Advertisement
ಕೊರಟಗೆರೆ ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ತಾಲೂಕು ಕುರುಬ ಸಮಾಜ ಹಮ್ಮಿಕೊಂಡಿದ್ದ ಕೊರಟಗೆರೆ ವಿಧಾನ ಸಭಾ ಕ್ಷೇತ್ರದ ಕುರುಬರ ಜಾಗೃತಿ ಸಮಾವೇಶ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ-2022-23 ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಜಾತಿ ವ್ಯವಸ್ಥೆಯ ಹೋರಾಟದಲ್ಲಿ ಬಸವಣ್ಣ ನವರು ಮೊದಲಿಗರಾಗಿದ್ದು ಎರಡನೇ ವ್ಯಕ್ತಿ ಕನಕದಾಸರಾಗಿದ್ದಾರೆ, ಕನಕದಾಸರು ಇತಿಹಾಸದಲ್ಲಿ ಅಜೇಯರಾಗಿ ಕುರುಬ ಸಮಾಜಕ್ಕೆ ಸೀಮಿತವಾಗದೆ ಎಲ್ಲಾ ಮನು ಕುಲದ ಅಭಿವೃದ್ದಿಗೆ ಜನಿಸಿದ ವ್ಯಕ್ತಿಯಾದರೆ ಮತ್ತೊಬ್ಬ ಕುರುಬ ಸಮುದಾಯದ ಸಂಗೋಳ್ಳಿ ರಾಯಣ್ಣ, ಕಿತ್ತೂರು ರಾಣಿ ಚನ್ನಮ್ಮರೊಡನೆ ಸ್ವಾತಂತ್ರಕ್ಕಾಗಿ ಹೋರಾಟವನ್ನು ಪ್ರಪ್ರಥಮವಾಗಿ ಪ್ರಾರಂಭಿಸಿದ ವ್ಯಕ್ತಿಯಾಗಿದ್ದು ಕುರುಬ ಸಮುದಾಯ ದೇಶದಲ್ಲಿ ಹಾಲಿನಂತ ಮನಸ್ಸಿರುವ ಹಾಲು ಮತಸ್ಥರು ಎಂದು ಇತಿಹಾಸದಲ್ಲಿ ಬರೆದಿದೆ ಎಂದರು.
Related Articles
Advertisement
ಕೆಪಿಸಿಸಿ ಕಾರ್ಯದರ್ಶಿ ಹಾಗೂ ಯುವನಾಯಕ ವಿಕೇತ್ ರಾಜ್ ಮೌರ್ಯ ಮಾತನಾಡಿ, ರಾಜ್ಯದಲ್ಲಿ ಕಳೆದ ೨೦೧೩ ರಲ್ಲಿ ಸಿದ್ದರಾಮಯ್ಯನವರು 5 ವರ್ಷಗಳ ಕಾಲ ಸದೃಢ ಸರ್ಕಾರ ನಡೆಸಲು ಮುಖ್ಯ ಕಾರಣಿಕರ್ತರಾದ ಡಾ.ಜಿ.ಪರಮೇಶ್ವರ ರವರನ್ನು ನಾವು ಕುರುಬ ಸಮುದಾಯ ಅಭಿನಂದಿಸಬೇಕು ಮುಂದಿನ 2023 ರ ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸರ್ಕಾರ ರಚನೆ ಮಾಡುವುದು ಖಚಿತವಾಗಿದ್ದು ಸರ್ಕಾರದಲ್ಲಿ ಡಾ.ಜಿ.ಪರಮೇಶ್ವರ ಉನ್ನತ ಸ್ಥಾನ ಪಡೆಯುವುದು ಖಚಿತವಾಗಿದೆ. ಕೊರಟಗೆರೆ ಅಭಿವೃಧ್ದಿಯಲ್ಲಿ ರಾಜ್ಯದಲ್ಲಿಯೇ ಕೊರಟಗೆರೆ ಮಾದರಿ ಕ್ಷೇತ್ರವಾಗುವುದರಲ್ಲಿ ಅನುಮಾನವಿಲ್ಲ.2012 ರಲ್ಲಿ ಡಾ.ಜಿ.ಪರಮೇಶ್ವರ ರವರ ಸೋಲಿಗೆ ಕುರುಬ ಸಮುದಾಯ ಕಾರಣ ಎಂಬ ಕಳಂಕವಿದ್ದು ಅದನ್ನು ಹೋಗಲಾಡಿಸಲು 2023 ರಲ್ಲಿ ಡಾ.ಜಿ.ಪರಮೇಶ್ವರ ರವರನ್ನು ಅಭೂತ ಪೂರ್ವವಾಗಿ ಗೆಲ್ಲಿಸಬೇಕು ಎಂದರು
ವಿರೋಧ ಪಕ್ಷದವರು ತಮ್ಮ ಭಾಷಣಗಳಲ್ಲಿ ಒಂದೊಂದು ಕಡೆ ಒಂದೊಂದು ರೀತಿ ಭಾಷಣ ಮಾಡುತ್ತಾರೆ ಒಂದು ಕಡೆ ಭಾಷಣದಲ್ಲಿ ಡಾ.ಜಿ.ಪರಮೇಶ್ವರ ಸೋಲಿಗೆ ಸಿದ್ದರಾಮಯ್ಯ ಕಾರಣ ಎಂದು ಮತ್ತೊಂದು ಕಡೆ ಭಾಷಣದಲ್ಲಿ ಸಿದ್ದರಾಮಯ್ಯನವರಿಗೂ ಮತ್ತು ಡಾ.ಜಿ.ಪರಮೇಶ್ವರ ರಿಗೂ ಆಗುವುದಿಲ್ಲ ಎಂದು ಎತ್ತಿಕಟ್ಟುತ್ತಿದ್ದಾರೆ ಅದನ್ನು ಯಾರು ಪರಿಗಣಿಸಬಾರದು ಎಂದ ಅವರು ಈ ಬಾರಿ ಚುನಾವಣೆಯಲ್ಲಿ ಕುರುಬರ ನಡೆ ಪರಮೇಶ್ವರ್ ಕಡೆ ಎಂದು ಸಭೆಯಲ್ಲಿ ಎಲ್ಲರೂ ಎರಡೂ ಕೈಗಳನ್ನು ಎತ್ತುವ ಮೂಲಕ ತಮ್ಮ ಬೆಂಬಲ ವಕ್ತ ಪಡಿಸಿದರು.
