Advertisement

11 ಕೋಟಿ 11 ಲಕ್ಷ ಕಾಮಗಾರಿಗೆ ಮಾಜಿ ಡಿಸಿಎಂ ಚಾಲನೆ

09:11 AM Nov 23, 2022 | Team Udayavani |

ಕೊರಟಗೆರೆ: 15 ವಾರ್ಡುಗಳ ಸಮಗ್ರ ಅಭಿವೃದ್ದಿಗೆ 11 ಕೋಟಿ 11 ಲಕ್ಷದ ಕಾಮಗಾರಿಗೆ ಅಡಿಗಲ್ಲು ಹಾಕಿದ್ದೇನೆ. 10 ಕೋಟಿ ವೆಚ್ಚದ ಕೊರಟಗೆರೆ ಪಟ್ಟಣದ ಮುಖ್ಯರಸ್ತೆಯ ಕಾಮಗಾರಿಯು ಪ್ರಸ್ತುತ ಮುಗಿದಿದೆ. ಅಭಿವೃದ್ದಿ ವಿಚಾರದಲ್ಲಿ ರಾಜಕೀಯದ ಬಣ್ಣಬೇಡ, ರಾಜಕೀಯ ನಾಯಕರಿಗೆ ಕೀಳು ಭಾವನೆಯ ಮನಸ್ಥಿತಿ ಒಳ್ಳೆಯದಲ್ಲ. ನನಗೆ ಕೊರಟಗೆರೆ ಪಟ್ಟಣದ ಸಮಗ್ರ ಅಭಿವೃದ್ದಿಯೇ ಮುಖ್ಯ ಎಂದು ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ತಿಳಿಸಿದರು.

Advertisement

ಪಟ್ಟಣದ ಪಪಂಯಿಂದ ಮಂಗಳವಾರ ಏರ್ಪಡಿಸಲಾಗಿದ್ದ 15 ವಾರ್ಡುಗಳಲ್ಲಿ 11ಕೋಟಿ 11 ಲಕ್ಷ ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿದ ವೇಳೆ ಮಾತನಾಡಿದರು.

ಗೋಕುಲದ ಕೆರೆಯ ಸುತ್ತಲು ಸುಸಜ್ಜಿತ ಉದ್ಯಾನವನ ನಿರ್ಮಾಣಕ್ಕೆ 10 ಕೋಟಿ ಅನುದಾನಕ್ಕೆ ಸರಕಾರಕ್ಕೆ ಮನವಿ ಮಾಡಿದ್ದೇನೆ. ಕೊರಟಗೆರೆ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ 2 ಕೋಟಿ ವೆಚ್ಚದ ಮಲ್ಲೇಶಪರ ಸೇತುವೆ ಈಗಾಗಲೇ ಪೂರ್ಣವಾಗಿದೆ. ಕೊರಟಗೆರೆ ಪಟ್ಟಣದಲ್ಲಿ ಅಭಿವೃದ್ದಿಯ ವಾತಾವರಣ ನಿರ್ಮಾಣವಾಗಿದೆ. ಕೊರಟಗೆರೆ ಕ್ಷೇತ್ರದ ಅಭಿವೃದ್ದಿಯ ಅಂಕಿ-ಅಂಶದ ದಾಖಲೆಯನ್ನು ನಿಮಗೆ ನೀಡಿ ಮತ್ತೆ ಚುನಾವಣೆಗೆ ನಿಮ್ಮ ಮುಂದೆ ಬರುತ್ತೇನೆ ಎಂದು ತಿಳಿಸಿದರು.

ಕೊರಟಗೆರೆ ಪ.ಪಂ. ಅಧ್ಯಕ್ಷೆ ಕಾವ್ಯ ರಮೇಶ್ ಮಾತನಾಡಿ, ಟಿಎಸ್‌ಪಿ ಅನುಧಾನ189ಲಕ್ಷ, ಎಸ್‌ಸಿಎಸ್‌ಪಿ ಅನುದಾನ-96 ಲಕ್ಷ, ಎಸ್‌ಎಫ್‌ಸಿ 6 ಕೋಟಿ, 14ನೇ ಹಣಕಾಸು ಅನುದಾನ-38 ಲಕ್ಷ, 15ನೇ ಹಣಕಾಸು ಅನುದಾನ-157 ಲಕ್ಷ ಮತ್ತು ಎಸ್‌ಎಫ್‌ಸಿ ಅನುಧಾನ 29 ಲಕ್ಷ ಸೇರಿ ಒಟ್ಟು 11 ಲಕ್ಷ 11 ಕೋಟಿ ವೆಚ್ಚದ ಅಭಿವೃದ್ದಿ ಕಾಮಗಾರಿಗೆ ಪಟ್ಟಣದ 15 ವಾರ್ಡುಗಳಲ್ಲಿ ಚಾಲನೆ ನೀಡಲಾಗಿದೆ. ಪಟ್ಟಣದ ಅಭಿವೃದ್ದಿಗೆ ಶಾಸಕರ ಇನ್ನಷ್ಟು ಸಹಕಾರ ನಮಗೆ ಅಗತ್ಯವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ.ಪಂ. ಅಧ್ಯಕ್ಷೆ ಕಾವ್ಯಶ್ರೀ, ಉಪಾಧ್ಯಕ್ಷೆ ಭಾರತಿ, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎನ್.ನಟರಾಜ್, ಮುಖ್ಯಾಧಿಕಾರಿ ಭಾಗ್ಯಮ್ಮ, ಸದಸ್ಯರಾದ ಕೆ.ಆರ್.ಓಬಳರಾಜು, ಪುಟ್ಟನರಸಪ್ಪ, ಎ.ಡಿ.ಬಲರಾಮಯ್ಯ, ನಾಗರಾಜು, ಲಕ್ಷ್ಮೀನಾರಾಯಣ್, ನಂದೀಶ್, ಹುಸ್ನಾಫಾರಿಯಾ, ಅನಿತಾ, ಹೇಮಾಲತಾ, ಪ್ರದೀಪ್ ಕುಮಾರ್, ಮಂಜುಳ, ಪ್ರೇಮ್‌ಕುಮಾರ್, ಗೋವಿಂದರಾಜು, ರಂಗನಾಥ್ ಸೇರಿದಂತೆ ಇತರರು ಇದ್ದರು.

