Advertisement
ವೈದ್ಯರಿಗೆ ರಾತ್ರಿ ಸಮಯದಲ್ಲಿ ಕೇಂದ್ರ ಸ್ಥಾನದಲ್ಲಿ ಉಳಿದುಕೊಳ್ಳಲು ಸರ್ಕಾರವು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದರು ಸಹ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಯಾವುದೇ ವೈದ್ಯರಾಗಲಿ, ಸಿಬ್ಬಂದಿಗಳಾಗಲಿ ವಾಸವಿಲ್ಲ. ಕಾರಣ, ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ಈ ಹಿಂದೆ ನಿರ್ಮಾಣ ಮಾಡಲಾಗಿದ್ದ ವಸತಿ ಗೃಹಗಳು ಮೂಲಭೂತ ಸೌಕರ್ಯದಿಂದ ವಂಚಿತಗೊಂಡು ಸುಮಾರು 15 ವರ್ಷಗಳಿಂದ ಎಲ್ಲಾ ಕೊಠಡಿಗಳು ಶಿಥಿಲಗೊಂಡಿದೆ ಎಂದು ಮುಖ್ಯ ವೈದ್ಯರಿಂದ ಮಾಹಿತಿ ತಿಳಿದು ಬಂದಿದೆ..
Related Articles
ಸರ್ಕಾರಿ ಆಸ್ಪತ್ರೆ ಮತ್ತು ವೈದ್ಯರಿಗೆ ಬೇಕಾದ ಮೂಲಭೂತ ಸೌಕರ್ಯ :
-ಬಹುಮುಖ್ಯವಾಗಿ ವೈದ್ಯರಿಗೆ ಹಾಗೂ ಸಿಬ್ಬಂದಿಗಳಿಗೆಸೌಕರ್ಯದ ವ್ಯವಸ್ಥೆ ಇರುವ ವಸತಿ ಗೃಹಗಳ ಅವಶ್ಯಕತೆ ಇದೆ..
-ಅಂಗವಿಕಲರಿಗೆ ಬೇಕಾದ ವಿಶೇಷ ಶೌಚಾಲಯದ ವ್ಯವಸ್ಥೆ.
-ಆಸ್ಪತ್ರೆಗೆ ಬರುವ ಹೊರ ರೋಗಿಗಳಿಗೆ ಕುಡಿಯುವ ನೀರಿನ ಶುದ್ಧ ಘಟಕಗಳು ಹಾಗೂ ಬಿಸಿ ನೀರಿನ ವ್ಯವಸ್ಥೆ..
-ಆಸ್ಪತ್ರೆಯಲ್ಲಿ ಖಾಯಂ ಅರವಳಿಕೆ ತಜ್ಞರ ಅವಶ್ಯಕತೆ ಇದೆ..
-ಎಕ್ಸ್ ರೇ ತೆಗೆಯಲು ಸಿಬ್ಬಂದಿ ಅವಶ್ಯಕತೆ ಹೆಚ್ಚಿನದಾಗಿದೆ..
-ಪಾರ್ಕಿಂಗ್ ವ್ಯವಸ್ಥೆ ತುರ್ತು ವಾಹನ ನಿಲುಗಡೆಗೂ ಸಹ ಸ್ಥಳವಕಾಶವಿಲ್ಲದಿರುವ ಹೊರಾಂಗಣ ನೋಟ.
Advertisement
ಸರ್ಕಾರಿ ಆಸ್ಪತ್ರೆಗೆ ಪ್ರತಿದಿನ ಸಾವಿರಾರು ರೋಗಿಗಳಿಗೆ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ, ಸಮಯಕ್ಕೆ ಸಿಗದ ತುರ್ತು ವಾಹನ ವ್ಯವಸ್ಥೆ, ಈ ಹಿಂದೆ ಇದ್ದಂತಹ ತಹಶೀಲ್ದಾರ್ ನಹೀದಾ ಜಮ್‍ಜಮ್ ಆಸ್ಪತ್ರೆಯ ಕಳ್ಳಾಟವನ್ನು ರಹಸ್ಯ ಕಾರ್ಯಚರಣೆಯೊಂದಿಗೆ ತುರ್ತು ವಾಹನದ ಅವ್ಯವಸ್ಥೆಯನ್ನು ಬಯಲು ಮಾಡಿದ್ದರು, ಆದರೂ ಇಲ್ಲಿನ ತಾಲೂಕು ವೈದ್ಯಾಧಿಕಾರಿ ಡಾ.ವಿಜಯ್‍ಕುಮಾರ್ ಎಚ್ಚೆತ್ತುಕೊಂಡು ಸಮಸ್ಯೆಯನ್ನು ಸರಿಪಡಿಸುವಲ್ಲಿ ವಿಫಲರಾಗಿದ್ದಾರೆ, ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ ಪರಮೇಶ್ವರರವರು ಕ್ಷೇತ್ರದ ಜನತೆಯ ಆರೋಗ್ಯ ಮತ್ತು ಹಿತರಕ್ಷಣೆಗಾಗಿ ಆರೋಗ್ಯ ಸಚಿವರೊಂದಿಗೆ ಮಾತನಾಡಿ ಉತ್ತಮ ವೈದ್ಯಾಧಿಕಾರಿಯನ್ನು ನೇಮಿಸಿ ಹಾಗೂ ಕೇಂದ್ರ ಸ್ಥಾನದಲ್ಲಿ ವೈದ್ಯರು ಇರುವಂತೆ ವೈದ್ಯರಿಗೆ ಮೂಲಭೂತ ಸೌಕರ್ಯದೊಂದಿಗೆ ವಸತಿ ಗೃಹಗಳನ್ನು ನಿರ್ಮಿಸಿ ಕ್ಷೇತ್ರದ ಜನರ ಸೇವೆಗೆ ಅನುಕೂಲ ಕಲ್ಪಿಸಬೇಕೆಂದು ಕ್ಷೇತ್ರದ ಜನತೆಯ ಒತ್ತಾಯವಾಗಿದೆ.
ನಮ್ಮ ಆಸ್ಪತ್ರೆಯಲ್ಲಿ ಉತ್ತಮ ಅನುಭವವುಳ್ಳ 12 ಮಂದಿ ವೈದ್ಯರ ತಂಡ ಕರ್ತವ್ಯ ನಿರ್ವಹಿಸುತ್ತಿದ್ದು, ನಮಗೆ ಅರಿವಳಿಕೆ ತಜ್ಞರು ಬೇಕಾಗಿದ್ದಾರೆ, ಎಕ್ಸ್ ರೇ ತಜ್ಞರು, ಹಾಗೂ ಕೆಲವು ಸಿಬ್ಬಂದಿಗಳ ಅವಶ್ಯಕತೆ ಇದ್ದು ಆದಷ್ಟು ಬೇಗ ವೈದ್ಯರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒಳಗೊಂಡಂತೆ ಉತ್ತಮ ಗುಣಮಟ್ಟದ ವಸತಿ ಗೃಹಗಳನ್ನು ನಿರ್ಮಿಸಿಕೊಡುವಂತೆ ಈಗಾಗಲೇ ಜಿಲ್ಲಾ ವೈದ್ಯಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಅವರು ಕೂಡ ಸ್ಪಂದಿಸಿ ಸಂಬಂದಪಟ್ಟ ಸಚಿವರೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸುವುದಾಗಿ ತಿಳಿಸಿದ್ದಾರೆ. ಗೃಹ ಸಚಿವರು ಸಹ ಆಸ್ಪತ್ರೆಯ ಕಡೆ ಗಮನಹರಿಸಿ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ, ವೈದ್ಯರ ತಂಡ ಇರುವುದೇ ಸಾರ್ವಜನಿಕರ ಆರೋಗ್ಯ ಕಾಪಾಡುವುದಕ್ಕಾಗಿ ನಮ್ಮ ಕೆಲಸ ಪ್ರಮಾಣಿಕವಾಗಿ ಮಾಡುತ್ತೇವೆ.-ಡಾ.ಲಕ್ಷ್ಮೀಕಾಂತ್
ಮುಖ್ಯಾವೈದ್ಯಾಧಿಕಾರಿ, ಸಾರ್ವಜನಿಕ ಆಸ್ಪತ್ರೆ
ಕೊರಟಗೆರೆ. -ಸಿದ್ದರಾಜು. ಕೆ ಕೊರಟಗೆರೆ.