Advertisement
ತಾಲೂಕಿನ ಬಹಳಷ್ಟು ಊರುಗಳಲ್ಲಿ ಸರಕಾರಿ ವಸತಿ ಗೃಹಗಳಿಲ್ಲದೆ ಸಾಕಷ್ಟು ಮಂದಿ ನೌಕರರು ಬಾಡಿಗೆ ಮನೆಯನ್ನೇ ಅವಲಂಬಿಸಿದ್ದಾರೆ. ಆದರೆ ಹೊಳವನಹಳ್ಳಿ ಆರಕ್ಷಕ ಠಾಣೆ. ಆರೋಗ್ಯ ಇಲಾಖೆಯ ವೈದ್ಯರು ಮತ್ತು ಶುಶ್ರೂಶಕಿಯರು. ಕಂದಾಯ ಇಲಾಖೆಯ ವಸತಿ ಗೃಹಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದ ವಸತಿ ಗೃಹ ಹೀಗೆ . 20 – 25 ವರ್ಷದಿಂದ ಯಾರೂ ವಾಸಿಸದೇ. ಪಾಳು ಬಿದ್ದ ಕಾರಣ ಈ ಎಲ್ಲಾ ಅಧಿಕಾರಿಗಳು ತಮಗೆ ಯೋಗ್ಯವಾದ ಕಡೆ ಮತ್ತು ಜಿಲ್ಲೆಗಳಿಂದ ಬಸ್ ಮೂಲಕ ಕಛೇರಿಯ ಕೆಲಸಕ್ಕೆ ಬರುತ್ತಾರೆ.
Related Articles
Advertisement
ಹೊಳವನಹಳ್ಳಿ ಹೋಬಳಿ ಕೇಂದ್ರವಾಗಿದ್ದು, ಕಂದಾಯ ಇಲಾಖೆ ಸೇರಿದಂತೆ ನಾನಾ ಇಲಾಖೆಗಳು ಕೆಲಸ ಕಾರ್ಯ ನಿರ್ವಹಿಸುತ್ತಿವೆ. ನೂರಾರು ಸರಕಾರಿ ನೌಕರರು ಕೆಲಸ ಮಾಡುತ್ತಿದ್ದು, ಅವರಿಗೆ ವಸತಿ ಗೃಹ ಸೌಕರ್ಯ ಕಲ್ಪಿಸಿಲ್ಲ. ಹೀಗಾಗಿ ಅನೇಕರು ಬಾಡಿಗೆ ಮನೆಗಳಲ್ಲಿ ಅಧಿಕ ಬಾಡಿಗೆ ನೀಡಿ ವಾಸಿಸುವಂತಾಗಿದೆ.
ಬಾಡಿಗೆ ಮನೆ ಕೊರತೆ:
ಸಣ್ಣ ಪಟ್ಟಣವಾಗಿರುವುದರಿಂದ ಗ್ರಾಮದಲ್ಲಿ ಹೆಚ್ಚು ಬಾಡಿಗೆ ಮನೆಗಳಿಲ್ಲ. ಹೀಗಾಗಿ ಸರಕಾರಿ ಕಚೇರಿಗಳಲ್ಲಿ, ಶಾಲೆಯಲ್ಲಿ ಕೆಲಸ ಮಾಡುತ್ತಿರುವ ನೌಕಕರಿಗೆ ಮನೆ ಸಿಗದೇ ಅಕ್ಕಪಕ್ಕದ ಊರುಗಳಲ್ಲಿ ನೆಲೆಸಿದ್ದಾರೆ. ದುಬಾರಿ ಬಾಡಿಗೆ ಕೊಡುವುದಲ್ಲದೇ, ನಿತ್ಯ ಬಸ್‌ನಲ್ಲಿ ಪ್ರಯಾಣ ಮಾಡಿ ಕಚೇರಿಗೆ ಬರುವವರೂ ಇದ್ದಾರೆ. ದುಸ್ಥಿತಿಯಲ್ಲಿರುವ ಇಲ್ಲಿನ ವಸತಿ ಗೃಹಗಳನ್ನು ದುರಸ್ತಿ ಮಾಡಿಸಿ ನೌಕರರಿಗೆ, ಅಧಿಕಾರಿಗಳಿಗೆ ವಿತರಿಸಿದರೆ ಕೆಲವರಿಗಾದರೂ ಅನುಕೂಲವಾಗಲಿದೆ. ಈ ಬಗ್ಗೆ ಜನಪ್ರತಿ ನಿಧಿಗಳು, ಹಿರಿಯ ಅಧಿಕಾರಿಗಳು ಗಮನಹರಿಸಬೇಕಾಗಿದೆ.
