ಕೊರಟಗೆರೆ: ಆಂಧ್ರ ಮೂಲದ ವ್ಯಕ್ತಿಗೆ 10 ಲಕ್ಷ ರೂಗೆ 2 ಕೆಜಿ ಚಿನ್ನ ಕೊಡುವುದಾಗಿ ನಂಬಿಸಿ ನಕಲಿ ಚಿನ್ನ ಕೊಟ್ಟು ಯಾಮಾರಿಸಿದ್ದ ಮೂವರು ಖತರ್ನಾಕ್ ಆರೋಪಿಗಳ ಪೈಕಿ ಒಬ್ಬನನ್ನು ಸೆರೆ ಹಿಡಿಯುವಲ್ಲಿ ಕೊರಟಗೆರೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೊರಟಗೆರೆ ತಾಲೂಕಿನ ಹಕ್ಕಿಪಿಕ್ಕಿ ಕಾಲೋನಿಯ ಮೂರು ಜನ ಆರೋಪಿಗಳು 2 ಕೆ ಜಿ ನಕಲಿ ಚಿನ್ನದ ಗುಂಡುಗಳನ್ನುಆಂಧ್ರ ಮೂಲದ ವ್ಯಕ್ತಿಗೆ ನೀಡಿ 10 ಲಕ್ಷ ರೂ ಪೀಕಿದ್ದಾರೆ ಎನ್ನಲಾಗಿದೆ.
ಕೊರಟಗೆರೆ ತಾಲೂಕಿನ ಹಕ್ಕಿ ಪಕ್ಕಿ ಕಾಲೋನಿಯ ಮುನಿರಾಜು (22) ಬಂಧಿತ ಆರೋಪಿಯಾಗಿದ್ದು, ಈತ ಸೇರಿದಂತೆ ಈತನ ಮೂರು ಜನ ಸ್ನೇಹಿತರು ಆಂಧ್ರ ತೆಲಂಗಾಣದ ರಾಜ್ಯದ ಖಮ್ಮಂ ಜಿಲ್ಲೆಯ ತಲ್ಲಡ ಗ್ರಾಮದ ಶಿಕ್ಷಕ ಶ್ರೀನಿವಾಸ್ ರಾವ್(35) ಎಂಬುವವರಿಗೆ ದೂರವಾಣಿ ಕರೆಯ ಮೂಲಕ ಯಾಮಾರಿಸಿ 10 ಲಕ್ಷ ರೂಗೆ 1ಕೋಟಿ ರೂ ಬೆಲೆ ಬಾಳುವ ಚಿನ್ನವನ್ನು ನೀಡುವುದಾಗಿ ಮೋಸದ ಬಲೆಯೊಳಗೆ ಬೀಳಿಸಿದ್ದಾರೆ.
ಆರೋಪಿ ಮುನಿರಾಜು(22) ಸೇರಿದಂತೆ ಮೂರು ಜನ ಸ್ನೇಹಿತರು ನಿಧಿ ಸಿಕ್ಕಿದೆ 10 ಲಕ್ಷ ರೂಗಳಿಗೆ ಒಂದು ಕೋಟಿ ಬೆಳೆಬಾಳುವ 2 ಕೆಜಿ ಚಿನ್ನವನ್ನು ನೀಡುವುದಾಗಿ ಕರೆಸಿ ಟೆಸ್ಟಿಂಗ್ ಗಾಗಿ ನಿಜವಾದ 2 ಚಿನ್ನದ ಗುಂಡುಗಳನ್ನು ನೀಡಿ ಟೆಸ್ಟಿಂಗ್ ಪಾಸಾದ ನಂತರ ಇದೇ ಮಾದರಿಯಲ್ಲಿ 2 ಕೆ.ಜಿ ಗುಂಡುಗಳಿವೆ ಎಂದು ಹೇಳಿ ತರಾತುರಿಯಲ್ಲಿ ಪೊಲೀಸರಿಗೆ ಮಾಹಿತಿ ಇದೆ. ಜರೂರಾಗಿ ಜಾಗ ಖಾಲಿ ಮಾಡಿ ಎಂದು ಕೊಂಡುಕೊಳ್ಳಲು ಬಂದ ವ್ಯಕ್ತಿಗಳಿಗೆ ಯಾಮಾರಿಸಿ ಕಳುಹಿಸಿದ್ದರು ಎನ್ನಲಾಗಿದೆ.
ಆಂಧ್ರ ತೆಲಂಗಾಣ ಮೂಲದ ಶ್ರೀನಿವಾಸ್ ರಾವ್ ಮನೆಗೆ ಹೋಗಿ ನೋಡಿದಾಗ ಹಾಗೂ ಅಲ್ಲಿನ ಒಂದಷ್ಟು ಯಾಮಾರಿಸಿದ ಬಂಗಾರವನ್ನು ಟೆಸ್ಟ್ ಗೆಂದು ನೀಡಿದಾಗ ನಕಲಿ ಎಂದು ತಿಳಿದು ಮೋಸ ಮಾಡಿದ ಆರೋಪಿಗಳ ಮನೆಗೆ ಹುಡುಕಿಕೊಂಡು ಬಂದಾಗ ಆರೋಪಿ ಯುವಕರೇ ಮೋಸ ಹೋದ ಗಿರಾಕಿಗೆ ಹೊಡೆದು ಬಡಿದು ಕಳಿಸಿದ್ದು, ಆತ ಕಳೆದ 2 ತಿಂಗಳಗಳ ಹಿಂದೆ ನೀಡಲಾದ ದೂರಿನ ಅನ್ವಯ ಆರೋಪಿಗಳು ತಲೆಮರಸಿಕೊಂಡಿದ್ದ ಕಾರಣ ಒಬ್ಬನು ಸಿಕ್ಕಿದ್ದು ಮತ್ತಿಬ್ಬರು ಅರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಈ ಸಂಬಂಧ ಆರೋಪಿಗಳ ಜಾಡು ಹಿಡಿದ ಕೊರಟಗೆರೆ ಸಿಪಿಐ ಸಿದ್ದರಾಮೇಶ್ವರ , ಪಿಎಸ್ಐ ನಾಗರಾಜು ಸೇರಿದಂತೆ ಸಿಬ್ಬಂದಿ ವರ್ಗ ಹೆಚ್ಚು ಶ್ರಮವಹಿಸಿ ಆರೋಪಿಯನ್ನು ಪತ್ತೆ ಹಚ್ಚಿ ಸೆರೆಹಿಡಿದಿದ್ದು, ಉಳಿದ ಇಬ್ಬರ ಸೆರೆಗೆ ಬಲೆ ಬೀಸಿದ್ದಾರೆ ಎನ್ನಲಾಗಿದೆ.