Advertisement
ಮಂದಾರ್ತಿ ಸಮೀಪದ ನಡೂರು ನಿವಾಸಿ ಪವನ್ ಅಮೀನ್ ಮತ್ತು ನಾಡ ಗುಡ್ಡೆಯಂಗಡಿಯ ವೀರೇಂದ್ರ ಅಚಾರ್ಯ ಬಂಧಿತರು. ಬಂಧಿತರನ್ನು ರವಿವಾರ ರಾತ್ರಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಅವ ರಿಗೆ ಫೆ. 15ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಪವನ್ ಮತ್ತು ವೀರೇಂದ್ರ ಅವರಿಗೆ ಆರೋಪಿಗಳಾದ ಹರೀಶ್ ರೆಡ್ಡಿ, ರಾಜ ಶೇಖರ ರೆಡ್ಡಿ, ಮಹೇಶ ಗಾಣಿಗ ಮತ್ತು ಸಂತೋಷ ಕುಂದರ್ ಮುಂತಾದವರೊಂದಿಗೆ ಹಲವು ವರ್ಷದಿಂದ ಒಡನಾಟವಿತ್ತು. ಜ.26ರಂದು ಕೊಲೆ ನಡೆಸಿದ ಬಳಿಕ ಎಲ್ಲ ಪ್ರಮುಖ ಅರೋಪಿಗಳು ಪವನ್‌ಗೆ ಸೇರಿರುವ ಹೆಬ್ರಿಯ ಕುಚ್ಚಾರಿನ ಮನೆಯಲ್ಲಿ ರಾತ್ರಿ ತಂಗಿದ್ದರು. ಜ. 27ರಂದು ಬೆಳಗ್ಗೆ ಹರೀಶ್ ರೆಡ್ಡಿಯು ಪವನ್‌ಗೆ ಕರೆ ಮಾಡಿ ಒಂದು ಸಿಮ್ ಮತ್ತು ಮೊಬೈಲ್, ಹಣ ಮತ್ತು ಕೆಲವು ವಸ್ತುಗಳನ್ನು ಕಳುಹಿಸಿ ಕೊಡಲು ಕೇಳಿದ್ದ. ಅವುಗಳನ್ನು ಪವನ್ ಅಮೀನ್, ಪ್ರಣವ್ ಭಟ್ ಎಂಬಾ ತನ ಮೂಲಕ ಅರೋಪಿಗಳಿಗೆ ತಲುಪಿಸಿದ್ದಾನೆ. ಅನಂತರ ರಾತ್ರಿ ವೀರೇಂದ್ರ ಅಚಾರ್ಯನೊಂದಿಗೆ ಸೇರಿ ಕಾರಿನ ವ್ಯವಸ್ಥೆ ಮಾಡಿಕೊಟ್ಟು ಅರೋಪಿಗಳನ್ನು ಅಗುಂಬೆ, ಎನ್.ಅರ್.ಪುರ, ಮಲ್ಲಂದೂರು ಮುಂತಾದೆಡೆಯ ತನ್ನ ಸಂಬಂಧಿಕರ ಮನೆಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದಾನೆ. ಜ. 28ರಂದು ಅರೋಪಿಗಳನ್ನು ಮಲ್ಲಂದೂರಿನಲ್ಲಿಯೆ ಬಿಟ್ಟು ವೀರೇಂದ್ರನೊಂದಿಗೆ ಕಾರಿನಲ್ಲಿ ವಾಪಸ್ ಬರುವಾಗ, ಹರೀಶ್ ರೆಡ್ಡಿ ಕೊಟ್ಟ ಮೊಬೈಲ್ ಮತ್ತು ಇತರ ವಸ್ತುಗಳನ್ನು ಬಚ್ಚಿಡಲು ಸಹಕರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಪರಾರಿಯಾಗಲು ಉಪಯೋಗಿಸಿದ್ದ ಕಾರು, ಮೊಬೈಲ್ ಮತ್ತು ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
Related Articles
ಸಂಬಂಧಿಯೋರ್ವರ ಮೂಲಕ ಪವನ್‌ಗೆ ಹಲವು ವರ್ಷಗಳ ಹಿಂದೆ ಹರೀಶ್ ರೆಡಿªಯ ಸಂಪರ್ಕವಾಗಿತ್ತು ಹಾಗೂ ಮೂರು ವರ್ಷಗಳಿಂದ ಆಗಾಗ ಜತೆ ಸೇರುತ್ತಿದ್ದರು. ಜೋಡಿ ಕೊಲೆ ನಡೆಸಿದ ಬಳಿಕ ಪರಾರಿಯಾಗಲು ಹರೀಶ್ ರೆಡ್ಡಿ ಹಲವರ ಬಳಿ ನೆರವು ಯಾಚಿಸಿದ್ದು, ಪವನ್‌ಗೂ ಕರೆ ಮಾಡಿ ನೆರವು ಕೋರಿದ್ದ. ಹೀಗಾಗಿ ವೀರೇಂದ್ರ ಆಚಾರ್ಯನೊಂದಿಗೆ ಸೇರಿ ಸಹಾಯ ಮಾಡಿದ್ದಾನೆ ಎಂದು ತನಿಖೆಯಿಂದ ತಿಳಿದು ಬಂದಿದೆ.
Advertisement
ಇನ್ನೂ ಹಲವರ ಬಂಧನಪ್ರಕರಣದ ಆರೋಪಿಗಳಿಗೆ ಪರಾರಿಯಾಗಲು ಹಾಗೂ ಅಡಗಿಕೊಳ್ಳಲು ಇನ್ನೂ ಹಲವು ಮಂದಿ ಸಹಾಯ ನೀಡಿದ್ದು, ಅವರನ್ನು ಶೀಘ್ರದಲ್ಲೇ ಬಂಧಿಸುವ ಸಾಧ್ಯತೆಯಿದೆ.