ಕೋಟ: ಸಹೋದರ ಹಾಗೂ ಆತನ ಪತ್ನಿ ಸೇರಿ ನಿಧನ ಹೊಂದಿದ ತನ್ನ ತಾಯಿಯ ಚಿನ್ನಾಭರಣ ಇತರ ಸೊತ್ತುಗಳನ್ನು ಕಳ್ಳತನ ಮಾಡಿದ್ದಾರೆ ಎಂದು ಅವರ ಪುತ್ರರು ನ್ಯಾಯಾಲಯಕ್ಕೆ ಸಲ್ಲಿಸಿದ ಖಾಸಗಿ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಲ್ಲಿನ ನಿವಾಸಿಗಳಾದ ಉಮಾನಂದ ಶೆಟ್ಟಿ ಹಾಗೂ ಅಭಿನಿ ಶೆಟ್ಟಿ ಪ್ರಕರಣದ ಆರೋಪಿಗಳು. ಇವರ ವಿರುದ್ಧ ಸಹೋದರ ಸದಾನಂದ ಶೆಟ್ಟಿ ಪ್ರಕರಣ ದಾಖಲಿಸಿದ್ದಾರೆ.
ಇವರ ತಾಯಿ ಗಂಗಾ ಡಿ. ಶೆಟ್ಟಯವರು ಅಚಾÉಡಿಯ ಅಡಾರ್‌ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದು,ಅನಾರೋಗ್ಯದಿಂದ 2023 ಫೆ. 17ರಂದು ಮೃತಪಟ್ಟಿದ್ದಾರೆ. ತಾಯಿಯ ಅಂತ್ಯ ಸಂಸ್ಕಾರದ ಅನಂತರ ದಯಾನಂದ ಶೆಟ್ಟಿ ಮತ್ತು ಸಹೋದರರು ಸೇರಿಕೊಂಡು ಮನೆಯಲ್ಲಿದ್ದ ತಾಯಿಗೆ ಸಂಬಂ ಧಿಸಿದ ಚರ ಸೊತ್ತು, ಎಲ್.ಐ.ಸಿ. ಬಾಂಡ್, ಚಿನ್ನಾಭರಣ ಮತ್ತು ನಗದು ಸೇರಿದಂತೆ ಸುಮಾರು ಒಂದು ಕೋಟಿ ರೂ.ಗೂ ಮಿಕ್ಕಿ ಮೌಲ್ಯದ ಸೊತ್ತುಗಳು ಹಾಗೂ ಎರಡು ಲಕ್ಷ ರೂ. ನಗದನ್ನು ಕಳವು ಮಾಡಿದ್ದಾಗಿ ದೂರಲಾಗಿದೆ.