Advertisement

ಕೊರಟಗೆರೆ: ತಾಲೂಕು ವಕ್ಕಲಿಗರ ಜಾಗೃತಿ ಸಂಘದ ನೂತನ ಅಧ್ಯಕ್ಷರಾಗಿ ವಿ.ಕೆ.ವೀರಕ್ಯಾತರಾಯ ಆಯ್ಕೆ

12:03 PM May 23, 2022 | Team Udayavani |

ಕೊರಟಗೆರೆ: ತಾಲೂಕು ವಕ್ಕಲಿಗರ ಜಾಗೃತಿ ಸಂಘದ ನೂತನ ಅಧ್ಯಕ್ಷರಾಗಿ ಮಾಜಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿ.ಕೆ.ವೀರಕ್ಯಾತರಾಯ ಆಯ್ಕೆಯಾಗಿದ್ದಾರೆ.

Advertisement

ಮೇ 22 ರ ಭಾನುವಾರದಂದು ಪಟ್ಟಣದ ಪ್ರವಾಸಿ ಮಂದಿರಲ್ಲಿ ವಕ್ಕಲಿಗ ಜನಾಂಗದ ಸಭೆ ನಡೆಸಿದ ರಾಜ್ಯ ವಕ್ಕಲಿಗರ ಜಾಗೃತಿ ಸಂಘದ ರಾಜ್ಯಾಧ್ಯಕ್ಷ ಮುನಿರಾಜ್‌ಗೌಡ ಮಾತನಾಡಿ ಕೊರಟಗೆರೆ ತಾಲ್ಲೂಕಿನಲ್ಲಿ ವಕ್ಕಲಿಗ ಜಾಗೃತಿ ಸಂಘದ ಪದಾದಿಗಕಾರಿಗಳನ್ನು ಆಯ್ಕೆ ಮಾಡಲಾಗಿದ್ದು ಅಧ್ಯಕ್ಷರನ್ನಾಗಿ ವಿ.ಕೆ.ವೀರಕ್ಯಾತರಾಯ, ಗೌರವಾಧ್ಯಕ್ಷರನ್ನಾಗಿ ಕಾಮರಾಜು, ಕಾರ್ಯಾಧ್ಯಕ್ಷರನ್ನಾಗಿ ದೊಡ್ಡಯ್ಯ, ಖಜಾಂಚಿಯಾಗಿ ಉಮೇಶ್, ಪ್ರಧಾನ ಕಾರ್ಯದರ್ಶಿಯಾಗಿ ರವಿಕುಮಾರ್, ಸಂಘಟನಾ ಕಾರ್ಯದರ್ಶಿಯಾಗಿ ಎಲ್.ವಿ.ಪ್ರಕಾಶ್ ರವರನ್ನು ಆಯ್ಕೆ ಮಾಡಿದ್ದು ಮುಂದಿನ ಪದಾಧಿಕಾರಿಗಳನ್ನು ಆಯ್ಕೆ ಸಮಿತಿಯು ಶೀಘ್ರದಲ್ಲೆ ಮಾಡಿಕೊಳ್ಳಲಿದೆ ಎಂದರು.

