Advertisement

ಆಕಸ್ಮಿಕ ಬೆಂಕಿಗೆ ಅಡಿಕೆ, ಬಾಳೆ ಗಿಡಗಳು ನಾಶ… ಅಗ್ನಿಶಾಮಕ ಸಿಬ್ಬಂದಿ ವಿರುದ್ಧ ಆಕ್ರೋಶ

08:04 PM Mar 27, 2024 | Team Udayavani |

ಕೊರಟಗೆರೆ: ಆಕಸ್ಮಿಕ ಬೆಂಕಿಗೆ ಅಡಿಕೆ ಹಾಗೂ ಬಾಳೆಯ ಗಿಡಗಳು ಸಂಪೂರ್ಣ ನಾಶವಾಗಿರುವ ಘಟನೆ ಕಟ್ಟೆಬಾರೆಯಲ್ಲಿ ನಡೆದಿದೆ. ಆಗ್ನಿಶಾಮಕ ದಳಕ್ಕೆ ಕರೆ ಮಾಡಿದರೂ ಸ್ಪಂದಿಸ ಸಿಬ್ಬಂದಿ, ಸಾರ್ವಜನಿಕರ ಆಕ್ರೋಶ.

Advertisement

ತಾಲೂಕಿನ ಹೊಳವನಹಳ್ಳಿ ಹೋಬಳಿಯ ಕ್ಯಾಮೇನಹಳ್ಳಿ ಗ್ರಾಪಂ ವ್ಯಾಪ್ತಿಯ ಹುಚ್ಚರಾಯನಪಾಳ್ಯ ಗ್ರಾಮದ ಉಮಾಶಂಕರಾಧ್ಯ ಅವರಿಗೆ ಸೇರಿದ ಕಟ್ಟೆಬಾರೆಯಲ್ಲಿರುವ ಕೋಡ್ಲಹಳ್ಳಿ ಸರ್ವೇ.90/2 ರಲ್ಲಿ ಸುಮಾರು ಬಂದು ಸಾವಿರಕ್ಕೂ ಅಧಿಕ ಅಡಿಕೆ ಹಾಗೂ ಬಾಳೆ ಗಿಡಗಳನ್ನ ಬೆಳೆಸಲಾಗಿತ್ತು. ಬುಧವಾರ ಸಂಜೆ 4 ಗಂಟೆಗೆ ಆಕಸ್ಮಿಕವಾಗಿ ಬೆಂಕಿ ತಗಲಿದೆ. ಬೆಂಕಿಯಲ್ಲಿ ಬಡ ರೈತನ ಸುಮಾರು 200 ಆಡಿಕೆ ಗಿಡ ಹಾಗೂ 200 ಬಾಳೆ ಗಿಡಿಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಂಪೂರ್ಣ ನಾಶವಾಗಿದೆ. ಬಡ ರೈತನ ಅಡಿಕೆ ಬಾಳೆ ಗಿಡಗಳು ಪಸಲುಗೆ ಬರುವ ಮುಂಚ್ಚೆಯೇ ನಾಶವಾಗಿರುವುದು ಶೋಚನೀಯ ಸಂಗತಿ. ಸ್ಥಳಕ್ಕೆ ತೋಟಗಾರಿಕೆ ಅಧಿಕಾರಿಗಳು ಭೇಟಿ ನೀಡಿ ರೈತನಿಗೆ ಸೂಕ್ತ ಪರಿಹಾರ ನೀಡಬೇಕಿದೆ.

ಸ್ಥಳಕ್ಕೆ ಬಾರದ ಆಗ್ನಿಶಾಮಕ ತಂಡ
ಬೆಂಕಿ ತಗಲಿದ ತಕ್ಷಣ ತೋಟದ ಮಾಲಿಕ ಆಗ್ನಿಶಾಮಕ ಕಚೇರಿಗೆ ದೂರವಾಣಿ ಕರೆ ಮಾಡಿದ್ದಾರೆ ಕರೆಗೆ ಯಾರು ಸ್ಪಂದಿಸದೇ ಇರುವ ಕಾರಣ ಸ್ಥಳಕ್ಕೆ ಹೋಗಿ ನಡೆದ ಘಟನೆ ಬಗ್ಗೆ ತಿಳಿಸಿದರೂ ಅಧಿಕಾರಿಗಳು ಸ್ಪಂದಿಸಿಲ್ಲ. ನಮ್ಮಲ್ಲಿ ವಾಹನ ಇಲ್ಲ ಮಧುಗಿರಿಯಿಂದ ಬರುತ್ತೆ ಎಂದು ಕಾಲಹರಣ ಮಾಡಿದ್ದಾರೆ. ನಂತರ ಸ್ಥಳೀಯರ ಸಹಾಯದಿಂದ ಸೋಪ್ಪು ಹಾಗೂ ನೀರಿನಿಂದ ಬೆಂಕಿಯನ್ನ ನಿಂದಿಸಿದ್ದಾರೆ.

ರೈತ ಉಮಾಶಂಕರಾಧ್ಯ ಮಾತನಾಡಿ ನಾನು ಬಡರೈತನಾಗಿದ್ದು ಜೀವನ ನಡೆಸಲು ಸುಮಾರು 1 ಸಾವಿರಕ್ಕೂ ಅಧಿಕ ಅಡಿಕೆ, ಬಾಳೆಯನ್ನ ಹಾಕಲಾಗಿತ್ತು. ಪಸಲು ಬರುವ ಮುಂಚೆಯೇ ಬೆಂಕಿಗೆ ಸಿಲುಕಿ ಸಂಪೂರ್ಣ ನಾಶವಾಗಿದೆ. ಅಗ್ನಿಶಾಮಕ ಅಧಿಕಾರಿಗಳ ತಿಳಿಸಿದರೂ ಸ್ಥಳಕ್ಕೆ ಬಾರದೆ ದಿವ್ಯ ನಿರ್ಲಕ್ಷ್ಯ ತೊರಿದ್ದಾರೆ. ಅಡಿಕೆ ಬಾಳೆ ಗಿಡಗಳನ್ನ ಕಳೆದುಕೊಂಡಿದ್ದೇನೆ ತೋಟಗಾರಿಕೆ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next