Advertisement

ಕೆಎಸ್‌ಓಯು ಯುಜಿಸಿ ಮಾನ್ಯತೆ

07:00 AM Aug 10, 2018 | Team Udayavani |

ಬೆಂಗಳೂರು:ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯಕ್ಕೆ(ಕೆಎಸ್‌ಓಯು)2018-19 ರಿಂದ 2022-23 ರವರಗೆ ಮಾನ್ಯತೆ ನೀಡಿ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಆದೇಶ ಹೊರಡಿಸಿದೆ.

Advertisement

ಹದಿನೇಳು ಆಯ್ದ ಕೋರ್ಸ್‌ಗಳಿಗೆ ಸೀಮಿತವಾಗಿ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯಕ್ಕೆ ಮಾನ್ಯತೆ ನೀಡಿರುವ ಯುಜಿಸಿ, ಈ ಶೈಕ್ಷಣಿಕ ವರ್ಷದಿಂದಲೇ ತರಗತಿ ಆರಂಭಿಸಲು ಸೂಚಿಸಿದೆ.

ಅಕ್ರಮಗಳ ಆರೋಪ, ಬೌಗೋಳಿಕ ವ್ಯಾಪ್ತಿ ಮೀರಿ ಅಧ್ಯಯನ ಕೇಂದ್ರ ತೆರೆಯಲು ಅನುಮತಿ ಕೊಟ್ಟಿದ್ದರು. ದೂರ ಶಿಕ್ಷಣ ಪದ್ಧತಿಗೆ ಒಳಪಡದ ಕೆಲವು ಕೋರ್ಸ್‌ಗಳಿಗೆ ಅನುಮತಿ ಹಿನ್ನೆಲೆಯಲ್ಲಿ 2012-13 ರ ಸಾಲಿನಿಂದ ಕೆಎಸ್‌ಓಯು ಮಾನ್ಯತೆ ಯುಜಿಸಿ ರದ್ದುಪಡಿಸಿತ್ತು.

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಯುಜಿಸಿ ಮಾನ್ಯತೆ ನೀಡಿದ್ದು  ಈ ಶೈಕ್ಷಣಿಕ ವರ್ಷದಿಂದಲೇ ತರಗತಿ ಆರಂಭಿಸಲು ಸೂಚಿಸಿದೆ. ಅದಕ್ಕಾಗಿ ಕೇಂದ್ರ ಸಚಿವ ಪ್ರಕಾಶ್‌ ಜಾಬ್ಡೇಕರ್‌, ಯುಜಿಸಿ ಅಧ್ಯಕ್ಷ ಪ್ರೊ.ಡಿ.ಪಿ.ಸಿಂಗ್‌ ಅವರನ್ನು ಅಭಿನಂಧಿಸುತ್ತೇನೆ.
– ಜಿ.ಟಿ.ದೇವೇಗೌಡ, ಉನ್ನತ ಶಿಕ್ಷಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next