Advertisement
ಕೊರಟಗೆರೆ ಪಟ್ಟಣದ 1, 2, 3 ಮತ್ತು 9ನೇ ವಾರ್ಡಿನಲ್ಲಿ ಹುಚ್ಚುನಾಯಿ ಕಂಡಕಂಡವರ ಮೇಲೆ ಅಟ್ಟಾಡಿಸಿಕೊಂಡು ದಾಳಿ ನಡೆಸಿದೆ.
ಕೊರಟಗೆರೆ ಪಟ್ಟಣದ 15ವಾರ್ಡಿನಲ್ಲಿ 450ಕ್ಕೂ ಅಧಿಕ ಬೀದಿನಾಯಿಗಳಿವೆ. ಮಟನ್ ಮಾರ್ಕೆಟ್, ರೇಣುಕಾ ಆಸ್ಪತ್ರೆ, ಸಾರ್ವಜನಿಕ ಆಸ್ಪತ್ರೆ, ಅಂಚೆಕಚೇರಿ, ಕದಂಬಬಾರ್, ಕಾಳಿದಾಸ ಶಾಲೆ, ಊರ್ಡಿಗೆರೆ ಕ್ರಾಸ್, ಕಾಲೇಜು ಮೈದಾನದಲ್ಲಿ ಹಿಂಡುಹಿಂಡಾಗಿ ನಾಯಿಗಳ ಆರ್ಭಟ ಹೆಚ್ಚಾಗಿವೆ. ನಾಯಿಗಳ ನಿಯಂತ್ರಣ ಮಾಡುವಲ್ಲಿ ಕೊರಟಗೆರೆ ಪಪಂ ಸಂಪೂರ್ಣ ವಿಫಲವಾಗಿದೆ.
Related Articles
Advertisement
ಜನರ ಕರೆಗೆ ಸೀಗದ ತುರ್ತುವಾಹನ
ಹುಚ್ಚುನಾಯಿ ದಾಳಿಯಿಂದ ತೀರ್ವ ಗಾಯಗೊಂಡ ವೃದ್ದರನ್ನು ಕೊರಟಗೆರೆ ಆಸ್ಪತ್ರೆಯಿಂದ ತುಮಕೂರಿಗೆ ರವಾನಿಸಲು ತುರ್ತುವಾಹನ ಸಿಗದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ತುರ್ತುವಾಹನಕ್ಕೆ ಕರೆಮಾಡಿ 15ನಿಮಿಷ ಕಾದರು ಗ್ರಾಹಕಕೇಂದ್ರದ ಸಿಬಂದಿ ವರ್ಗ ತಡೆಹಿಡಿದು ತುರ್ತುವಾಹನ ಕಳಿಸದೇ ಗಾಯಾಳುಗಳಿಗೆ ಉಡಾಫೆ ಉತ್ತರ ನೀಡಿರುವ ಘಟನೆ ನಡೆದಿದೆ.
ಬೀದಿನಾಯಿ ಜನರ ಮೇಲೆ ಏಕಾಏಕಿ ದಾಳಿ ಮಾಡಿದ್ದು, ಕೊರಟಗೆರೆ ಪಟ್ಟಣದಲ್ಲಿ ಬೀದಿ ನಾಯಿಗಳ ಸಂತಾನೋತ್ಪತ್ತಿ ತಡೆಯಲು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಹೊಸದಾಗಿ ಬೀದಿನಾಯಿಗಳ ಅಂಕಿ ಅಂಶದ ಸರ್ವೆ ನಡೆಸಬೇಕಿದೆ. ಪಪಂ ಮತ್ತು ಪಶು ಇಲಾಖೆ ಜಂಟಿಯಾಗಿ ಕಾರ್ಯಚರಣೆ ನಡೆಸಿ ನಾಯಿದಾಳಿ ತಡೆಯುತ್ತೇವೆ ಎಂದು ಕೊರಟಗೆರೆ ಪಪಂ.ಆರೋಗ್ಯಾಧಿಕಾರಿ ಮೊಹಮ್ಮದ್ ಹುಸೇನ್ ಹೇಳಿಕೆ ನೀಡಿದ್ದಾರೆ.