Advertisement

ಕೊರಟಗೆರೆ ತಾಲೂಕು ರಾಜ್ಯೋತ್ಸವ: 16 ಸಾಧಕರ ಆಯ್ಕೆ

10:32 PM Oct 30, 2022 | Team Udayavani |

ಕೊರಟಗೆರೆ : ನ.1 ರಂದು ಕೊರಟಗೆರೆ ತಾಲೂಕಿನಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಸಾಧಕರನ್ನು ಸನ್ಮಾನಿಸಲು ಆಯ್ಕೆ ಸಮಿತಿ ಸಭೆ ಸೇರಿ ತಹಶೀಲ್ದಾರ್ ಮಾರ್ಗದರ್ಶನದಲ್ಲಿ 8 ವಿವಿಧ ಕ್ಷೇತ್ರಗಳಿಂದ
16 ಮಂದಿ ಸಾಧಕರನ್ನು ಆಯ್ಕೆ ಮಾಡಿದೆ.

Advertisement

ತಹಶೀಲ್ದಾರ್ ನಾಹಿದಾ ಜಮ್ ಜಮ್ ಮಾರ್ಗದರ್ಶನದಲ್ಲಿ ಆಯ್ಕೆ ಸಲಹಾ ಸಮಿತಿ ರಚಿಸಿದ್ದು ಸಮಿತಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ.ದೊಡ್ಡಸಿದ್ದಪ್ಪ ಅಧ್ಯಕ್ಷತೆಯಲ್ಲಿ ತಾ.ಪಂ.ಸಭಾಂಗಣದಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ 29 ಅರ್ಜಿಗಳಲ್ಲಿ ಅಯ್ಕೆ ಸಮಿತಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 16 ಮಂದಿ ಸಾದಕರನ್ನು ಅಯ್ಕೆ ಮಾಡಲಾಗಿದೆ.

ಆಯ್ಕೆಯಾದ ಸಾಧಕರು
ಕೃಷಿ ಕ್ಷೇತ್ರದಿಂದ ಸಾವಯವ ಕೃಷಿಕ ತಾಲೂಕಿನ ಚನ್ನರಾಯನ ದುರ್ಗಾ ಹೋಬಳಿಯ ಬರಕ ಗ್ರಾಮದ ದೊಡ್ಡಯ್ಯ, ಹೊಳವನಹಳ್ಳಿ ಹೋಬಳಿಯ ಚಿಕ್ಕನಹಳ್ಳಿಯ ಶಿವಣ್ಣ, ಸರ್ಕಾರಿ ನೌಕರರ ಕ್ಷೇತ್ರದಿಂದ ಕನ್ನಡ ಶಿಕ್ಷಕರಾದ ಬುಕ್ಕಾಪಟ್ಟಣ ಕಾಂತರಾಜು , ಕನ್ನಡ ಪರ ಹೋರಾಟ ಕ್ಷೇತ್ರದಿಂದ ಕೊರಟಗೆರೆ ಪಟ್ಟಣದ ಬಿ.ಎಸ್.ಪ್ರಸನ್ನಕುಮಾರ್ ಮತ್ತು ಖಲೀಂಉಲ್ಲಾ , ಮಾಧ್ಯಮ ಕ್ಷೇತ್ರದಿಂದ ಸಿದ್ದರಾಜು.ಕೆ ಕೊರಟಗೆರೆ, ಟಿ.ಸಿ.ನಾಗೇಂದ್ರ , ಕ್ರೀಡಾ ಕ್ಷೇತ್ರದಿಂದ ಎಸ್.ವಿಜಯಲಕ್ಷ್ಮಿ ಮತ್ತು ದತ್ತಾತ್ರೆಯ ರಾಮಚಂದ್ರಶರ್ಮ ತುಂಬಾಡಿ, ಸಾಹಿತ್ಯ ಕ್ಷೇತ್ರದಲ್ಲಿ ಮಾಧುಸೂದನ ಹಾಗೂ ತಿಮ್ಮರಾಜು ಬುಕ್ಕಪಟ್ಟಣ, ಸಮಾಜಸೇವೆ ಕ್ಷೇತ್ರದಲ್ಲಿ ಆರ್.ರಮೇಶ್ , ರಂಗಭೂಮಿ ಕ್ಷೇತ್ರದಿಂದ ಎಮ್.ವಿ.ವೆಂಕಟಪ್ಪ , ಜಯಶ್ರೀ ಬಿನ್ ಮರುತಿಗೌಡ ಹುಲುವಂಗಲ, ಡಿ.ಎಂ.ರವಿ ಕುಮಾರ್ , ನರೇಂದ್ರ ಅಯ್ಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಆಯ್ಕೆ ಸಮಿತಿಯ ಸಭೆಯಲ್ಲಿ ಸಮಿತಿ ಅಧ್ಯಕ್ಷ ಹಾಗೂ ತಾ.ಪಂ.ಇಓ ಡಾ.ದೊಡ್ಡಸಿದ್ದಯ್ಯ, ಕಾರ್ಯದರ್ಶಿ ಕೃಷಿ ಸಹಾಯಕ ನಿರ್ದೇಶಕ ನಾಗರಾಜು, ತಾ.ಪಂ. ಕಚೇರಿಯ ವ್ಯವಸ್ಥಾಪಕಿ ಪವಿತ್ರ, ವಿಷಯನಿರ್ವಹಕ ರಮೇಶ್‌ಬಾಬು, ಸಾಕ್ಷರತಾ ಸಂಯೋಜಕ ಚಂದ್ರಶೇಖರ್, ರಾಜ್ಯೋತ್ಸವ ಪುರಸ್ಕೃತ ಮೈಲಾರಪ್ಪ, ಕ.ರ.ವೇ ಅಧ್ಯಕ್ಷ ನಟರಾಜು, ಡಾ.ಜಿ.ಪರಮೇಶ್ವರ್ ಕ್ರೀಡಾ ಮತ್ತು ಸಾಂಸ್ಕೃತಿ ವೇದಿಕೆ ಅದ್ಯಕ್ಷ ಕೆ.ಆರ್.ಓಬಳರಾಜು, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ.ಪರುಷೋತ್ತಮ್, ಹಿರಿಯ ಪತ್ರಕರ್ತ ಎನ್.ಪದ್ಮನಾಭ್, ಕಸಾಪ ಅಧ್ಯಕ್ಷ ಕೃಷ್ಣಮೂರ್ತಿ, ಡಾ.ರಾಜಕುಮಾರ್ ಅಭಿಮಾನಿಸಂಘದ ಅಧ್ಯಕ್ಷ ಕೆ.ಆರ್.ನಾಗೇಂದ್ರ, ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಪುಟ್ಟಣ್ಣ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next