Advertisement
ಪ್ರಮುಖ ಆರೋಪಿಗಳಲ್ಲಿ ಒಬ್ಬ ನಾದ ಚಂದ್ರಶೇಖರ್ ರೆಡ್ಡಿ ಹಾಗೂ ಮತ್ತೂಬ್ಬ ಆರೋಪಿ ಸುಜಯ್‌ಎಂಬಾ ತ ನಿಗೆ ಫೆ.20ರ ವರೆಗೆ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ. ಇತರ ಆರೋಪಿಗಳಾದ ಚಂದ್ರ ಶೇಖರ್ ರೆಡ್ಡಿ, ಹರೀಶ್ ರೆಡ್ಡಿ, ಮೆಡಿಕಲ್ ರವಿ, ಮಹೇಶ್ ಗಾಣಿಗ, ರವಿಚಂದ್ರ, ಜಿ.ಪಂ. ಬಿಜೆಪಿ ಸದಸ್ಯ ರಾಘವೇಂದ್ರ ಕಾಂಚನ್, ಅಭಿಷೇಕ (ಅಭಿ ಪಾಲನ್), ಹನೆಹಳ್ಳಿ ನಿವಾಸಿ ಸಂತೋಷ್ ಕುಂದರ್, ನಾಗರಾಜ ರೊಟ್ಟಿ, ಶಂಕರ್ ಮೊಗವೀರ, ರತೀಶ್ ಎಂ. ಕರ್ಕೇರ, ಭದ್ರಾವತಿಯ ನಿವಾಸಿ, ವಿದ್ಯಾರ್ಥಿ ಪ್ರಣವ್ ರಾವ್, ಪೊಲೀಸ್ ಸಿಬಂದಿಯಾದ ಪವನ್ ಅಮೀನ್ ಮತ್ತು ವೀರೇಂದ್ರ ಆಚಾರ್ಯ ಅವರಿಗೆ ಮಾ.1ರ ವೆರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಲಾಗಿದೆ. ಶುಕ್ರವಾರ ಮಧ್ಯಾಹ್ನದ ವೇಳೆಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾ ಗಿದ್ದು, ಈ ವೇಳೆ ನ್ಯಾಯಾಲಯದ ಹೊರಗೆ ಭಾರೀ ಜನ ಸೇರಿದ್ದರು.
ಅರ್ಜಿ ಶನಿವಾರ ವಿಚಾರಣೆ
ಈ ಪೈಕಿ ಪವನ್ ಅಮೀನ್, ವೀರೇಂದ್ರ ಆಚಾರ್ಯ ಹಾಗೂ ಪ್ರಣವ್ ರಾವ್‌ಗೆ ಜಾಮೀನು ನೀಡಬೇಕು ಎಂದು ಅವರ ವಕೀಲರಾದ ರವಿಕಿರಣ್ ಮುಡೇìಶ್ವರ ವಾದಿಸಿದ್ದು, ಇದಕ್ಕೆ ಸಹಾಯಕ ಸರಕಾರಿ ಅಭಿಯೋಜಕಿ ಸುಮಂಗಲಾ ನಾಯ್ಕ ಆಕ್ಷೇಪಣೆ ಸಲ್ಲಿಸಿದ್ದಾರೆ. ಇದರ ವಾದವನ್ನು ನ್ಯಾಯಾಧೀಶರು ಶನಿವಾರಕ್ಕೆ ಮುಂದೂಡಿದ್ದಾರೆ.