ಕೊರಟಗೆರೆ: ತಾಲೂಕು ಆರೋಗ್ಯ ವೈದ್ಯಾಧಿಕಾರಿಗಳ ನಿರ್ಲಕ್ಷ್ಯದಿಂದ ಶಾಲಾ-ಕಾಲೇಜ್ ಹೆಣ್ಣು ಮಕ್ಕಳಿಗೆ ಉಚಿತವಾಗಿ ನೀಡ ಬೇಕಾದ ಸ್ಯಾನಿಟರಿ ಪ್ಯಾಡ್ ಗಳು ಹಾಗೂ ಕೆಲ ಔಷಧಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊಳೆತು ನಾರುತ್ತಿವೆ.
ತಾಲೂಕು ವೈದ್ಯಾಧಿಕಾರಿ ವಿಜಯಕುಮಾರ್ ನಿರ್ಲಕ್ಷ್ಯದಿಂದ ಉಚಿತವಾಗಿ ಆಶಾ ಕಾರ್ಯಕರ್ತೆಯರ ಮುಖೇನ ಶಾಲಾ-ಕಾಲೇಜ್ ಬಡ ಹೆಣ್ಣು ಮಕ್ಕಳಿಗೆ ತಲುಪಬೇಕಾದ ಸ್ಯಾನಿಟರಿ ಪ್ಯಾಡ್ ಗಳು ಮತ್ತು ಕೆಲ ಔಷಧಿ ವಸ್ತುಗಳು ಸರ್ಕಾರಿ ಆಸ್ಪತ್ರೆಯ ವಠಾರದಲ್ಲಿರುವ ಒಂದು ಗೋಡೌನ್ ನಲ್ಲಿ ಕೂಳೆತು ನಾರುತ್ತಿರುವ ಕುರಿತು ಸಾರ್ವಜನಿಕರಿಂದ ದೂರು ಕೇಳಿ ಬಂದಿದೆ.
ಸಂಬಂಧಪಟ್ಟ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಸರ್ಕಾರ ಬಡ ಹೆಣ್ಣು ಮಕ್ಕಳಿಗೆ ಅನುಕೂಲವಾಗಲಿ ಎಂದು ಕೆಲವು ಯೋಜನೆಗಳನ್ನು ಸರ್ಕಾರಿ ಆಸ್ಪತ್ರೆಯ ತಾಲೂಕು ಆರೋಗ್ಯ ವೈದ್ಯಾಧಿಕಾರಿ ಮುಖೇನ ಸಾರ್ವಜನಿಕರಿಗೆ ತಲುಪಿಸಲು ಇಂತಹ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಇಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಇಂತಹ ಘಟನೆಗಳು ನಡೆಯುತ್ತವೆ.
ಅಲ್ಲಿರುವ ವಟಾರಕ್ಕಾಗಲಿ , ಆ ವಸ್ತುಗಳನ್ನು ಸ್ಟೋರೇಜ್ ಮಾಡಿರುವ ಗೋಡನ್ ಗಾಗಲಿ ಯಾವ ಭದ್ರತೆಯೂ ಇಲ್ಲ, ಮಳೆ ಬಂದರೆ ನೀರೆಲ್ಲ ಒಳಗೆ ನಿಂತು ಈ ರೀತಿ ಆಗಿದೆ. ಇಲ್ಲಿಯವರೆಗೂ ಇತ್ತಕಡೆ ಗಮನ ಹರಿಸದ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಇಷ್ಟಕ್ಕೂ ಗೋಡನ್ ನಲ್ಲಿ ಏನಿದೆ ಏನಿಲ್ಲ ಎಂಬುದರ ಅರಿವೇ ಇಲ್ಲದ ಅಧಿಕಾರಿ ವರ್ಗ ತಾಲ್ಲೂಕು ಆಸ್ಪತ್ರೆಯಲ್ಲಿ ಇದ್ದಾರೆ ಅನ್ನುವ ಸ್ಥಿತಿ ನಿರ್ಮಾಣವಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಇತ್ತ ಗಮನಹರಿಸುತ್ತಾರಾ ಕಾದು ನೋಡಬೇಕಾಗಿದೆ.