ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಅಂತಾರಾಷ್ಟ್ರೀಯ ಮಟ್ಟದ ಯಶಸ್ಸು ಕಂಡಿದ್ದು ಹಳೆಯ ವಿಚಾರ. ಅದರಲ್ಲಿನ ನಾಟುನಾಟು ಹಾಡನ್ನು ಮೆಚ್ಚಿಕೊಳ್ಳದವರೇ ಇಲ್ಲ. ಆ ಹಾಡಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿಯೂ ಬಂದಿದೆ.
ಇದೀಗ ಭಾರತದಲ್ಲಿರುವ ದ.ಕೊರಿಯಾ ರಾಯಭಾರ ಕಚೇರಿ ಸಿಬ್ಬಂದಿ ಕೂಡ ಇದಕ್ಕೆ ಹೆಜ್ಜೆ ಹಾಕಿದ್ದಾರೆ. ರಾಯಭಾರ ಕಚೇರಿಯ ಆವರಣದಲ್ಲಿರುವ ಹುಲ್ಲುಹಾಸಿನ ಮೇಲೆ ಈ ಹಾಡಿಗೆ ಸ್ವತಃ ರಾಯಭಾರಿ ಚಾಂಗ್ ಜೇ ಬಾಕ್ ಕೂಡ ಕಾಲನ್ನು ಆಡಿಸಿದ್ದಾರೆ.
“ನಿಮಗೆ ನಾಟು ಗೊತ್ತಾ? ಕೊರಿಯ ರಾಯಭಾರ ಕಚೇರಿಯ ನಾಟು ನಾಟುವನ್ನು ನಿಮ್ಮೊಂದಿಗೆ ಖುಷಿಯಿಂದ ಹಂಚಿಕೊಳ್ಳುತ್ತಿದ್ದೇವೆ’ ಎಂದು ರಾಯಭಾರ ಕಚೇರಿಯಿಂದಲೇ ಟ್ವೀಟ್ ಮಾಡಲಾಗಿದೆ.
ಇ ವಿಡಿಯೋ ನೋಡಿ ಪ್ರಧಾನಿ ನರೇಂದ್ರ ಮೋದಿ, ಸಚಿವರಾದ ರಿಜಿಜು, ಅನುರಾಗ್ ಠಾಕೂರ್ ಸೇರಿ ಅನೇಕರು ಖುಷಿಯಾಗಿ ಮೆಚ್ಚುಗೆ ಸೂಚಿಸಿದ್ದಾರೆ.