಕಷ್ಟು ಹೊಡೆತ ಬಿದ್ದಿದೆ. ಹಾಗೂ ಕೋಟ ಹಾ. ಉ. ಸಂಘದ ಹಾಲಿನ ಪ್ರಮಾಣ ಕೂಡ 700-750ಲೀಟರ್‌ನಿಂದ 100-150 ಲೀಟರ್‌ಗೆ ಕುಸಿದಿತ್ತು. ಈ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಲು ವರ್ಷದಲ್ಲಿ 50 ಸಾವಿರ ರೂ. ಮೌಲ್ಯದ ಹಾಲು ಪೂರೈಸುವವರಿಗೆ ಬೆಳ್ಳಿ ಲೋಟ ಬಹುಮಾನವಾಗಿ ನೀಡಲಾಗುವುದು ಎಂದು ಘೋಷಣೆ ಮಾಡಿ ಮನೆ ಮನೆ ಪ್ರಚಾರ ಮಾಡಿತ್ತು. ಪರಿಣಾಮ ಹಾಲಿನ ಸಂಗ್ರಹ ಅಲ್ಪಾವಧಿಯಲ್ಲೇ 100-150 ಲೀ.ನಿಂದ 800 ಲೀ.ಗೆ ಎರಿಕೆಯಾಗಿತ್ತು. ಇದೇ ವೇಳೆ ಒಕ್ಕೂಟ ಹಾಲಿನ ದರ ಏರಿಸಿದ್ದೂ ಪರಿಣಾಮ ಬೀರಿತ್ತು. ಆರಂಭದಲ್ಲಿ ಕೋಟ ಸುತ್ತಮುತ್ತಲಿನ ಮಣೂರು, ಚಿತ್ರಪಾಡಿ, ಕೋಟತಟ್ಟು, ಗಿಳಿಯಾರು ಹಾಗೂ ಬೇಳೂರು ಗ್ರಾಮದ ಗುಳ್ಳಾಡಿ ಭಾಗದಿಂದ ಇಲ್ಲಿಗೆ ಹಾಲು ಪೂರೈಕೆಯಾಗುತಿತ್ತು. ಹೈನುಗಾರರ ಸಂಖ್ಯೆ ಹೆಚ್ಚಿಸಿ, ಹೆಚ್ಚು ಹಾಲು ಉತ್ಪಾದಿಸುವ ಸಲುವಾಗಿ ಮನೆ-ಮನೆ ಭೇಟಿ ಮುಂತಾದ ಕಾರ್ಯಕ್ರಮಗಳು ನಡೆದಿದ್ದವು. ಪ್ರಶಸ್ತಿ -ಪುರಸ್ಕಾರ
ಸಂಘಕ್ಕೆ 1991-92 ಮತ್ತು 1992-93ನೇ ಸಾಲಿನಲ್ಲಿ ಜಿಲ್ಲೆಯಲ್ಲೇ ಅತೀ ಹೆಚ್ಚು ಹಾಲು ಪೂರೈಸುವ ಸಂಘವೆಂಬ ಪ್ರಶಸ್ತಿ ಸಿಕ್ಕಿದೆ. ಇದರೊಂದಿಗೆ 2 ಬಾರಿ ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಸಂಘ ಎಂಬ ಪ್ರಶಸ್ತಿಯೂ ಸಿಕ್ಕಿದೆ. ಕೆನರಾ ಮಿಲ್ಕ್ ಯೂನಿಯನ್ ಜತೆ-ಜತೆಗೆ ಸ್ಥಾಪನೆಯಾದ ಸಂಸ್ಥೆ ಎನ್ನುವುದು ಹೆಮ್ಮೆಯ ವಿಚಾರ. ಡೈರಿಗಳ ಸಂಖ್ಯೆ ಹೆಚ್ಚಿದ್ದರಿಂದ ಹಾಲಿನ ಪ್ರಮಾಣ, ಲಾಭಾಂಶಗಳು ಕಡಿಮೆಯಾಗಿದೆ. ಸಂಸ್ಥೆಯ ಉತ್ತಮ ಹೆಸರನ್ನು ಉಳಿಸಿಕೊಂಡು, ಹೈನುಗಾರ ಬೆಳವಣಿಗೆಗೆ ಸಹಕಾರ ನೀಡುವ ಜವಬ್ದಾರಿ ನಮ್ಮ ಮೇಲಿದೆ.
-ಪ್ರಕಾಶ್ ಶೆಟ್ಟಿ,ಅಧ್ಯಕ್ಷರು ಅಧ್ಯಕ್ಷರು
ಚಂದ್ರಶೇಖರ ಐತಾಳ, ವೈಕುಂಠ ಹಂದೆ, ಬಿ.ಶೇಷಪ್ಪ ರಾವ್, ನಾರಾಯಣ ಎಂ., ಜಿ.ಎಸ್. ನಾರಾಯಣ ಹೇಳೆì, ಎಂ.ಎಸ್. ನರಸಿಂಹ ಅಡಿಗ, ಪ್ರಕಾಶ್ ಶೆಟ್ಟಿ (ಹಾಲಿ)ಕಾರ್ಯದರ್ಶಿಗಳುಇಬ್ರಾಹಿಂ, ರಾಮಕೃಷ್ಣ ಅಡಿಗ, ರಾಜೇಂದ್ರ ಪ್ರಸಾದ್, ಲಕ್ಷ್ಮೀನಾರಾಯಣ ಮಯ್ಯ, ಜಿ.ರಘುರಾಮ್, ಎಸ್.ರಾಜೇಶ್ ( ಹಾಲಿ ) - ರಾಜೇಶ್ ಗಾಣಿಗ ಅಚ್ಲಾಡಿ