Advertisement

ಕೊರಟಗೆರೆ: ಇಸ್ಪೀಟು ಅಡ್ಡೆಯ ಮೇಲೆ ದಾಳಿ;  15 ಆರೋಪಿಗಳ ಬಂಧನ

05:12 PM Jul 09, 2022 | Team Udayavani |

ಕೊರಟಗೆರೆ: ಮಧುಗಿರಿ ಉಪ ವಿಭಾಗದ ಕೊರಟಗೆರೆ ಪೋಲೀಸ್ ಠಾಣೆ ವ್ಯಾಪ್ತಿಯ ಜಿ.ನಾಗೇನಹಳ್ಳಿ ಗ್ರಾಮದ ಬಳಿಯಿರುವ ಸಿ.ಜಿ.ಎಲೈಟ್ಸ್ ರೆಸಾರ್ಟ್ ನಲ್ಲಿ ಅಕ್ರಮವಾಗಿ ಇಸ್ಪೀಟು ಜೂಜಾಟ ಆಡುತ್ತಿರುವ ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ಕೆ.ಜಿ.ರಾಮಕೃಷ್ಣ ನೇತೃತ್ವದಲ್ಲಿ ದಾಳಿ ನಡೆಸಿ ಕೃತ್ಯಕ್ಕೆ ಸಂಭಂದಿಸಿದಂತೆ 7,00, 650 ರೂಪಾಯಿ ನಗದು ಹಣ, 4 ಕಾರುಗಳು ಹಾಗೂ 15 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡ ಘಟನೆ ಶುಕ್ರವಾರ ತಡ ರಾತ್ರಿ ನಡೆದಿದೆ.

Advertisement

ಇಸ್ಪೀಟು ಜೂಜಾಟದಲ್ಲಿ ತೊಡಗಿದ್ದ ರವಿ ಬಿನ್ ಪುಟ್ಟಣ್ಣ ಮತ್ತು ಇಸ್ಪೀಟು ಆಟ ಆಯೋಜಿಸಿ ಅಕ್ರಮವಾಗಿ ಇಸ್ಪೀಟು ಆಡುತ್ತಿದ್ದ ಕೃಷ್ಣೇಗೌಡ ಮತ್ತು ಬಾಬು ರವರ ವಿರುದ್ದ ಹಾಗೂ ಇತರೆ 12 ಮಂದಿ ವಿರುದ್ದ  ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಡಿವೈಎಸ್ಪಿ ರಾಮಕೃಷ್ಣ ಕೆ.ಜಿ. ಇನ್ಸ್‌ಪೆಕ್ಟರ್ ಸಿದ್ದರಾಮೇಶ್ವರ ಹಾಗೂ ಪಿಎಸ್ಐ ಗಳಾದ ನಾಗರಾಜು.ಬಿ, ಮುಂಜುಳ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಜೂಜಾಟದ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಲು ಶ್ರಮಿಸಿದ ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿ ಉದೇಶ್.ಟಿ.ಜೆ. ರವರ ಮಾರ್ಗದರ್ಶನದಲ್ಲಿ ,ಪೋಲೀಸ್ ಉಪಾಧೀಕ್ಷಕರು ಕೆ.ಜಿ.ರಾಮಕೃಷ್ಣ. ಮಧುಗಿರಿ ಉಪ ವಿಭಾಗದವರ ನೇತೃತ್ವದಲ್ಲಿ ಹನುಮಂತರಾಯಪ್ಪ ಪೋಲೀಸ್ ಇನ್ಸ್‌ಪೆಕ್ಟರ್ ಬಡವನಹಳ್ಳಿ ಠಾಣೆ. ಹಾಗೂ ಸಿದ್ದರಾಮೇಶ್ವರ ಪೋಲೀಸ್ ಇನ್ಸ್‌ಪೆಕ್ಟರ್ ಕೊರಟಗೆರೆ . ಪಿಎಸ್ಐಗಳಾದ ನಾಗರಾಜು, ಮತ್ತು ಮಂಜುಳಾ ಹಾಗೂ ಸಿಬ್ಬಂದಿ ವರ್ಗದವರನ್ನು ತುಮಕೂರು ಜಿಲ್ಲೆಯ ಪೋಲೀಸ್ ಅಧೀಕ್ಷರಾದ ರಾಹುಲ್ ಕುಮಾರ್ ಶಹಾಪುರ್ ವಾಡ್ ಅಭಿನಂದಿಸಿರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next