Advertisement

ಕೊರಟಗೆರೆ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ತವರು ಹೋಬಳಿಯಲ್ಲಿ ಹಲವರು ಬಿಜೆಪಿ ಸೇರ್ಪಡೆ

03:29 PM Feb 27, 2023 | Team Udayavani |

ಕೊರಟಗೆರೆ: ವಿಧಾನ ಸಭಾ ಕ್ಷೇತ್ರದ ಭಾಜಪ ಆಕಾಂಕ್ಷಿ ಅಭ್ಯರ್ಥಿ ಮಾಜಿ ಐಎಎಸ್ ಅಧಿಕಾರಿ ಹೆಚ್. ಅನಿಲ್ ಕುಮಾರ್ ಜನಪರ ಕೆಲಸ ಕಾರ್ಯಗಳನ್ನು ಮೆಚ್ಚಿ, ಭಾರತೀಯ ಜನತಾ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಮುಖಂಡರು, ವಕೀಲರು, ಮಹೇಶ್ ಕುಮಾರ್ ನೇತೃತ್ವದಲ್ಲಿ ಹೊಳವನಹಳ್ಳಿಯ ಕಾಂಗ್ರೆಸ್ ಹಾಗೂ ಜೆಡಿಎಸ್ ನ 150 ಕ್ಕೂ ಅಧಿಕ ಮುಖಂಡರು, ಕಾರ್ಯಕರ್ತರು ಎರಡು ಪಕ್ಷ ತೊರೆದು ಅಭ್ಯರ್ಥಿ ಅನಿಲ್ ಕುಮಾರ್ ಹಾಗೂ ಮಂಡಲ ಅಧ್ಯಕ್ಷ ಪವನ್ ಕುಮಾರ್ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು.

Advertisement

ತಾಲೂಕಿನ ಹೊಳವನಹಳ್ಳಿ ಹೋಬಳಿಯು ಕಾಂಗ್ರೆಸ್ ಭದ್ರಕೋಟೆ ಎಂದೇ ಹೇಳಬಹುದು. ಆದರೆ ಈ ಹೋಬಳಿಯಲ್ಲಿ ಬರುವ ಎಲ್ಲಾ ಹಳ್ಳಿಗಳಿಗೂ ಭೇಟಿ ಕೊಟ್ಟು ತಮ್ಮ ಪಕ್ಷದ ಸಿದ್ಧಾಂತ ಒಪ್ಪಿಕೊಂಡ ಯುವಕರನ್ನು ತಮ್ಮ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮ ಪ್ರತಿ ಗ್ರಾಮದಲ್ಲಿ ಮಾಡುತ್ತಿರುವ ಅನಿಲ್ ಕುಮಾರ್ ನಡೆ ನೋಡಿ ವಿರೋದ ಪಕ್ಷದ ಮುಖಂಡರಿಗೆ ನಿದ್ದೆಕೆಡಿಸಿದೆ.

ನಿನ್ನೆ ನಡೆದ ಹೊಳವನಹಳ್ಳಿ ಹೋಬಳಿ ಕೇಂದ್ರದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಜೆಡಿಎಸ್ ಪಕ್ಷದವರು ಬೆರಳೆಣಿಕೆಯಷ್ಟು ಜನ ಮಾತ್ರ ಸೆರ್ಪಡೆಯಾದರೆ ಬಹುತೇಕ ಮಂದಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದಾರೆ.

ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಆಕಾಂಕ್ಷಿ ಅಭ್ಯರ್ಥಿ, ಮಾಜಿ ಐಎಎಸ್ ಅಧಿಕಾರಿ ಅನಿಲ್ ಕುಮಾರ್, ಅನ್ನದಾತ ರೈತರಿಗೆ, ಶಿಕ್ಷಣಕ್ಕೆ, ಬಡ ಕುಟುಂಬಗಳಿಗೆ ಸರ್ಕಾರದ ಎಲ್ಲಾ ಸವಲತ್ತುಗಳು ನೇರವಾಗಿ ಸಿಗುತ್ತಿದೆ ಎಂದರು.  ಪ್ರಧಾನಿ ನರೇಂದ್ರ ಮೋದಿ, ಬಸವರಾಜು ಬೊಮ್ಮಾಯಿ, ಯಡಿಯೂರಪ್ಪನವರ ಸರ್ಕಾರದಲ್ಲಿ ಮಾತ್ರ ಹೆಚ್ಚಾಗಿ ಎಲ್ಲಾ ಸವಲತ್ತುಗಳು ಸಿಕ್ಕಿದೆ ಎಂದು ಹೇಳಿದರು.

2023ರಲ್ಲಿ ಬಿಜೆಪಿ ಪಕ್ಷ ರಾಜ್ಯದಲ್ಲಿ ಮತ್ತು ಕೊರಟಗೆರೆ ಕ್ಷೇತ್ರದಲ್ಲಿ ಹೆಚ್ಚಿನ ಬಹುಮತಗಳಿಂದ ಗೆದ್ದು ಸರ್ಕಾರ ರಚಿಸುವುದು ಖಚಿತ. ಈ ಬಾರಿ ಪಕ್ಷ ಅಧಿಕಾರಕ್ಕೆ ಬರುವಂತೆ ಕ್ಷೇತ್ರದ ಜನತೆ ಆಶೀರ್ವಾದಿಸಿ, ಪಕ್ಷದ ಸಾಧನೆಗಳ ಬಗ್ಗೆ ತಿಳಿದು ಇತರೆ ಪಕ್ಷಗಳನ್ನು ತೊರೆದು ಮುಖಂಡರು ನಮ್ಮ ಪಕ್ಷಕ್ಕೆ ಸೇರ್ಪಡೆಗೊಂಡಿರುವುದಕ್ಕೆ ತಮಗೆಲ್ಲಾ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.

Advertisement

ಬಿಜೆಪಿ ಪಕ್ಷದ ತಾಲೂಕು ಅಧ್ಯಕ್ಷ ಪವನ್‍ಕುಮಾರ್ ಮಾತನಾಡಿ, ಇತರೆ ಪಕ್ಷಗಳನ್ನು ತೊರೆದು ನಮ್ಮ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು ಪಕ್ಷವನ್ನು ಇನ್ನಷ್ಟು ಬಲಿಷ್ಟಗೊಳಿಸಿರುವುದಕ್ಕೆ ತಮಗೆಲ್ಲಾ ಅಭಿನಂದನೆ ಜೊತೆಗೆ ಧನ್ಯವಾದ. ಪಕ್ಷದ ಮುಖಂಡರು, ಕಾರ್ಯಕರ್ತರ ಹೆಚ್ಚಿನ ಶ್ರಮ ಮತ್ತು ಜನಸ್ಪಂದನೆ ನೋಡಿದರೆ 2023ರ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದಲ್ಲಿ ಕಮಲ ಅರಳುವುದು ಖಚಿತ ಎಂದು ಆತ್ಮವಿಶ್ವಾಸವನ್ನು ಹೊರಹಾಕಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಪವನ್ ಕುಮಾರ್, ಮಾಜಿ ತೆಂಗು ನಾರು ನಿಗಮದ ಅದ್ಯಕ್ಷ ವೆಂಕಟಾಚಲಯ್ಯ (ಚಿಲಿ) ದಾಡಿ ವೆಂಕಟೇಶ್, ಗಂಗಣ್ಣ, ಗೋವಿಂದರಾಜು, ರಕ್ಷಿತ್‌, ಮಹೇಶ್, ಸಂಜಿವರೆಡ್ಡಿ, ವೆಂಕಟೇಶ್, ಉಮೇಶ್, ಶ್ರೀನಿವಾಸ್, ಶಿವರಾಜ್, ಮಂಜುನಾಥ್, ದರ್ಶನ್, ರಮೇಶ್, ಮುರುಳಿ ಸೇರಿದಂತೆ ಅನೇಕ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next