Advertisement

Koratagere: ಆರೋಗ್ಯ ತುಮಕೂರು ಅಭಿಯಾನಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ರಿಂದ ಚಾಲನೆ

08:18 PM Dec 01, 2023 | |

ಕೊರಟಗೆರೆ: 4500 ಸಾವಿರ ಆರೋಗ್ಯ ಸಿಬ್ಬಂದಿಗಳ 30 ತಂಡ ಸತತ 3 ತಿಂಗಳು ಪ್ರತಿದಿನವು ನಿಮ್ಮ ಮನೆಗೆ ಬಂದು 12 ಬಗೆಯ ತಪಾಸಣೆ ಮಾಡುತ್ತಾರೆ. ತುಮಕೂರು ಜಿಲ್ಲೆಯಲ್ಲಿ 30 ವರ್ಷ ತುಂಬಿದ ಒಟ್ಟು 16 ಲಕ್ಷ 50 ಸಾವಿರ ನಾಗರಿಕರು ತಪಾಸಣೆಗೆ ಒಳಗಾಗುತ್ತಾರೆ. ಆರೋಗ್ಯದ ಬಗ್ಗೆ ಜನರಿಗೆ ನಿರ್ಲಕ್ಷ ಬೇಡ. ತಪ್ಪದೇ ಆರೋಗ್ಯ ತುಮಕೂರು ಅಭಿಯಾನದ ಪ್ರಯೋಜನ ಪಡೆದುಕೊಳ್ಳಿ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಮನವಿ ಮಾಡಿದರು.

Advertisement

ಕೊರಟಗೆರೆ ಪಟ್ಟಣದ ಪದವಿಪೂರ್ವ ಕಾಲೇಜು ಮೈದಾನದಲ್ಲಿ ತುಮಕೂರು ಜಿಲ್ಲಾಡಳಿತ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜಿಲ್ಲಾ ಮಟ್ಟದ ಆರೋಗ್ಯ ತುಮಕೂರು ಅಭಿಯಾನ ಮತ್ತು ಮಾರುತಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಜನತಾ ದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತ ದೇಶಕ್ಕೆ ಆಗುವಷ್ಟು ವೈದ್ಯರನ್ನು ಕರ್ನಾಟಕ ರಾಜ್ಯ ಉತ್ಪತ್ತಿ ಮಾಡ್ತಿದೆ. ಇಡೀ ದೇಶದಲ್ಲಿ ಅತಿಹೆಚ್ಚು ವೈದ್ಯರು ಮತ್ತು ಸಿಬ್ಬಂದಿಗಳು ಕರ್ನಾಟಕದವ್ರೇ ಆಗಿದ್ದಾರೆ. ಕರ್ನಾಟಕ ರಾಜ್ಯವು ದೇಶಕ್ಕೆ ಮಾದರಿ ಆಗಿದೆ. ರಾಜ್ಯ ಸರಕಾರ ಆರೋಗ್ಯ ಅಭಿಯಾನ ನಡೆಸಲು ೮ಜಿಲ್ಲೆಯನ್ನು ಸೂಚಿಸಿದೆ. ಕೊರಟಗೆರೆಯಲ್ಲಿ ರಾಜ್ಯಮಟ್ಟದ ಆರೋಗ್ಯ ಅಭಿಯಾನ ಮತ್ತು ಜಿಲ್ಲಾಮಟ್ಟದ ಸಂಪರ್ಕ ನಡೆದಿದೆ. ತುಮಕೂರು ಜಿಲ್ಲೆಯ ಎಲ್ಲಾ ಇಲಾಖೆ ಅಧಿಕಾರಿಗಳ ತಂಡ ನಿಮ್ಮ ಬಳಿಗೆ ಬಂದಿದ್ದಾರೆ ನಿಮ್ಮ ಸಮಸ್ಯೆ ಬಗೆಹರಿಸುತ್ತಾರೆ ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಆಧುನಿಕ ಚಿಕಿತ್ಸೆ ಶೈಲಿನಲ್ಲಿ ಆರೋಗ್ಯ ರಕ್ಷಣೆ ಸಾಧ್ಯ. ನಿಮ್ಮ ಆರೋಗ್ಯ ನಿಮ್ಮೇಲ್ಲರ ಕೈಯಲ್ಲಿದೆ, ಸರಕಾರವು ನಿಮ್ಮ ಜೊತೆಯಲ್ಲಿದೆ. ತುಮಕೂರು ಜಿಲ್ಲೆಯ ಜನತೆಗೆ ಆರೋಗ್ಯ ತುಮಕೂರು ಅಭಿಯಾನ ಸಹಕಾರ ಆಗಲಿದೆ. ಅನಾರೋಗ್ಯ ತಡೆಯಲು ತಪಾಸಣೆ ಮತ್ತು ಚಿಕಿತ್ಸೆ ಅತಿಮುಖ್ಯ. ದೈಹಿಕ ಚಟುವಟಿಕೆ ಮತ್ತು ಉತ್ತಮ ಆಹಾರ ಸೇವನೆಯಿಂದ ಮನುಷ್ಯನ ಆರೋಗ್ಯ ರಕ್ಷಣೆ ಸಾಧ್ಯ. ಆರೋಗ್ಯ ಅಭಿಯಾನ ತುಮಕೂರು ಜಿಲ್ಲೆಯಿಂದ ಪ್ರಾರಂಭ ಮಾಡಿದ ಆರೋಗ್ಯ ತಜ್ಞರಾದ ಗೃಹಸಚಿವ ಡಾ.ಜಿ.ಪರಮೇಶ್ವರ್‌ಗೆ ಆರೋಗ್ಯ ಇಲಾಖೆಯಿಂದ ತುಂಬು ಹೃದಯದ ಧನ್ಯವಾದ ಎಂದು ಹೇಳಿದರು.

