ಕೊರಟಗೆರೆ; ಮೂತ್ರ ವಿಸರ್ಜನೆಗೆ ಮನೆಯಿಂದ ಹೊರಗಡೆ ಬಂದ ಇಬ್ಬರೂ ಬಾಲಕರ ಮೇಲೆ ಚುರತೆ ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ಕೊರಟಗೆರೆ ತಾಲ್ಲೂಕಿನ ಕೋಳಾಲ ಹೋಬಳಿಯ ಇರಕಸಂದ್ರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕೆಂಪರಾಜು ಮಕ್ಕಳಾದ ಚೇತನ್ ಹಾಗೂ ಧನುಷ್ ಇಬ್ಬರೂ ಇಂದು ಬೆಳಿಗ್ಗೆ ಮೂತ್ರ ವಿಸರ್ಜನೆಗೆ ಹೊರಗಡೆ ಬಂದಾಗ ಚಿರತೆ ಇಬ್ಬರೂ ಬಾಲಕರ ಮೇಲೆ ಎರಗಿ ಗಾಯಗೊಳಿಸಿದೆ.
ಈ ವೇಳೆಯಲ್ಲಿ ಬಾಲಕರು ಕಿರುಚಿ ಕೊಂಡಾಗ ಮನೆಯವರು ಹಾಗೂ ಸ್ಥಳೀಯರು ಮಕ್ಕಳನ್ನು ರಕ್ಷಣೆ ಮಾಡಿ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದಾರೆ.ಮಕ್ಕಳ ಕಾಲಿನ ಭಾಗಕ್ಕೆ ಪರಚಿದ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಚಿರತೆ ಮಕ್ಕಳ ಮೇಲೆ ದಾಳಿ ಮಾಡಿದ ಘಟನಾ ಸ್ಥಳಕ್ಕೆ ಕೊರಟಗೆರೆ ವಲಯ ಅರಣ್ಯಾಧಿಕಾರಿ ಸುರೇಶ್ ಭೇಟಿ ನೀಡಿದ್ದರು.
ನಂತರ ಮಾತನಾಡಿ ಈಗಾಗಲೇ ಒಂದು ಬೋನ್ ಇಡಲಾಗಿದ್ದು ಮತ್ತೊಂದು ಬೋನ್ ಸಹ ಇಂದು ಇಡಲಾಗಿದೆ. ಚಿರತೆ ಹಿಡಿಯಲು ಬೇಕಾದ ಅಗತ್ಯವಾದ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಉದಯವಾಣಿ ಪತ್ರಿಕೆಗೆ ಮಾಹಿತಿ ನೀಡಿದರು.
ಇದನ್ನೂ ಓದಿ: ಜಮ್ಮು-ಕಾಶ್ಮೀರ: ಪಾಕಿಸ್ತಾನದ ಉಗ್ರ, ಜೈಶ್ ಕಮಾಂಡರ್‌ನ ಮನೆ ಧ್ವಂಸ