ಕೊರಟಗೆರೆ: 67ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಬಿ ಎಚ್ ಅನಿಲ್ ಕುಮಾರ್ ಅಭಿಮಾನಿ ಬಳಗದ ವತಿಯಿಂದ ಕೊರಟಗೆರೆ ಪಟ್ಟಣದಲ್ಲಿ ಕೊರಟಗೆರೆ ಪೈಲ್ವಾನ್ ದಿವಂಗತ ಪಾಪಣ್ಣನವರ ವೇದಿಕೆಯಲ್ಲಿ ರಾಜ್ಯಮಟ್ಟದ ದೇಶಿ ಕುಸ್ತಿ ಪಂದ್ಯಾವಳಿಯನ್ನು ಬಹಳ ವಿಜೃಂಭಣೆಯಿಂದ ಆಯೋಜನೆಗೊಳಿಸಲಾಯಿತು.
ಕೊರಟಗೆರೆ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜ್ ಮೈದಾನದಲ್ಲಿ ಮೈಸೂರು ಸಂಸ್ಥಾನದ ಪ್ರಖ್ಯಾತಿಯ ಪೈಲ್ವಾನರಾದ ದಿವಂಗತ ಪಾಪಣ್ಣನವರ ಜ್ಞಾಪಕಾರ್ಥವಾಗಿ ಹೊನಲು ಬೆಳಕಿನ ರಾಜ್ಯ ಮಟ್ಟದ ದೇಶಿ ಕುಸ್ತಿ ಪಂದ್ಯಾವಳಿ ಆಯೋಜನೆಗೊಳಿಸಲ್ಲಾಗಿ, ಸಾರ್ವಜನಿಕರ ಮನೋರಂಜನೆಗೆ ಸುಮಧುರ ಸಂಗೀತ ನೃತ್ಯದೊಂದಿಗೆ ಬಹಳ ಯಶಸ್ವಿಯಾಗಿ ವಿಜೃಂಭಣೆಯಿಂದ ಆಯೋಜನೆಗೊಳಿಸಲಾಯಿತು.
ಕುಸ್ತಿ ಪಂದ್ಯಾವಳಿಯಲ್ಲಿ 100ಕ್ಕೂ ಹೆಚ್ಚು ಕುಸ್ತಿಪಟುಗಳು ಭಾಗವಹಿಸಿ ನೈಪುಣ್ಯತೆ ಪ್ರದರ್ಶಿಸಿದರು, ಗೆದ್ದ ವಿಜೇತರಿಗೆ ಪ್ರೋತ್ಸಾಹ ಧನ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಲೋಕಸಭಾ ಸದಸ್ಯ ಜಿಎಸ್ ಬಸವರಾಜು ಮಾತನಾಡಿ ನಮ್ಮ ಆತ್ಮೀಯ ಬಿ.ಹೆಚ್ ಅನಿಲ್ ಕುಮಾರ್ ಗ್ರಾಮೀಣ ಕ್ರೀಡೆ ಪ್ರೋತ್ಸಾಹಕ್ಕೆ ಕಾರ್ಯಕ್ರಮ ಆಯೋಜನೆಗೊಳಿಸಲಾಗಿದ್ದು ಯಾವುದೇ ಚುನಾವಣೆ ಉದ್ದೇಶದಿಂದ ಆಯೋಜನೆಗೊಳಿಸಲಾಗಿಲ್ಲ ಸಾರ್ವಜನಿಕರ ಮನೋರಂಜನೆಗೆ ಹಾಗೂ ಕೊರಟಗೆರೆ ಮೂಲದ ಮೈಸೂರು ಸಂಸ್ಥಾನ ಪ್ರಖ್ಯಾತಿ ಪೈಲ್ವಾನರಾದ ಪಾಪಣ್ಣನವರ ಜ್ಞಾಪಕಾರ್ಥ ಈ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದರು.
Related Articles
ಈ ಕಾರ್ಯಕ್ರಮದಲ್ಲಿ ಕುಸ್ತಿ ಪಂದ್ಯಾವಳಿಯ ಆಯೋಜಕರು ಬಿಜೆಪಿ ವಿಧಾನಸಭಾ ಕ್ಷೇತ್ರದ ಸಂಭಾವ್ಯ ಆಕಾಂಕ್ಷಿ ಬಿ ಎಚ್ ಅನಿಲ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ತಿಮ್ಮಜ್ಜ, ಖಜಾಂಚಿ ಸಿ ಎಸ್ ಹನುಮಂತರಾಜು,ದಾಡಿ ವೆಂಕಟೇಶ್, ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಪವನ್ ಕುಮಾರ್, ಯುವ ಮೋರ್ಚಾ ಅಧ್ಯಕ್ಷ ಗುರು ಸೇರಿದಂತೆ ಹಲವರು ಉಪಸ್ಥಿತರಿದ್ದರು.