ಕೋಟ: ಇನ್ಸ್ಟಾಗ್ರಾಮ್ (Instagram Account) ಖಾತೆಯಲ್ಲಿ ಬಂದ ಜಾಹೀರಾತು ನಂಬಿ, ಮನೆಯಲ್ಲಿ ಕುಳಿತು ಮೊಬೈಲ್ ನಲ್ಲಿ ಕೆಲಸ ಮಾಡುವ ವಿಚಾರದಲ್ಲಿ ಯುತಿಯೊಬ್ಬಳು 60 ಸಾವಿರಕ್ಕೂ ಅಧಿಕ ಹಣವನ್ನು ಕಳೆದುಕೊಂಡಿರುವ ಪ್ರಕರಣ ಕೋಟ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಆನ್ ಲೈನ್ ವಂಚನೆ:
ಮನೆಯಲ್ಲಿಯೇ ಇದ್ದು ಮೊಬೈಲ್ ನಲ್ಲಿ ಕೆಲಸ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಜಾಹೀರಾತುದಾರರು ಒಂದು ಲಿಂಕ್ ಅನ್ನು ಅಕ್ಷತಾ(26 ವರ್ಷ) ಎಂಬಾಕೆ ಸ್ವೀಕರಿಸಿದ್ದರು. ಅದರಂತೆ ಅಕ್ಷತಾ ಲಿಂಕ್ ಒತ್ತಿದಾಗ ಅದು ಒಂದು ವಾಟ್ಸಪ್ ನಂಬರ್ ಗೆ ಸಂಪರ್ಕಗೊಂಡಿತ್ತು. ಅದರಲ್ಲಿ ಮೊಬೈಲ್ ನಲ್ಲಿ ಮಾಡುವ ಕೆಲಸದ ಬಗ್ಗೆ ಮಾಹಿತಿ ನೀಡಿದ್ದರು.
ಆರಂಭದಲ್ಲಿ ನೋಂದಣಿ ಶುಲ್ಕ ಎಂದು ಅಕ್ಷತಾ ಪೋನ್ ಪೇ ಮೂಲಕ 100 ರೂ. ಸಂದಾಯ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ನಂತರ ಬೋನಸ್ ಎಂದು 60 ರೂಪಾಯಿ ಅಕ್ಷತಾಗೆ ನೀಡಲಾಗಿತ್ತು. ಹೀಗೆ ಒಂದೇ ದಿನ 1,615 ರೂಪಾಯಿ ಅವರು ಪಾವತಿ ಮಾಡಿದ್ದರು.
ನಂತರ 1/09/2024ರಂದು ಜಾಹೀರಾತುದಾರರು 9 ಆರ್ಡರ್ ಗಳನ್ನು ಮುಗಿಸುವಂತೆ ತಿಳಿಸಿ, ಮೊದಲಿಗೆ 500 ರೂ. ಪಾವತಿಸಿ ಅಕ್ಷತಾ ಕೆಲಸ ಆರಂಭಿಸಿದ್ದು, ಪ್ರತಿಯೊಂದು ಆರ್ಡರ್ ಗೂ ಹಣ ಪಾವತಿಸಲು ಅವರು ತಿಳಿಸಿದ್ದು, ಅದರಂತೆ ಅಕ್ಷತಾ ಒಟ್ಟು 67,330 ರೂಪಾಯಿ ಹಣ ಪಡೆದು ತನಗೆ ವಂಚನೆ ಮಾಡಿರುವುದಾಗಿ ಕೋಟ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.