ಕೊರಟಗೆರೆ: ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಮರೇನಾಯಕನಹಳ್ಳಿ ಗ್ರಾಮ ವಾಸಿಯಾದ ರಮೇಶ್ ಎಂ ಎನ್ ಬಿನ್ ನಂಜುಂಡಪ್ಪ ಎನ್ನುವ ಪ್ರಗತಿಪರ ರೈತನ ಜಮೀನಿಗೆ ಬೆಂಕಿ ಬಿದ್ದು ಅಪಾರ ಹಾನಿಯಾಗಿರುವ ಘಟನೆ ನಡೆದಿದೆ.
ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಮರೇನಾಯಕನಹಳ್ಳಿ ಗ್ರಾಮದ ಸರ್ವೆ ನಂಬರ್ 7 ರಲ್ಲಿ ತೆಂಗಿನ ತೋಟವಿದ್ದು ತೋಟದಲ್ಲಿದ್ದ ಗುಡಿಸಲಿನಲ್ಲಿ ವ್ಯವಸಾಯಕ್ಕಾಗಿ ಬಳಸುತ್ತಿದ್ದ ಪರಿಕರಗಳಾದ ಮೋಟಾರ್ ಸ್ಟಾರ್ಟರ್ ಪೈಪ್ ಕೇಬಲ್ ವೈರ್ ಕಂಪ್ರೆಸರ್, ಕೇಬಲ್ ಪೈಪ್ ಪವರ್ ಸ್ಟ್ರೈಯರ್ ಮತ್ತು ಇತ್ಯಾದಿ ಬೆಲೆ ಬಾಳುವ ವಸ್ತುಗಳು ಬೆಂಕಿಯಲ್ಲಿ ಸುಟ್ಟು ಹೋಗಿವೆ.
ಈ ಕುರಿತು ಮಾತನಾಡಿದ ರೈತ ರಮೇಶ್, ಮರೇನಾಯಕನಹಳ್ಳಿ ಗ್ರಾಮದ ಸರ್ವೆ ನಂಬರ್ 7 ರಲ್ಲಿ ನಾನು ಜಮೀನು ಹೊಂದಿದ್ದು ಮಧ್ಯಾಹ್ನ ಸುಮಾರು 3 : 00 ಗಂಟೆಯ ಸುಮಾರಿಗೆ ಬೆಂಕಿ ಬಿದ್ದ ಹಿನ್ನೆಲೆಯಲ್ಲಿ ಮೂರು ಸ್ಟಾರ್ಟರ್, ಮೋಟಾರ್ ಗಳು, ಒಂದು 5 ಎಚ್ ಪಿ ಮೋಟಾರ್, ಒಂದು ಏರ್ ಕಂಪ್ರೆಸರ್, ಎರಡು ಪವರ್ ಸ್ಪೇಯರ್, 30 ಮೀಟರ್ ನಷ್ಟು ಕೇಬಲ್ ಬೆಂಕಿಯಿಂದ ಸುಟ್ಟು ಹೋಗಿರುತ್ತವೆ ಇದಕ್ಕೆ ಸಂಬಂಧಪಟ್ಟಂತೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಹಾಗೂ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಖುದ್ದು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಘಟನೆ ನಡೆದು 24 ಗಂಟೆ ಕಳೆದರೂ ಕೂಡ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ರೈತನ ಜಮೀನಿಗೆ ಭೇಟಿ ಕೊಡದೇ ಇರುವುದು ಬೇಸರದ ಸಂಗತಿಯಾಗಿದೆ.ಇನ್ನಾದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಾಢ ನಿದ್ರೆಯಿಂದ ಎದ್ದು 85 ಸಾವಿರಕ್ಕೂ ಅಧಿಕ ಬೆಲೆ ಬಾಳುವ ವಸ್ತುಗಳನ್ನು ಪರಿಶೀಲಿಸಿ ಹಾಗೂ ಸ್ಥಳ ಪರಿಶೀಲನೆ ಮಾಡಿ ವ್ಯವಸಾಯವನ್ನೆ ನಂಬಿ ಜೀವನ ನಡೆಸುತ್ತಿದ್ದ ಪ್ರಗತಿಪರ ರೈತನ ಕುಟುಂಬಕ್ಕೆ ಸರ್ಕಾರದಿಂದ ನೀಡುವಂತಹ ಪರಿಹಾರದ ಹಣವನ್ನು ನೀಡಬೇಕಾಗಿದೆ.
ಇದನ್ನೂ ಓದಿ: ಸಲಿಂಗಿ ದಂಪತಿಗಳ ಮಗುವಿನ ನಾಮಕರಣ ಸಮಾರಂಭ; ಹಿತೈಷಿಗಳು ಭಾಗಿ