Advertisement
ಉಡುಪಿ ಎಸ್‌ಪಿ ಡಾ| ಅರುಣ್ ಕುಮಾರ್ ನೇತೃತ್ವದಲ್ಲಿ ಕೋಟ ಪೊಲೀಸರು ಹಾಗೂ ಉನ್ನತ ಅಧಿಕಾರಿಗಳನ್ನೊಳಗೊಂಡು ಮೂರು ತಂಡಗಳನ್ನು ರಚಿಸಿದ್ದು ಮುಂಬಯಿ, ಶಿವಮೊಗ್ಗ, ಬೆಂಗಳೂರು ಮೊದ ಲಾದ ಕಡೆಗಳಲ್ಲಿ ತಂಡ ತನಿಖೆ ನಡೆಸುತ್ತಿದೆ.
ಈ ಮನೆಯ ಯಜಮಾನ ಒಂದಷ್ಟು ವ್ಯವಹಾರಗಳನ್ನು ನಡೆಸುತ್ತಿದ್ದು ಇದಕ್ಕೆ ಸಂಬಂಧಿಸಿದಂತೆ ಬೆದರಿಕೆಯೊಡ್ಡಲು ಅಥವಾ ಹಣವನ್ನು ದೋಚುವ ಸಲುವಾಗಿ ಈ ರೀತಿಯ ಸನ್ನಿವೇಶ ಸೃಷ್ಟಿಸಿರ ಬಹುದೇ ಎನ್ನುವ ಅನುಮಾನ ಒಂದು ಕಡೆಯಲ್ಲಿದ್ದರೆ ಮತ್ತೂಂದು ದೃಷ್ಟಿಕೋನದಲ್ಲಿ ದರೋಡೆ ಕೋರರು ಪೊಲೀಸರು, ಐಟಿ ಅಧಿಕಾರಿಗಳ ಸೋಗಿನಲ್ಲಿ ಮನೆಗೆ ಬಂದು ಸಿನಿಮೀಯ ಮಾದರಿ ಯಲ್ಲಿ ಮನೆಯಲ್ಲಿರುವ ಚಿನ್ನ, ಹಣ ಮುಂತಾದ ಸಂಪತ್ತನ್ನು ಲೆಕ್ಕ ನೀಡುವಂತೆ ಹೇಳಿ ಅನಂತರ ಮನೆಯವರನ್ನು ಕಟ್ಟಿ ಹಾಕಿ ದರೋಡೆ ನಡೆಸುವ ಸಂಚನ್ನು ತಂಡ ಹೊಂದಿತ್ತೇ ಎನ್ನುವ ಅನುಮಾನ ಕೂಡ ಸ್ಥಳೀಯ ವಲಯದಲ್ಲಿದೆ. ಕುತೂಹಲ
ಪ್ರಕರಣ ಸಂಪೂರ್ಣ ನಿಗೂಢ ವಾಗಿರುವುದರಿಂದ ಹಾಗೂ ಘಟನೆ ನಡೆದು 5 ದಿನಗಳು ಕಳೆದರೂ ಈ ಬಗ್ಗೆ ಯಾವುದೇ ಮಾಹಿತಿ ಹೊರಬೀಳದಿರುವುದರಿಂದ ತಂಡ ಯಾವ ಉದ್ದೇಶದಿಂದ ಈ ರೀತಿ ಮಾಡಿರಬಹುದು ಎನ್ನುವ ಕುತೂಹಲ ಸಾರ್ವಜನಿಕ ವಲಯದಲ್ಲಿದೆ. ಈ ಬಗ್ಗೆ ತನಿಖೆ ಚಾಲ್ತಿಯಲ್ಲಿದ್ದು ಹೆಚ್ಚಿನ ಮಾಹಿತಿ ದೊರೆತಿಲ್ಲ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಅರುಣ್ ಕುಮಾರ್ ಪತ್ರಿಕೆಗೆ ತಿಳಿಸಿದ್ದಾರೆ.