ರಾಜ್ಯದಲ್ಲಿ140 ಡಯಾಲಿಸಿಸ್ ಕೇಂದ್ರ ಮತ್ತು 262 ಹೊಸ ತುರ್ತುವಾಹನಕ್ಕೆ ಸಿಎಂರಿಂದ ಚಾಲನೆ
ತುರ್ತುವಾಹನ ನಿರ್ವಹಣೆ ಲೋಪದೋಷ ಸರಿಪಡಿಸಲು ರೂಪುರೇಷೆ ಸಿದ್ದತೆ ನಡೆದಿದೆ. ಸರಕಾರಿ ಆಸ್ಪತ್ರೆಯ ಪಕ್ಕದಲ್ಲೇ ಖಾಸಗಿ ಮೆಡಿಕಲ್ ಶಾಪ್‌ಗಳಿವೆ. ಬಡವರಿಗೆ ಆಸ್ಪತ್ರೆಯಲ್ಲಿ ಸಮರ್ಪಕ ಔಷಧಿಗಳು ಸಿಗುತ್ತಿಲ್ಲ. ಅದು ನನಗೇ ಗೊತ್ತಿದೆ. 2024 ಕ್ಕೆ ಆರೋಗ್ಯ ಇಲಾಖೆಗೆ ಹೈಟೆಕ್ ಕಾಯಕಲ್ಪ ಮಾಡ್ತೇನೆ. ಗೃಹ ಆರೋಗ್ಯ ಕಾರ್ಯಕ್ರಮಕ್ಕೆ ಹೊಸವರ್ಷಕ್ಕೆ ನಮ್ಮ ಸಿಎಂ ಚಾಲನೆ ನೀಡುತ್ತಾರೆ ಎಂದರು.

