ಕೊರಟಗೆರೆ: ಜನರು ತಾಲೂಕು ಕಚೇರಿಗೆ ಅಲೆಯುವುದು ಅಧಿಕಾರಿಗಳಿಗಾಗಿ ಕಾಯುವುದು ಕೆಲಸ ಕಾರ್ಯಗಳನ್ನು ಬಿಟ್ಟು ಬರುವುದನ್ನ ತಡೆಯುವುದೇ ಈ ಒಂದು ವಿನೂತನ ಕಾರ್ಯಕ್ರಮದ ಉದ್ದೇಶ ಡಿಸಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯುತ್ತಿದೆ. ಎಂದು ತಹಶೀಲ್ದಾರ್ ನಾಹಿದಾ ಜಂ ಜಂ ತಿಳಿಸಿದರು.
ತಾಲೂಕಿನ ಕೋಳಲ ಹೋಬಳಿಯ ವೀರಪುರ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಡಿಸಿ ನಡೆ , ಹಳ್ಳಿ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಹಶೀಲ್ದಾರ್ ರವರು ಪ್ರತಿನಿತ್ಯ ತಮ್ಮ ಕೂಲಿ ಕೆಲಸವನ್ನು ಬಿಟ್ಟು ಕಚೇರಿಗಳತ್ತ ಅಲೆದಾಡುವ ರೈತರು ಹಾಗೂ ಸಾರ್ವಜನಿಕರ ಕಷ್ಟಗಳನ್ನು ಆಲಿಸಿದ ರಾಜ್ಯ ಸರ್ಕಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಎನ್ನುವ ಒಂದು ವಿನೂತನ ಕಾರ್ಯಕ್ರಮವನ್ನು ಆಯೋಜಿಸಿ ಅದರ ಅಡಿಯಲ್ಲಿ ಗ್ರಾಮೀಣ ಭಾಗದ ಗಡಿ ಭಾಗದ ವರೆಗೆ ಆಯ ತಾಲೂಕು ಮಟ್ಟದ ಎಲ್ಲಾ ಸರ್ಕಾರಿ ಅಧಿಕಾರಿಗಳೇ ಖುದ್ದಾಗಿ ಹಳ್ಳಿಹಳ್ಳಿಗೆ ತಲುಪಿ ಜನರ ಸಮಸ್ಯೆಗೆ ಸ್ಥಳದಲ್ಲಿಯೇ ಪರಿಹಾರ ಕೊಡುವುದಾಗಿದೆ ಎಂದರು.
ಸಹಾಯಕ ಕೃಷಿ ನಿರ್ದೇಶಕರು ಹೆಚ್ ನಾಗರಾಜು ಮಾತನಾಡಿ, ನಮ್ಮ ತಾಲೂಕಿನ ರೈತರು ಬುದ್ಧಿವಂತರಾಗಿದ್ದಾರೆ ಅವರ ಜಮೀನುಗಳಲ್ಲಿ ಬೆಳೆಯುವ ಬೆಳೆಗಳಿಗೆ ಯಾವ ಯಾವ ಕಾಲದಲ್ಲಿ ಯಾವ ಬೆಳೆ ಬೆಳೆಯಬೇಕು ಎನ್ನುವುದರ ಮಾಹಿತಿ ನಮ್ಮ ಬಳಿ ತಿಳಿದುಕೊಳ್ಳುತ್ತಾರೆ ಅದರಲ್ಲೂ ಇತ್ತೀಚಿಗೆ ವಿದ್ಯಾವಂತ ಯುವಕರು ಕೂಡ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ ಅವರ ನೂತನ ಶೈಲಿಯ ವ್ಯಾಪಾರಕ್ಕೆ ಅನುಕೂಲವಾಗುವಂತಹ ಬೆಳೆಗಳನ್ನು ಬೆಳೆಯುವುದರ ಜೊತೆಗೆ ಉತ್ತಮ ಲಾಭವನ್ನು ಗಳಿಸುತ್ತಿದ್ದಾರೆ ಇದರಿಂದಲೇ ನಮ್ಮ ತಾಲೂಕಿನಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ದಿನ ಕಡಿಮೆಯಾಗುತ್ತಿವೆ ಇದಕ್ಕೆ ಕಾರಣ ಸ್ವಾವಲಂಬಿಕ ಕೃಷಿಗಳತ್ತ ಗಮನ ಹರಿಸುತ್ತಿದ್ದಾರೆ ಆದ್ದರಿಂದ ರೈತರ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗಿದೆ ಈ ಬಾರಿ ಅತಿ ಹೆಚ್ಚು ಮಳೆಯಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಿದೆ ರೈತರು ಇನ್ನು ಹೆಚ್ಚು ಹೆಚ್ಚು ಕೃಷಿಯ ವಿಚಾರಗಳಲ್ಲಿ ದೇಶಕ್ಕೆ ರೈತರೇ ಬೆನ್ನೆಲುಬು ಈಗಾಗಲೇ ಅತಿ ಹೆಚ್ಚು ವಿದ್ಯಾರ್ಥಿಗಳು ಕೃಷಿಯಂತೆ ಗಮನ ಹರಿಸಿದ್ದಾರೆ ಇದಕ್ಕಿಂತ ಖುಷಿಯ ವಿಚಾರ ಬೇರೇನೂ ಬೇಕು ನಮಗೆ ನಮ್ಮ ಇಲಾಖೆಗೆ ಸಂಬಂಧಿಸಿದಂತೆ ಯಾವಾಗ ಬೇಕಾದರೂ ನಮ್ಮನ್ನು ಸಂಪರ್ಕಿಸಬಹುದು ಸದಾಕಾಲ ರೈತರಿಗಾಗಿ ಅವರ ಜೊತೆ ನಾವಿದ್ದೇವೆ ಎಂದು ತಿಳಿಸಿದರು.
ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸುಧಾಕರ್ ಮಾತನಾಡಿ , ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣದ ಜೊತೆ ಮಕ್ಕಳಿಗೆ ಬೇಕಾದ ಸಮವಸ್ತ್ರ,ಶೂಸ್, ಬಿಸಿ ಊಟ, ಸ್ಕಾಲರ್ಶಿಪ್ ಸೇರಿದಂತೆ ಉತ್ತಮ ಶಿಕ್ಷಣವು ಮಕ್ಕಳಿಗೆ ಸಿಗುತ್ತಿದೆ ಆದ್ದರಿಂದ ಸರ್ಕಾರಿ ಶಾಲೆಗಳನ್ನ ಉಳಿಸಿ ಬೆಳೆಸಬೇಕಾದರೆ ಮಹತ್ವದ ಕೆಲಸ ಮಾಡಬೇಕಾಗಿರುವುದು ಪೋಷಕರು, ಎಸ್ ಡಿ ಎಂ ಸಿ ಅಧ್ಯಕ್ಷರು ಹಾಗೂ ಸದಸ್ಯರುಗಳು ಏನು ಮಾಡಬೇಕು ಎನ್ನುವುದಕ್ಕೆ ನಾನೊಂದು ಸಣ್ಣ ಉದಾಹರಣೆಯನ್ನು ಕೊಡುತ್ತೇನೆ ತಮ್ಮ ತಮ್ಮ ಮಕ್ಕಳನ್ನ ಸರ್ಕಾರಿ ಶಾಲೆಗೆ ಸೇರಿಸುವುದರ ಜೊತೆಗೆ ತಮ್ಮ ತಮ್ಮ ಹಳ್ಳಿಗಳಲ್ಲಿ ಇರುವ ಸರ್ಕಾರಿ ಶಾಲೆಗಳಲ್ಲಿ ತಮ್ಮ ಮಕ್ಕಳಿಗೆ ಶಿಕ್ಷಕರು ಸರಿಯಾಗಿ ಬೋಧನಾ ಮಾಡುತ್ತಿದ್ದಾರ ಇಲ್ಲವೇ ಎನ್ನುವುದನ್ನು ತಾವೇ ಖುದ್ದಾಗಿ ಪರಿಶೀಲಿಸಬಹುದು ನಿಮ್ಮ ಮಕ್ಕಳ ಉತ್ತಮ ಭವಿಷ್ಯ ನಿಮ್ಮ ನಿಮ್ಮ ಕೈಯಲ್ಲಿದೆ ಎಂದು ಪೋಷಕರಿಗೆ ಮನವರಿಕೆ ಮಾಡಿದರು.
ಜಿಲ್ಲಾ ಪಂಚಾಯತಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವಿಕುಮಾರ್ ಮಾತನಾಡಿ, ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ನಮ್ಮ ಇಲಾಖೆ ಸೇರಿದಂತೆ ತಾಲೂಕಿನ ಒಂದು ದಿನಗಳ ಕಾಲ ಅಂದರೆ ಬೆಳಗ್ಗಿನಿಂದ ಸಂಜೆವರೆಗೂ ಎಲ್ಲಾ ಇಲಾಖೆಯ ಅಧಿಕಾರಿಗಳು ನಿಮ್ಮ ಊರಿನಲ್ಲಿ ಇರುತ್ತಾರೆ ನಿಮ್ಮ ಮನೆ ಹಾಗೂ ನಿಮ್ಮ ಊರಿಗೆ ಸಂಬಂಧಿಸಿದಂತೆ ಯಾವ ರೀತಿಯ ಯಾವುದೇ ಸಮಸ್ಯೆ ಇದ್ದರೂ ಕೂಡ ತಾವು ನೇರವಾಗಿ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ದೂರುಗಳನ್ನು ನೀಡಬಹುದು ನೀವು ನೀಡಿದ ದೂರಗಳು ಸರಿಯಾಗಿದ್ದಲ್ಲಿ ಸ್ಥಳದಲ್ಲಿಯೇ ಪರಿಹಾರ ಒದಗಿಸುವ ಕೆಲಸ ಅಧಿಕಾರಿಗಳಾದ ನಮ್ಮ ಕೆಲಸವಾಗಿರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.