ರಾಜ್ಯ ವಕ್ಕಲಿಗರ ಜಾಗೃತಿ ಸಂಘವು ಜನಾಂಗದ ಸಾಮಾಜಿಕ, ಶೈಕ್ಷಣಿಕ ಬದುಕಿಗೆ ಹೆಚ್ಚಿನ ಒತ್ತು ನೀಡಲಿದ್ದು ಶಿಕ್ಷಣಕ್ಕೆ ಮೊದಲ ಆಧ್ಯತೆ ನೀಡುತ್ತದೆ. ಜನಾಂಗದ ಪ್ರತಿಯೊಬ್ಬರೂ ವಿದ್ಯಾವಂತರಾಗಲು ಎಲ್ಲಾ ರೀತಿಯ ಸಂಘಟನೆಯನ್ನು ಮಾಡಲಾಗುವುದು. ಇದರೊಂದಿಗೆ ಇತರ ಜನಾಂಗದೊಅದಿಗೂ ಸಹ ವಿದ್ಯಾಭ್ಯಾಸಕ್ಕೆ ಸಂಘವು ಒತ್ತು ನೀಡುವುದು. ನಾಡ ಪ್ರಭು ಕೆಂಪೇಗೌಡರು ಐದುನೂರು ವರ್ಷಗಳಿಂದ ಹಿಂದೆ ಬೆಂಗಳೂರನ್ನು ನಿರ್ಮಿಸುವಾಗ 64 ಪೇಟೆಗಳನ್ನು ಎಲ್ಲಾ ಸಮುದಾಯದ ಒಳಿತಿಗಾಗಿ ಅವರ ಹೆಸರಿನೊಂದಿಗೆ ನಿರ್ಮಿಸಿದ್ದರು. ಮುಂಬರುವ ದಿನಗಳಲ್ಲಿ ಜನಾಂಗವು ತಾನೂ ಸಧೃಡಗೊಂಡು ಇತರ ಸಮುದಾಯವನ್ನು ತನ್ನೊಂದಿಗೆ ಸೇರಿಸಿಕೊಂಡು ಹೋಗುವುದು. ವಕ್ಕಲಿಗರ ಮುಖ್ಯ ಕಸುಬು ವ್ಯವಸಾಯವಾಗಿದ್ದು ಬೆಳೆಯನ್ನು ಬೆಳೆದಂತ ರೈತ ಮನುಷ್ಯರೊಂದಿಗೆ ಪ್ರತಿಯೊಂದು ಜೀವರಾಶಿಗೂ ಅನ್ನ ನೀಡುವನು ಎಲ್ಲಾ ಜನಾಂಗದ ಹಿತವೇ ಅವನಿಗೆ ಮುಖ್ಯವಾಗಿದೆ ಎಂದರು.

ನೂತನ ಅಧ್ಯಕ್ಷ ವಿ.ಕೆ.ವೀರಕ್ಯಾತರಾಯ ಮಾತನಾಡಿ ತಾಲ್ಲೂಕಿನಲ್ಲಿ 50 ಸಾವಿರಕ್ಕೂ ಹೆಚ್ಚು ವಕ್ಕಲಿಗರಿದ್ದಾರೆ. ಈ ಸಮುದಾಯವನ್ನು ಎಲ್ಲಾ ರಂಗದಲ್ಲೂ ಮುನ್ನಡೆಸುವ ಹೊಣೆ ನಮ್ಮ ಮತ್ತು ಸಮುದಾಯದ ಮುಖಂಡರ ಮೇಲಿದೆ. ಮುಂಬರುವ ದಿನಗಳಲ್ಲಿ ಸಮುದಾಯದ ಎಲ್ಲರೂ ಒಟ್ಟಿಗೆ ಕೂಡಿ ಕೆಂಪೇಗೌಡರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುವುದು, ಹಾಗೂ ಈ ಸಂಘಟನೆಯನ್ನು ಹೋಬಳಿ ಮಟ್ಟದಲ್ಲೂ ಸಹ ಸಧೃಢಗೊಳಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯಧ್ಯಕ್ಷ ವೈ.ಟಿ.ರಾಜೇಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಸಂಘಟನಾ ಕಾರ್ಯದರ್ಶಿ ಮೋಹನ್ ಕುಮಾರ್, ವಿ.ಎಸ್.ಎಸ್.ಎನ್.ಅಧ್ಯಕ್ಷ ಮರುಡಪ್ಪ, ಗ್ರಾ.ಪಂ.ಸದಸ್ಯರಾದ ನರೇಂದ್ರ, ರಮೇಶ್ (ಬೋರೆವೆಲ್), ಮುಖಂಡರುಗಳಾದ ಭಕ್ತರಹಳ್ಳಿ ಸಿದ್ದಲಿಂಗಯ್ಯ, ಕಾಕಿಮಲ್ಲಯ್ಯ, ಸಂತೋಷ್, ಸುರೇಶ್, ಜಗದೀಶ್, ಕುಮಾರಣ್ಣ, ಕೆ.ರಂಗಪ್ಪ, ಸುಧಾನಾಗರಾಜು, ಕೌಶಿಕ್, ಸೇರಿದಂತೆ ಇತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next