Advertisement

ಕೊರಟಗೆರೆ: ಕೆನರಾ ಬ್ಯಾಂಕಿನ ಸಿಸಿಟಿವಿಯೇ ಮಾಯ; ಕಳ್ಳತನಕ್ಕೆ ಯತ್ನ

02:47 PM May 25, 2022 | Team Udayavani |

ಕೊರಟಗೆರೆ: ಕೆನರಾ ಬ್ಯಾಂಕಿನ ಕಚೇರಿ ಮತ್ತು ಆವರಣದ ಸಿಸಿ ಟಿವಿಯೇ ಮಾಯವಾಗಿದ್ದು, ಬ್ಯಾಂಕಿನ ಕಟ್ಟಡಕ್ಕೆ ಕಾಂಪೌಂಡು ಮತ್ತು ಕಿಟಿಕಿಯೇ ಇಲ್ಲದಾಗಿದೆ.

Advertisement

ಎಟಿಎಂ ಕೇಂದ್ರಕ್ಕೆ ಕಾವಲುಗಾರನ ಭದ್ರತೆಯ ಜತೆ ಬಾಗಿಲು ಇಲ್ಲದಿರುವ ಪರಿಣಾಮ ರಾತ್ರೋರಾತ್ರಿ ಕಳ್ಳನೋರ್ವ ಎಟಿಎಂ ಕೇಂದ್ರದೊಳಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ನಡೆದಿದೆ.

ಬೈರೇನಹಳ್ಳಿ ಗ್ರಾಮದ ಕೆನರಾ ಬ್ಯಾಂಕಿನ ಕಟ್ಟಡವು ಶಿಥಿಲವಾಗಿದ್ದು, ಕೌಂಪೌಂಡು ಒಡೆದು ವರ್ಷಗಳು ಕಳೆದಿವೆ. ಬ್ಯಾಂಕಿನ ಕಿಟಕಿಗಳು ಮುರಿದು ಬಿದ್ದಿವೆ. ಇನ್ನೂ ಬ್ಯಾಂಕಿನ ಸುತ್ತಮುತ್ತ ಗಿಡಗಳು ಬೆಳೆದುನಿಂತಿವೆ. ಬ್ಯಾಂಕಿನ ಆವರಣದಲ್ಲಿ ಕಸ ಕಡ್ಡಿಯಿಂದ ದುರ್ವಾಸನೆ ಬೀರುತ್ತಿದ್ದರೂ ಸಹ ಗ್ರಾ. ಪಂ. ಮತ್ತು ಬ್ಯಾಂಕಿನ ಅಧಿಕಾರಿವರ್ಗ ಮೌನವಹಿಸಿವೆ.

ಕೆನರಾ ಬ್ಯಾಂಕಿನ ಆವರಣದಲ್ಲಿಯೇ ಕೆನರಾ ಬ್ಯಾಂಕಿನ ಎಟಿಎಂ ಕೇಂದ್ರವಿದೆ. ಎಟಿಎಂ ಕೇಂದ್ರಕ್ಕೆ ಬಾಗಿಲು ಮತ್ತು ಭದ್ರತೆ ಎರಡು ಇಲ್ಲದಾಗಿದೆ. ಬ್ಯಾಂಕಿನ ಹೊರಗಡೆಯ ಸಿಸಿಟಿವಿ ಕೆಟ್ಟುಹೋಗಿದೆ. ಕಳ್ಳತರ ತಂಡವು ಇದನೆಲ್ಲ ನೋಡಿಯೇ ಬ್ಯಾಂಕಿನ ಹಿಂಬದಿಯಿಂದ ವಿದ್ಯುತ್ ಕೇಬಲ್ ಮತ್ತು ಸಿಸಿಟಿವಿಯನ್ನು ಒಡೆದು ಕಳ್ಳತನಕ್ಕೆ ಯತ್ನಿಸಿದ್ದಾರೆ.

ಬೈರೇನಹಳ್ಳಿ ಕೆನರಾ ಬ್ಯಾಂಕಿನ ವ್ಯವಸ್ಥಾಪಕ ಮಂಜುನಾಥ ಮಾತನಾಡಿ, ಎಟಿಎಂ ಜವಾಬ್ದಾರಿ ಎಪ್‌ಎಸ್‌ಎಸ್ ಕಂಪನಿಗೆ ನೀಡಲಾಗಿದೆ. ಏನೇ ಸಮಸ್ಯೆ ಆದರೂ ಅದಕ್ಕೆ ಅವರೇ ಹೋಣೆ. ಬಾಗಿಲು ಮತ್ತು ಕಾವಲುಗಾರ ಇಲ್ಲದೇ ಸಮಸ್ಯೆ ಸೃಷ್ಟಿಯಾಗಿದೆ. ನಮ್ಮ ಬ್ಯಾಂಕಿನ ಕೌಂಪೌಂಡು ಮತ್ತು ಕಿಟಿಕಿ ರಿಪೇರಿಯ ಬಗ್ಗೆ ಕಟ್ಟಡದ ಮಾಲೀಕರಿಗೆ ತಿಳಿಸಿದ್ದೇನೆ. ಬ್ಯಾಂಕಿನ ಹೊರಗಡೆಯ ಸಿಸಿಟಿವಿ ಕ್ಯಾಮರಾ ವನ್ನು ತಕ್ಷಣ ಸರಿಪಡಿಸುತ್ತೇವೆ ಎಂದು ಹೇಳಿದರು.

Advertisement

ಸ್ಥಳಕ್ಕೆ ಕೊರಟಗೆರೆ ಪಿಎಸೈ ನಾಗರಾಜು, ಮಂಜುಳ, ಎಎಸೈ ಗೋವಿಂದನಾಯ್ಕ ನೇತೃತ್ವದ ಪೊಲೀಸರ ತಂಡ ಸಿಸಿಟಿವಿ ಕ್ಯಾಮರಾವನ್ನು ಪರಿಶೀಲನೆ ನಡೆಸಿದ್ದಾರೆ. ನಂತರ ತುಮಕೂರು ಜಿಲ್ಲೆಯ ಶ್ವಾನದಳದ ತಂಡ ಭೇಟಿ ನೀಡಿದೆ. ಕೊರಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next