Advertisement

ಕೆರೆ ಒತ್ತುವರಿ ತೆರವಿಗೆ ಶಾಸಕ ಸೂಚನೆ

ಅಧಿಕಾರಿಗಳ ನಿರ್ಲಕ್ಷ್ಯದಿಂದ ಒಡೆದು ಹೋದ ಕಾವರ್ಗಲ್ ಕಂಬದಹಳ್ಳಿ ಕೆರೆಗೆ ಜಿಪಂ ಸಿಇಓ ಡಾ.ವಿದ್ಯಾಕುಮಾರಿ ಜೊತೆ ಶಾಸಕ ಡಾ.ಜಿ.ಪರಮೇಶ್ವರ್ ಬೇಟಿ ನೀಡಿ ಪರಿಶೀಲನೆ ನಡೆಸಿ ತಕ್ಷಣ ಪುನಶ್ಚೇತನಕ್ಕೆ ಅನುದಾನ ನೀಡುವಂತೆ ಆಗ್ರಹಿಸಿದರು. ನಂತರ ಜಂಪೇನಹಳ್ಳಿಗೆ ಕೆರೆಗೆ ಗಂಗಾ ಪೂಜೆ ಅರ್ಪಿಸಿ ಬಳಿಕ ಕೆರೆಯ ಒತ್ತುವರಿ ತೆರವು ಮತ್ತು ಪುನಶ್ಚೇತನ ಕಾಮಗಾರಿಗೆ ತಕ್ಷಣ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವೃಕ್ಷ ಉದ್ಯಾನವನಕ್ಕೆ 9 ಎಕ್ರೆ ಜಮೀನು ಮಂಜೂರು

ವೃಕ್ಷ ಉದ್ಯಾನವನ ನಿರ್ಮಾಣಕ್ಕೆ ರಾಜ್ಯ ಸರಕಾರ ಸರ್ವೇ ನಂ.174ರಲ್ಲಿ 9 ಎಕ್ರೆ ಜಮೀನು ಮಂಜೂರು ಮಾಡಿದೆ. ಸುಂದರ ಉದ್ಯಾನವನಕ್ಕಾಗಿ 250 ಲಕ್ಷ ಅನುದಾನಕ್ಕೂ ಮನವಿ ಮಾಡಿದ್ದು ಈಗಾಗಲೇ 50 ಲಕ್ಷ ಅನುದಾನ ಬಿಡುಗಡೆ ಆಗಿದೆ. ಸುಂದರ ಕೊರಟಗೆರೆ ಪಟ್ಟಣ ನಿರ್ಮಾಣಕ್ಕಾಗಿ ಕಲಾಭವನಕ್ಕೆ 50 ಕೋಟಿ ವೆಚ್ಚದ ಕಲಾಭವನವನ್ನು ನಾನು ಮಾಡೇ ಮಾಡ್ತೀನಿ ಎಂದು ಶಾಸಕ ಡಾ.ಜಿ.ಪರಮೇಶ್ವರ್ ಪಟ್ಟಣದ ಜನತೆಗೆ ಭರವಸೆ ನೀಡಿದರು.

35 ವರ್ಷದ ರಾಜಕೀಯ ಜೀವನದಲ್ಲಿ ನಾನೆಂದು ಚಿಲ್ಲರೇ ರಾಜಕೀಯ ಮಾಡಿಲ್ಲ. ಅಭಿವೃದ್ದಿ ವಿಚಾರದಲ್ಲಿ ನಾನು ಯಾರಿಗೂ ಹೆದರುವ ನಾಯಕನಲ್ಲ. ನಾನು ನನಗೋಸ್ಕರ ಕೆಲಸ ಮಾಡುತ್ತಿಲ್ಲ. ಕೊರಟಗೆರೆ ಜನತೆಗಾಗಿ ಕೆಲಸ ಮಾಡ್ತೀದಿನಿ. ಕೊರಟಗೆರೆ ಕ್ಷೇತ್ರದ ಜನತೆಯ ಋಣ ನನ್ನ ಮೇಲಿದೆ. ನಾನು ಇರುವವರೆಗೆ ಅನುದಾನ ತಂದು ಕೊರಟಗೆರೆ ಜನರ ಕೆಲಸ ಮಾಡೇ ಮಾಡ್ತೀನಿ. –ಡಾ.ಜಿ.ಪರಮೇಶ್ವರ, ಶಾಸಕ, ಕೊರಟಗೆರೆ

Advertisement

Udayavani is now on Telegram. Click here to join our channel and stay updated with the latest news.

Next