Advertisement

ಕೊರಟಗೆರೆ: ಹಾಲು ಉತ್ಪಾದಕರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ

09:50 PM Aug 29, 2022 | Team Udayavani |

ಕೊರಟಗೆರೆ: ತುಮಕೂರು ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ದಿನಕ್ಕೆ ಸರಾಸರಿ 8.30 ಲಕ್ಷ ಹಾಲು ಉತ್ಪಾದನೆ ಮಾಡುತ್ತಿದ್ದು ತಿಂಗಳಿಗೆ 84 ಕೋಟಿ ರೂ ಹಣವನ್ನು ಉತ್ಪಾದಕರ ಖಾತೆಗಳಿಗೆ ಜಮಾ ಮಾಡಿ ಹೈನುಗಾರಿಕೆಯಲ್ಲಿ ಉತ್ತಮ ಪ್ರಗತಿ ಸಾಧಿಸಿದೆ ಎಂದು ಜಿಲ್ಲಾ ಅಧ್ಯಕ್ಷ ಮಹಾಲಿಂಗಯ್ಯ ತಿಳಿಸಿದರು.

Advertisement

ಅವರು ಪಟ್ಟಣದ ಸುವರ್ಣಮುಖಿ ಲಕ್ಷೀನರಸಿಂಹಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆದ ಹಾಲು ಉತ್ಪಾದಕರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಮತ್ತು ಪ್ರಾದೇಶಿಕ ಸಭೆ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿ 2018 ತುಮುಲ್ ಗೆ ನಾವುಗಳು ಅಧಿಕಾರಕ್ಕೆ ಬಂದಂತಹ ಸಂದರ್ಭದಲ್ಲಿ 6.20 ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು. 2019 ರಲ್ಲಿ 8 ಲಕ್ಷ ಲೀಟರ್ ಉತ್ಪಾದನೆಯತ್ತ ಸಾಗಿದಾಗ ಕರೋನಾದಿಂದ ದಿನಕ್ಕೆ 3,75 ಲಕ್ಷ ಹಾಲು ಉಳಿದು ಸಂಕಷ್ಟ ಸ್ಥಿತಿಗೆ ಬಂದರೂ ಉತ್ಪಾದಕರ ಬೆಂಬಲಕ್ಕೆ ತುಮುಲ್ ನಿಂತಿತು, ಈಗ ಸಂಘದಿಂದ ದಿನಕ್ಕೆ ಬೆಂಗಳೂರಿಗೆ 1,66 ಲಕ್ಷ ತುಮಕೂರಿಗೆ 1.26 ಲಕ್ಷ ಮುಂಬೈಗೆ 2 ಲಕ್ಷ ಜಮ್ಮು ಕಾಶ್ಮೀರಕ್ಕೆ 26 ಸಾವಿರ ಆಂದ್ರಪ್ರದೇಶಕ್ಕೆ 30 ಸಾವಿರ ಲೀಟರ್ ಹಾಲು ದಿನಕ್ಕೆ ಸರಬರಾಜು ಮಾಡುತ್ತಿದ್ದೇವೆ ಎಂದರು.

ತುಮುಲ್ ಗೆ ಈಗ ಸುಮಾರು9.33 ಲಕ್ಷ ಲೀಟರ್ ಹಾಲು ಬರುತ್ತಿದ್ದು ಅದು ಉಪಯೋಗಕ್ಕಿಂತ ಹೆಚ್ಚಾಗುತ್ತಿದೆ ಅದಕ್ಕಾಗಿ ಸುಮಾರು 15 ಲಕ್ಷ ಸಾಮಥ್ರ್ಯದ 154 ಕೋಟಿ ರೂಗಳ ಸಂಸ್ಕರಣಾ ಮತ್ತು ಶೇಖರಣ ಘಟಕವನ್ನು ಪ್ರಾರಂಭಿಸುತ್ತಿದ್ದೇವೆ. ಪ್ರಸ್ತುತ 86ಸಾವಿರ ಕುಟುಂಬಗಳು ಹಾಲು ಉತ್ಪಾದನೆ ಮಾಡುತ್ತಿವೆ, ಆ ಕುಟುಂಬದವರಿಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಶೈಕ್ಷಣಿಕ ಹಂತಗಳ ತಕ್ಕಂತೆ ೨೫ ಸಾವಿರ, ೧೦ ಸಾವಿರ ಪ್ರೋತ್ಸಾಹ ಧನವನ್ನು, ಜಿಲ್ಲೆಯಲ್ಲಿ 221 ವಿದ್ಯಾರ್ಥಿನಿಯರಿಗೆ ಉಚಿತ ಹಾಸ್ಟಲ್, ಎಸ್.ಎಸ್.ಎಲ್,ಸಿ, ಪಿ,ಯು.ಸಿ ಮಕ್ಕಳಿಗೆ ಪ್ರತಿಬಾ ಪರಸ್ಕಾರ, ರಾಸುಗಳಿಗೆ ವಿಮೆ, ಮೃತ ಪಟ್ಟ ಉತ್ಪಾದಕರ ಕುಟುಂಬದವರಿಗೆ ಪರಿಹಾರ, ಸೇರಿದಂತೆ ಹಲವು ಸವಲತ್ತಗಳನ್ನು ನೀಡುತ್ತಿದ್ದು ಸಹಕಾರ ನಿಯಮಿತದ ಏಳಿಗೆಗೆ ಮತ್ತು ಉತ್ಪಾದಕರ ಶ್ರೆಯೋಭಿವೃಧಿಗೆ ಪ್ರಮಾಣಿಕವಾಗಿ ದುಡಿಯತಿದ್ದೇವೆ ಎಂದರು.

