ಕೊರಟಗೆರೆ: ತಾಲೂಕಿನ ರೈತರ ಅಭ್ಯುದಯಕ್ಕಾಗಿ ಜಾರಿ ಮಾಡಿರುವ ಕೇಂದ್ರ ಸರ್ಕಾರದ ರೈತರ ಪಿಂಚಣಿ ಯೋಜನೆಗೆ ಅರ್ಹ ರೈತ ಫಲಾ ನುಭವಿಗಳು ನೋಂದಾಯಿಸಿಕೊಳ್ಳ ಬೇಕೆಂದು ಸಹಾಯಕ ಕೃಷಿ ನಿರ್ದೇಶಕ ಎಚ್. ನಾಗರಾಜು ಅವರು ತಿಳಿಸಿದರು.
ರಾಷ್ಟ್ರೀಯ ಕೃಷಿ ಪಿಂಚಣಿ ಆಂದೋಲನ ದಿನದ ಅಂಗವಾಗಿ ಏರ್ಪಡಿಸಿದ್ದ ರೈತರ ಪಿಂಚಣಿ ಯೋಜನೆ ಅರಿವು ಜಾಥಾ ಉದ್ಘಾಟಿಸಿ ಮಾತನಾಡಿದರು.
3 ಸಾವಿರ ರೂ. ಕನಿಷ್ಠ ನಿಶ್ಚಿತ ಪಿಂಚಣಿ: ತಾಲೂಕಿನಲ್ಲಿ 2 ಹೆಕ್ಟೇರ್‌ವರೆಗೆ ಕೃಷಿ ಭೂಮಿ ಹೊಂದಿರುವ ಸಣ್ಣ ಮತ್ತು ಅತೀ ಸಣ್ಣ ರೈತರು ಈ ಯೋಜನೆ ಲಾಭ ಪಡೆಯಲು ಅರ್ಹರಾಗಿದ್ದು, ಆಸಕ್ತ 18 ವರ್ಷದಿಂದ 40 ವರ್ಷ ವಯೋಮಿತಿ ಯೊಳಗಿನ ಭೂದಾಖಲೆಗಳಲ್ಲಿ ಹೆಸರು ಹೊಂದಿ ರುವ ರೈತರು ಮಾಸಿಕ 15 ಸಾವಿರ ರೂ. ಆದಾಯ ಅಥವಾ ಅದಕ್ಕಿಂತ ಕಡಿಮೆ ಇರುವ ರೈತರು ವಯಸ್ಸಿಗೆ ಅನುಗುಣವಾಗಿ ತಿಂಗಳಿಗೆ 55 ರೂ.ನಿಂದ 200 ರೂ. ಮಾಸಿಕ ಕಂತುಗಳನ್ನು 60ನೇ ವರ್ಷ ವಯಸ್ಸಿನವರೆಗೆ ಪಾವತಿಸಿದಲ್ಲಿ 60ನೇ ವರ್ಷದ ನಂತರ ಪ್ರತಿ ತಿಂಗಳು 3 ಸಾವಿರ ರೂ. ಕನಿಷ್ಠ ನಿಶ್ಚಿತ ಪಿಂಚಣಿ ಜೀವಮಾನದವರೆಗೆ ಪಡೆಯ ಬಹುದಾಗಿದೆ ಎಂದು ಹೇಳಿದರು.
ಅನುಕೂಲ ಪಡೆಯಿರಿ: ಅರ್ಹ ರೈತರು ಆಧಾರ್ ಕಾರ್ಡ್, ಪಹಣಿ ಮತ್ತು ಬ್ಯಾಂಕ್ ಪಾಸ್ ಪುಸ್ತಕ ದೊಂದಿಗೆ ಹತ್ತಿರದ ಸಾಮಾನ್ಯ ಸೇವಾ ಕೇದ್ರಗಳಿಗೆ ಭೇಟಿ ನೀಡಿ ನೋಂದಾ ಯಿಸಿಕೊಳ್ಳಬಹುದು. ನಿರಂತರ 5 ವರ್ಷ ಹಣ ಪಾವತಿಸಿದ ರೈತರು ಬೇಡವೆನ್ನಿಸಿದರೆ ಯೋಜನೆಯಿಂದ ಹೊರಬರಲು ಅವಕಾಶವಿದ್ದು, ಉಳಿತಾಯ ಯೋಜನೆಗೆ ಸಮಾನಾದ ಬಡ್ಡಿ ಸೇರಿಸಿ ಒಟ್ಟು ಹಣ ವಾಪಸ್ ನೀಡಲಾಗುತ್ತದೆ ಪ್ರೀಮೀಯಂ ಮೊತ್ತದಲ್ಲಿ ಶೇ. 50ರಷ್ಟು ಪಾಲಿನ ಮೊತ್ತವನ್ನು ಕೇಂದ್ರ ಸರ್ಕಾರ ಪಾವತಿಸಲಿದ್ದು, ಅರ್ಹ ರೈತರು ಅನುಕೂಲ ಪಡೆಯಬೇಕು ಎಂದು ತಿಳಿಸಿದರು. ಕೃಷಿ ಸಹಾಯಕ ಅಧಿಕಾರಿಗಳಾದ ನಾರಾಯಣಪ್ಪ, ರುಕ್ಷಿ ್ಮಣಿ, ವಿಭಾ, ತಾರಕ್. ಮಹೇಶ್, ತಾಲೂಕಿನ ರೈತರು ಭಾಗವಹಿಸಿದ್ದರು.