Advertisement

ಶಿರಾ ಶಾಸಕ ಟಿ.ಬಿ.ಜಯಚಂದ್ರ ಮಾತನಾಡಿ, ಆಯುಷ್ಮಾನ್ ಭಾರತ್ ಮತ್ತು ಆರೋಗ್ಯ ಕರ್ನಾಟಕ ಜನರಿಗೆ ತಲುಪಿದಾಗ ಮಾತ್ರ ಸಾರ್ಥಕ. ನಿಮ್ಮ ಮನೆ ಬಾಗಿಲಿಗೆ ಬರುವ ಆರೋಗ್ಯ ಇಲಾಖೆಗೆ ನಿಮ್ಮೆಲ್ಲರ ಸಹಕಾರ ಅಗತ್ಯ. ಆಹಾರ ಪದ್ದತಿಯ ಬದಲಾವಣೆಯೇ ಯುವಕರಲ್ಲಿ ಅನಾರೋಗ್ಯ ಹೆಚ್ಚಾಗಲು ಪ್ರಮುಖ ಕಾರಣ. ಖಾಯಿಲೆಗೆ ತಕ್ಕಂತೆ ಆಹಾರ ಸೇವನೆಯ ಬಗ್ಗೆ ಆರೋಗ್ಯ ಇಲಾಖೆ ಜಾಗೃತಿ ಅಗತ್ಯ. ಸಿದ್ದರಬೆಟ್ಟದ ಸೋಪ್ಪು ತಿಂದರೇ ನಮ್ಮ ಖಾಯಿಲೆ ವಾಸಿಯಾಗುತ್ತೆ ಎಂಬುದು ನಮ್ಮೆಲ್ಲರ ನಂಬಿಕೆ ಎಂದರು.

ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲಾಧಿಕಾರಿ ಶ್ರೀನಿವಾಸ್, ಜಿಪಂ ಸಿಇಓ ಜಿ.ಪ್ರಭು, ನಗರ ಶಾಸಕ ಜ್ಯೋತಿಗಣೇಶ್, ಪಾವಗಡ ಶಾಸಕ ಹೆಚ್.ವಿ.ವೆಂಕಟೇಶ್, ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ, ತುಮಕೂರು ಎಸ್ಪಿ ಅಶೋಕ್.ಕೆ.ವಿ, ಅಪರ ಜಿಲ್ಲಾಧಿಕಾರಿ ಶಿವಾನಂದ.ಬಿ.ಕರಾಳೆ, ಜಿಲ್ಲಾ ಆರೋಗ್ಯ ಕಲ್ಯಾಣಾಧಿಕಾರಿ ಡಾ.ಮಂಜುನಾಥ.ಡಿ.ಎನ್, ಮಧುಗಿರಿ ಎಸಿ ರಿಸಿಆನಂದ್, ಕೊರಟಗೆರೆ ತಹಶೀಲ್ದಾರ್ ಮಂಜುನಾಥ.ಕೆ, ತಾಪಂ ಆಡಳಿತಾಧಿಕಾರಿ ದೀಪಾಶ್ರೀ, ಇಓ ಅಪೂರ್ವ.ಸಿ, ಜಿಪಂ ಎಇಇ ರವಿಕುಮಾರ್, ಕೃಷಿ ಇಲಾಖೆ ನಾಗರಾಜು, ಟಿಹೆಚ್‌ಓ ವಿಜಯಕುಮಾರ್ ಸೇರಿದಂತೆ ಇತರರು ಇದ್ದರು.

ಯಶಸ್ವಿಯಾದ ಜನಸಂಪರ್ಕ ಸಭೆ
ತುಮಕೂರು ಜಿಲ್ಲೆಯ 10 ತಾಲೂಕಿನಲ್ಲಿ ಆಶ್ರಯ ಯೋಜನೆಗೆ ಜಿಲ್ಲಾಡಳಿತದ ವತಿಯಿಂದ1025 ಎಕರೆ ಭೂಮಿ ಮಂಜೂರು ಮಾಡಿ ಜಿಪಂಗೆ ಹಸ್ತಾಂತರ ಮಾಡಲಾಯಿತು. ಕೊರಟಗೆರೆ ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ನಡೆದ ಜನಸಂಪರ್ಕ ಸಭೆಗೆ 229 ಅರ್ಜಿಗಳು ಸ್ವೀಕೃತವಾಗಿವೆ. ೩೪ಗ್ರಾಮಗಳಲ್ಲಿ ಆಟದ ಮೈದಾನ, ವಿದ್ಯಾರ್ಥಿ ನಿಲಯ ಮತ್ತು ಪಾರ್ಕ್ ಸೇರಿದಂತೆ ಸರಕಾರಿ ಉದ್ದೇಶಗಳಿಗೆ ಜಮೀನು ಮಂಜೂರಾತಿ ಆದೇಶ ಪ್ರತಿ ನೀಡಲಾಯಿತು. ಅದರಲ್ಲಿ 85 ಅರ್ಜಿಗಳು ವಿಲೇವಾರಿ ಮಾಡಲಾಗಿದೆ. ವಿವಿಧ ಇಲಾಖೆಯಿಂದ 172 ಜನ ಪಲಾನುಭವಿಗಳಿಗೆ ಸರಕಾರದ ಸವಲತ್ತು ಮತ್ತು ಆದೇಶ ಪ್ರತಿಗಳನ್ನು ಗೃಹಸಚಿವ ಡಾ.ಜಿ.ಪರಮೇಶ್ವರ್ ವಿತರಣೆ ಮಾಡಿದರು.

