ಕೊರಟಗೆರೆ: 40 ವರ್ಷದಿಂದ ಸರಕಾರಿ ಗೋಮಾಳದಲ್ಲಿ ಉಳುಮೆ ಮಾಡುತ್ತೀರುವ ರೈತರಿಗೆ ಸಾಗುವಳಿ ಚೀಟಿ ನೀಡಿಲ್ಲ. ೪ವರ್ಷದ ಹಿಂದೆ ಅರ್ಜಿ ಸಲ್ಲಿಸಿ ಅಧಿಕಾರಿಗಳಿಗೆ ಹಣ ನೀಡಿರುವ ರಾಜಕೀಯ ಪಕ್ಷದ ಬೆಂಬಲಿಗರಿಗೆ ವಿತರಣೆ ಆಗಿದೆ.. ಶಾಸಕರೇ ಸಾಗುವಳಿ ಚೀಟಿ ನೀಡುವಲ್ಲಿ ತಾರತಮ್ಮ ಆದರೇ ಚುನಾವಣೆ ವೇಳೆ ಮತ ಹಾಕುವಾಗ ರೈತರು ತಕ್ಕಪಾಠ ಕಲಿಸ್ತಾರೇ. ಬಹುರ್‌ಹುಕ್ಕುಂ ಕಮಿಟಿಯಿಂದ ಕೊರಟಗೆರೆ ಕ್ಷೇತ್ರದ ರೈತರಿಗೆ ಅನ್ಯಾಯವಾಗಿದೆ ಎಂದು ಕೊರಟಗೆರೆ ರೈತಸಂಘದ ಅಧ್ಯಕ್ಷ ಸಿದ್ದರಾಜು ಆಕ್ರೋಶ ವ್ಯಕ್ತಪಡಿಸಿದರು.
ಕೊರಟಗೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತಸಂಘ ಮತ್ತು ನೂರಾರು ಜನ ರೈತರು ಕಂದಾಯ ಇಲಾಖೆಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ವೇಳೆ ಮಾತನಾಡಿದರು.
ಬಹುರ್ ಹುಕ್ಕುಂ ಕಮಿಟಿಯಿಂದ 2017-18ರಲ್ಲಿ ಸಾಗುವಳಿ ಚೀಟಿ ನೀಡಿದ 250ಕ್ಕೂ ಅಧಿಕ ರೈತರಿಗೆ ಇನ್ನೂ ಜಮೀನಿನ ಖಾತೆ-ಪಹಣಿ ಆಗಿಲ್ಲ. ಕೊರಟಗೆರೆ ಕ್ಷೇತ್ರದಲ್ಲಿ ಸರಿಸುಮಾರು 1500 ಜನ ರೈತರಿಗೆ ಸಾಗುವಳಿ ಚೀಟಿ ನೀಡಬೇಕಿದೆ. 2022 ರ ಹೊಸ ಕಮಿಟಿಯಿಂದ ರೈತರಿಗೆ ತಾರತಮ್ಮ ಆಗಿದೆ. ಕಂದಾಯ ಇಲಾಖೆಯ ಅಧಿಕಾರಿವರ್ಗ ಶಾಮಿಲಾಗಿ ನಿಜವಾದ ರೈತರಿಗೆ ವಂಚನೆ ಮಾಡಲಾಗಿದೆ ಎಂದು ಆರೋಪ ಮಾಡಿದರು.
ಕೊರಟಗೆರೆ ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತೀರುವ ಭ್ರಷ್ಟ ಅಧಿಕಾರಿಗಳ ವಿರುದ್ದ ಲೋಕಾಯುಕ್ತ ಕಚೇರಿಗೆ ದೂರು ನೀಡುತ್ತೇವೆ. ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ ರೈತರಿಗೆ ತಾರತಮ್ಮ ಮಾಡಿದ್ದಾರೆ. ಚುನಾವಣೆ ವೇಳೆ 1500 ಕ್ಕೂ ಹೆಚ್ಚು ರೈತರು ತಕ್ಕಪಾಠ ಕಲಿಸ್ತಾರೇ. ಗುರುವಾರ ರೈತರಿಗೆ ಜಮೀನಿನ ಸಾಗುವಳಿ ಚೀಟಿ ನೀಡದಿದ್ದಲ್ಲಿ ರೈತರ ಜೊತೆಗೂಡಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
Related Articles
ತುಮಕೂರು ಮಹಿಳಾಸಂಘದ ಜಿಲ್ಲಾಧ್ಯಕ್ಷೆ ವಿಜಿಯಮ್ಮ ಮಾತನಾಡಿ ಸಾಗುವಳಿ ಚೀಟಿ ಮತ್ತು ಮನೆಯ ಹಕ್ಕುಪತ್ರವು ನೀಡುವಲ್ಲಿ ತಾರತಮ್ಮ ಮಾಡಲಾಗಿದೆ. ಬೆಂಗಳೂರು ಮತ್ತು ತುಮಕೂರು ನಗರದ ಉದ್ಯಮಿಗಳಿಗೆ ಜಮೀನು ಮಂಜೂರು ಮಾಡಲಾಗಿದೆ. ನಮ್ಮ ಕ್ಷೇತ್ರದ ರೈತರಿಗೆ ಏಕೆ ನೀಡಿಲ್ಲ. ನಮ್ಮ ಕೊರಟಗೆರೆ ಕ್ಷೇತ್ರದ ರೈತರಿಗೆ ಭೂಮಿ ಸಿಗುವವರೇಗೆ ನಾವು ಹೋರಾಟ ಮಾಡೇ ಮಾಡ್ತೀವಿ ಎಂದು ಎಚ್ಚರಿಕೆ ನೀಡಿದರು.
