ಕೋಟ: ಇಲ್ಲಿನ ಶ್ರೀ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇಗುಲದ ವಾರ್ಷಿಕ ಜಾತ್ರೆ ಜ. 10 ಮತ್ತು 11ರಂದು ಜರಗಿತು.
ಜ. 10ರಂದು ಬೆಳಗ್ಗೆ ನಾಗದೇವರ ಹಾಲಿಟ್ಟು ಸೇವೆ, ರಾತ್ರಿ ಗೆಂಡಸೇವೆ, ಅಪರಾಹ್ನ ಹಾಗೂ ರಾತ್ರಿ ಗೆಂಡಸೇವೆ ಅನಂತರ ಅನ್ನಸಂತರ್ಪಣೆ, ಜ. 11ರಂದು ಬೆಳಗ್ಗೆ 6ಕ್ಕೆ ಢಕ್ಕೆ ಬಲಿ, ದರ್ಶನ ಸೇವೆ, 9.30ಕ್ಕೆ ತುಲಾಭಾರ ಸೇವೆ, ಅಪರಾಹ್ನ ಅನ್ನಸಂತರ್ಪಣೆ, ರಾತ್ರಿ ಯಕ್ಷಗಾನ ಬಯಲಾಟ ನಡೆಯಿತು. ಗೆಂಡಸೇವೆ ಹಾಗೂ ತುಲಾಭಾರ ಸೇವೆಯಲ್ಲಿ ಸಾವಿರಾರು ಮಂದಿ ಭಕ್ತರು ಹರಕೆ ಸಲ್ಲಿಸಿದರು.
ಟ್ರಾವೆಲ್ ಲಿಂಕ್ ಫ್ರೆಂಡ್ಸ್ ಆಶ್ರಯದಲ್ಲಿ ಗೆಂಡಸೇವೆಯಂದು ರಾತ್ರಿ ಸಂಗೀತ ರಸಮಂಜರಿ ಹಾಗೂ ಅಮೃತ ಯುವಕ ಸಂಘ ಕದ್ರಿಕಟ್ಟು ವತಿಯಿಂದ ಎರಡೂ ದಿನ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಜ. 11ರಂದು ಮುಂಜುಶ್ರೀ-ವಿನಾಯಕ ಇವೆಂಟ್ಸ್ ಗಿಳಿಯಾರು ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್, ವ್ಯವಸ್ಥಾಪನ ಸಮಿತಿ ಸದಸ್ಯರಾದ ಜ್ಯೋತಿ ಬಿ. ಶೆಟ್ಟಿ, ಸುಶೀಲ ಸೋಮಶೇಖರ್, ಸುಂದರ ಕೆ., ರಾಮದೇವ ಐತಾಳ, ಸತೀಶ್ ಹೆಗ್ಡೆ, ಸುಬ್ರಾಯ ಆಚಾರ್ಯ, ಚಂದ್ರ ಪೂಜಾರಿ ಹಾಗೂ ಪ್ರಧಾನ ಅರ್ಚಕರು, ಅರ್ಚಕ ಪ್ರತಿನಿಧಿಗಳು, ಊರಿನ ಗಣ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ: ಕಾಸರಗೋಡು ಜಿಲ್ಲೆಯಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ… ತಡೆಗೆ ತುರ್ತು ಕ್ರಮ