ಶಾಲೆಗೆ ಬಾಂಬ್ ಬೆದರಿಕೆ ಹೇಯ ಕೃತ್ಯ
ಬೆಂಗಳೂರಿನ ಹೊರವಲಯದ 15 ಶಾಲೆಗಳಿಗೆ ಶುಕ್ರವಾರ ಬೆಳಿಗ್ಗೆ ಕೈಜೈಟ್ಸ್@ಬೀಬಲ್.ಕಾಮ್ ಮೈಲ್ ಐಡಿಯಿಂದ ಬೆದರಿಕೆ ಬಂದಿದೆ. ನಮಗೇ ಮತ್ತು ಕಮೀಷನರ್‌ಗೆ ಮೇಸೆಜ್‌ಗಳು ಬಂದಿದ್ದಾಕ್ಷಣ ಶಾಲೆಗಳಿಗೆ ಬಾಂಬ್ ಸ್ಕ್ವಾಡ್ ಕಳಿಸಿ ಪರಿಶೀಲನೆ ಮಾಡಿಸಿದ್ದೇವೆ. ಇದು ಬಹಳ ಆತಂಕಕಾರಿ ವಿಚಾರ ಯಾರೇ ಮಾಡಿರಲಿ ಇದು ಹೇಯ ಕೃತ್ಯ. ನಾವು ಇದನ್ನ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಟೆಕ್ನಿಕಲ್ ಟೀಂನಿಂದ ಪರಿಶೀಲನೆ ನಡಿತಿದೆ. ಪೋಷಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ ಕೊರಟಗೆರೆಯಲ್ಲಿ ಸ್ಪಷ್ಟನೆ ನೀಡಿದರು.

ಭ್ರೂಣಹತ್ಯೆ ಜಾಲದ ತನಿಖೆ ಎಸ್‌ಐಟಿಗೆ ಹಸ್ತಾಂತರ
ಬೆಂಗಳೂರಿನ ಬೈಯಪ್ಪನಹಳ್ಳಿಯ ಭ್ರೂಣಹತ್ಯೆ ಜಾಲ ಪತ್ತೆಹಚ್ಚಲು ಎಸ್‌ಐಟಿಗೆ ನೀಡಲು ಸರಕಾರ ತಿರ್ಮಾನ ಮಾಡಿದೆ. ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಇಬ್ಬರು ಅಧಿಕಾರಿಗಳನ್ನು ಈಗಾಗಲೇ ಅಮಾನತು ಮಾಡಲಾಗಿದೆ. ಗೃಹಇಲಾಖೆ ಮತ್ತು ಆರೋಗ್ಯ ಇಲಾಖೆಯು ಜಾಲ ಪತ್ತೇಹಚ್ಚಲು ಸಹಕಾರ ನೀಡಲಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ತಿಳಿಸಿದರು.

ಚೀನಾದ ಹೊಸ ವೈರೇಸ್‌ಗೆ ಆತಂಕ ಪಡದಿದ್ದರೂ ಎಚ್ಚರಿಕೆ ಅಗತ್ಯ. ಕೋವಿಡ್ ಸಂದರ್ಭದ ಭ್ರಷ್ಟಾಚಾರದ ತನಿಖೆ ನಡೆಯುತ್ತಿದೆ. ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ಮನವಿಯಂತೆ ಕೊರಟಗೆರೆಗೆ ತಾಯಿ ಮಕ್ಕಳ ಆಸ್ಪತ್ರೆ, ಡ್ರಾಮಾಕೇರ್ ಸೆಂಟರ್ ಮತ್ತು ಹೈಜೀನಿಕ್ ಆಸ್ಪತ್ರೆಯನ್ನು ಮಂಜೂರು ಮಾಡಿಸುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next