ತಾಲ್ಲೂಕು ನಿರ್ದೇಶಕ ಈಶ್ವರಯ್ಯ ಮಾತನಾಡಿ ತಾಲೂಕಿನಲ್ಲಿ ದಿನಕ್ಕೆ 71117 ಲೀಟರ್ ಹಾಲು ಉತ್ಪಾದಿಸುತ್ತಿದ್ದು,25195 ಸದಸ್ಯರನ್ನು ಹೊಂದಿದೆ, ಇಂದಿನ ಕಾರ್ಯಕ್ರಮದಲ್ಲಿ ಸಂಘಗಳ ಅಧ್ಯಕ್ಷರ ಮತ್ತು ಕಾರ್ಯದರ್ಶಿಗಳ ಸಭೆ ಕರೆದಿದ್ದು ಕುಂದು ಕೋರತೆಗಳನ್ನು ಚರ್ಚಿಸಲಾಗಿದೆ, ನಮ್ಮ ತಾಲ್ಲೂಕಿನ ಉತ್ಪಾದಕರ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯ155 ಪ್ರತಿಭಾನ್ವಿತ ಮಕ್ಕಳಿಗೆ3.10 ಲಕ್ಷ ಪ್ರೋತ್ಸಾಹ ಧನ, ಮರಣ ಹೊಂದಿದ ರಾಸುಗಳಿಗೆ7 ಲಕ್ಷ ಮತ್ತು ಉತ್ಪಾದಕರಿಗೆ ೧.೫೦ ಲಕ್ಷ ವಿಮಾ ಹಣವನ್ನು ನೀಡುತ್ತಿದ್ದು ಉತ್ಪಾದಕರ ಪ್ರೋತ್ಸಾಹಕ್ಕೆ ಸದಾ ಬದ್ದ ಎಂದರು.

ತುಮುಲ್ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಮಾತನಾಡಿ ಹೈನುಗಾರಿಕೆ ಅವಲಂಬಿತ ರೈತ ಸಂಕಷ್ಟಕ್ಕೆ ಸಿಲುಕಿರುವುದು ಅತಿ ವಿರಳ, ಹಾಲು ಉತ್ಪಾದನೆ ಗ್ರಾಮೀಣ ರೈತ ಜೀವನ ಮಟ್ಟವನ್ನು ಸುಧಾರಿಸಿದ್ದು ಹಾಲು ನೀಡುವ ರಾಸುಗಳಿಗೆ ಖನಿಜಾಂಶದ ಆಹಾರ, ಉತ್ತಮ ಹಸಿ ಮತ್ತು ಒಣ ಮೇವು, ಆರೋಗ್ಯ ಕಾಳಜಿ ವಹಿಸಿದರೆ ಉತ್ತಮ ಹಾಲನ್ನು ಪಡೆಯಬಹುದು ಎಂದರು. ಕಾರ್ಯಕ್ರದಲ್ಲಿ ಅಧಿಕಾರಿಗಳಾದ ಪ್ರಸಾದ್, ಚಂದ್ರಪ್ಪ, ಡಾ. ರಾಜು, ರಂಜಿತ್, ವನಜಾಕ್ಷಿ, ನೇತ್ರಾವತಿ ಸೇರಿದಂತೆ ಇತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next