ಈ ಪಾಳು ಬಿದ್ದ ವಸತಿ ಗೃಹಗಳನ್ನು ಸದ್ಯದಲ್ಲೇ ದುರಸ್ತಿಪಡಿಸಲಾಗುವುದು. ಹಾಗೆ ನಮ್ಮ ಇಲಾಖೆಯಿಂದ ಹೊಸದಾಗಿ ವಸತಿಗೃಹಗಳನ್ನು ನಿರ್ಮಿಸಿ ಕಾಂಪೌಂಡ್ ಮಾಡಲಾಗುವುದು.
– ಸಿದ್ದರಾಮೇಶ್ವರ ಸರ್ಕಲ್ ಇನ್ಸ್‌ಪೆಕ್ಟರ್ ಕೊರಟಗೆರೆ
ಕೊರಟಗೆರೆ ಮತ್ತು ಹೊಳವನಹಳ್ಳಿಯಲ್ಲಿ ಬಾಡಿಗೆ ಮನೆಗಳ ಕೊರತೆಯಿಂದ ನೌಕರರು ದೂರದ ಊರಿನಿಂದ ಬಸ್‌ನಲ್ಲಿ ಬರುತ್ತಿದ್ದಾರೆ. ಹೀಗಾಗಿ ಅವರು ಕಚೇರಿ ಸೇರುವುದು ವಿಳಂಬವಾಗುತ್ತಿದೆ. ಇದರಿಂದ ಸಾರ್ವಜನಿಕರಿಗೂ ತೊಂದರೆಯಾಗುತ್ತಿದೆ. ಕೂಡಲೇ ವಸತಿಗೃಹವನ್ನು ಸರಿಪಡಿಸಿ ನೌಕರರಿಗೆ ವಿತರಿಸಿದರೆ ನೌಕರರಿಗೂ, ಸಾರ್ವಜನಿಕರಿಗೂ ಅನುಕೂಲವಾಗಲಿದೆ.
– ಶ್ರೀನಿವಾಸ್ ಹೆಚ್ ಎನ್ ಗ್ರಾಮಸ್ಥರು ಹೊಳವನಹಳ್ಳಿ.
ನಾಳೆಯೇ ಖುದ್ದಾಗಿ ಪಾಳುಬಿದ್ದ ವಸತಿ ಗೃಹಗಳನ್ನು ವೀಕ್ಷಣೆ ಮಾಡಿ ಸಂಭಂದಿಸಿದ ಇಲಾಖೆಗಳ ಗಮನಕ್ಕೆ ತರುತ್ತೇನೆ. ಮತ್ತು ಜಿಪಂ ಕಾರ್ಯನಿರ್ವಾಹಕ ಅಧಿಕಾರಿಯ ಗಮನಕ್ಕೆ ಪತ್ರದ ಮುಖೇನ ಶಿಪಾರಸ್ಸು ಮಾಡುತ್ತೇನೆ.
– ದೊಡ್ಡಸಿದ್ದಯ್ಯ, ತಾಪಂ ಕಾರ್ಯನಿರ್ವಣಾಧಿಕಾರಿ
– ಸಿದ್ದರಾಜು. ಕೆ ಕೊರಟಗೆರೆ