ಕಂದಾಯ ಇಲಾಖೆ ವಿರುದ್ದ ಆರೋಪ..
ಕೊರಟಗೆರೆ ಕಂದಾಯ ಇಲಾಖೆಯ ಶಿರಸ್ಥೆದಾರ್ ರಂಗನಾಥ ಮತ್ತು ಬಿ.ಡಿ.ಪುರ ವೃತ್ತ ಕಂದಾಯ ಅಧಿಕಾರಿ ಮುರುಳಿ ರೈತರಿಂದ ಮುಂಗಡ ಹಣ ಪಡೆದು ಸಾಗುವಳಿ ಚೀಟಿಗೆ ಸಹಿಯನ್ನು ಹಾಕದೇ ಮೋಸ ಮಾಡಿದ್ದಾರೆ. 50 ರಿಂದ 60 ಸಾವಿರ ಹಣ ನೀಡಿದ ಗ್ರಾಮೀಣ ರೈತರಿಗೆ ಮಾತ್ರ ಸಾಗುವಳಿ ಚೀಟಿ ನೀಡಲಾಗಿದೆ. ಜಿಲ್ಲಾಧಿಕಾರಿ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿ ತನಿಖೆಗೆ ಆದೇಶ ಮಾಡಬೇಕಿದೆ. ಇಲ್ಲವಾದ್ರೇ ನಾವೇ ಲೋಕಾಯುಕ್ತ ಕಚೇರಿಗೆ ದೂರು ನೀಡುತ್ತೇವೆ ಎಂದು ರೈತರು
ಮಾಡಿದರು.
ಪ್ರತಿಭಟನೆಯಲ್ಲಿ ಕೊರಟಗೆರೆ ರೈತಸಂಘದ ಉಪಾಧ್ಯಕ್ಷ ಪುಟ್ಟರಾಜು, ಮುಖಂಡರಾದ ಲೊಕೇಶ್, ಶಿವಾನಂದಯ್ಯ, ರವಿಕುಮಾರ್, ಲಕ್ಷ್ಮಣ್, ದಾಸಗಿರಿಯಪ್ಪ, ರಂಗನಾಥ, ಕುಮಾರ್, ದೇವರಾಜು, ಮಂಜುನಾಥ, ಪ್ರಸನ್ನಕುಮಾರ್, ವಿಜಯಲಕ್ಷ್ಮಿ, ರಘುನಂದನ್, ನಾಗರಾಜು ಸೇರಿದಂತೆ ನೂರಾರು ಜನ ರೈತರು ಇದ್ದರು.
ಕಂದಾಯ ಇಲಾಖೆಗೆ ರೈತರ ಮುತ್ತಿಗೆ..
ಕೊರಟಗೆರೆ ಕ್ಷೇತ್ರದ 1500ಕ್ಕೂ ಅಧಿಕ ಗ್ರಾಮೀಣ ಪ್ರದೇಶದ ರೈತರಿಗೆ ಸಾಗುವಳಿ ಚೀಟಿ ನೀಡುವಂತೆ ಆಗ್ರಹಿಸಿ ಕಂದಾಯ ಇಲಾಖೆಗೆ ಮುತ್ತಿಗೆ ಹಾಕಿ ಶಾಸಕರು ಮತ್ತು ಅಧಿಕಾರಿಗಳ ವಿರುದ್ದ ರೈತಸಂಘ ಪ್ರತಿಭಟನೆ ನಡೆಸಿದೆ. ಗುರುವಾರದೊಳಗೆ ರೈತರಿಗೆ ಸಾಗುವಳಿ ಚೀಟಿ ಮತ್ತು ಹಳೆಯ ಖಾತೆ ಪಹಣಿ ನೀಡದಿದ್ದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುವ ಎಚ್ಚರಿಕೆ ನೀಡಲಾಗಿದೆ.
ವಿಧಾನಸಭೆ ಚುನಾವಣೆ ಬಹಿಷ್ಕಾರದ ಎಚ್ಚರಿಕೆ..
40 ವರ್ಷದಿಂದ ಉಳುಮೆ ಮಾಡುತ್ತಿರುವ 1500 ಕ್ಕೂ ಅಧಿಕ ರೈತರಿಗೆ ಸಾಗುವಳಿ ಚೀಟಿಯನ್ನೇ ನೀಡಿಲ್ಲ. ಬೆಂಗಳೂರು ನಗರದ ಉದ್ಯಮಿಗಳಿಗೆ 4 ವರ್ಷದಲ್ಲೇ ