Advertisement

Koratagere ;ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದ ಟೆಂಪೋ

08:51 PM Jan 28, 2024 | Team Udayavani |

ಕೊರಟಗೆರೆ: ಬಿಸ್ಕೆಟ್‌ ತುಂಬಿದ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದ ಘಟನೆ ತಾಲೂಕಿನ ಬೋಡ ಬಂಡೇನಹಳ್ಳಿಯ ಬೈಪಾಸ್‌ ರಸ್ತೆ ಬಳಿ ಸಂಭವಿಸಿದೆ.

Advertisement

ಬೆಂಗಳೂರಿನಿಂದ ರಾಯದುರ್ಗಕ್ಕೆ ತೆರಳುತ್ತಿದ್ದ ಬಿಸ್ಕೆಟ್‌ ತುಂಬಿದ ಟೆಂಪೋ ಬೈಪಾಸ್‌ ರಸ್ತೆಯಲ್ಲಿ ಬೆಳಗಿನ ಜಾವ 4-30ರಲ್ಲಿ ಎಮ್ಮೆ ರಸ್ತೆಗೆ ಬಂದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಘಟನೆ ಸಂಭವಿಸಿದೆ.

ಚಾಲಕ ಹಾಗೂ ಕ್ಲೀನರ್‌ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಕೊರಟಗೆರೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next