ಕುರುಬರ ನಡೆ ಡಾ.ಜಿ.ಪರಮೇಶ್ವರ್ ಕಡೆ
2013 ರಲ್ಲಿ ಡಾ.ಜಿ.ಪರಮೇಶ್ವರ ರವರ ಸೋಲಿಗೆ ಕುರುಬ ಸಮುದಾಯ ಕಾರಣ ಎಂಬ ಕಂಳಂಕವಿದ್ದು ಅದನ್ನು ಹೋಗಲಾಡಿಸಲು 2023 ರಲ್ಲಿ ಡಾ.ಜಿ.ಪರಮೇಶ್ವರ ರವರನ್ನು ಅಭೂತ ಪೂರ್ವವಾಗಿ ಕುರುಬ ಸಮಾಜ ಬೆಂಬಲಿಸುವ ಮೂಲಕ ಕಳಂಕವನ್ನು ಹೋಗಲಾಡಿಸಬೇಕಿದೆ ಈ ಬಾರಿ ಚುನಾವಣೆಯಲ್ಲಿ ಕುರುಬರ ನಡೆ ಪರಮೇಶ್ವರ ಕಡೆ ಎಂದು ಕುರುಬ ಜಾಗೃತಿ ಸಭೆಯಲ್ಲಿ ಎಲ್ಲರೂ ಎರಡೂ ಕೈಗಳನ್ನು ಎತ್ತುವ ಮೂಲಕ ಡಾ.ಜಿ.ಪರಮೇಶ್ವರ ರವರಿಗೆ ತಮ್ಮ ಬೆಂಬಲ ವಕ್ತ ಪಡಿಸಿದರು.
ಕಾರ್ಯಕ್ರಮದಲ್ಲಿ ಪುರವರ ಮಾಜಿ ಜಿ.ಪಂ.ಸದಸ್ಯ ತಿಮ್ಮಯ್ಯ, ಸುಭಾಷ್ ಪಿಯು ಕಾಲೇಜು ಸಂಸ್ಥಾಪಕ ಗಂಗರಾಜು ಸೇರಿದಂತೆ ಇನ್ನಿತರ ಕುರುಬ ಮುಖಂಡರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿ ಡಾ.ಜಿ.ಪರಮೇಶ್ವರ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದರು. ವೇದಿಕೆಯಲ್ಲಿ ತಾಲೂಕು ಕುರುಬ ಸಮಾಜದ ಅಧ್ಯಕ್ಷ ಮೈಲಾರಪ್ಪ, ಕಾಳಿದಾಸ ವಿದ್ಯಾವರ್ಧಕ ಸಂಘದ ನಿದೇರ್ಶಕ ಜಿ.ಡಿ.ನಾಗಭೂಷಣ್, ಯುವ ಮುಖಂಡ ಹಾಗೂ ಪತ್ರಕರ್ತ ರಂಗಧಾಮಯ್ಯ, ಕೆ.ಪಿ.ಸಿ.ಸಿ ಸದಸ್ಯ ಎ.ಡಿ.ಬಲರಾಮಯ್ಯ, ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಕೊಡ್ಲಹಳ್ಳಿ ಅಶ್ವತ್ಥನಾರಾಯಣ್, ಅರಕೆರೆ ಶಂಕರ್, ಯುವಕಾಂಗ್ರೆಸ್ ಮುಖಂಡ ಗುರುಪ್ರಸಾದ್, ಬಂದ್ರೇಹಳ್ಳಿ ನಾಗರಾಜು, ಮಧುಗಿರಿ ಎಂ.ಜಿ.ಶ್ರೀನಿವಾಸ್, ಮಾಜಿ ಜಿ.ಪಂ.ಸದಸ್ಯ ಪುರವರ ತಿಮ್ಮಯ್ಯ, ಕುರುಬ ಸಮುದಾಯದ ಮುಖಂಡರುಗಳಾದ ನಾರಾಯಣಪ್ಪ, ದೇವರಾಜು, ಪುರವರ ಕರಿಯಣ್ಣ, ಗಂಗರಾಜು, ಕೆಂಪಣ್ಣ, ಈರಮಲ್ಲಣ್ಣ, ಹೆಚ್.ವೀರಣ್ಣ, ನಿವೃತ್ತ ಮುಖ್ಯಶಿಕ್ಷಕ ಕೆ.ಎಂ.ನಾಗಪ್ಪ, ಕೆಂಪರಂಗಪ್ಪ, ಬೈರವ್, ಲಕ್ಷ್ಮೀಪ್ರಸಾದ್, ಉಮಾಶಂಕರ್, ಚಂದ್ರಣ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.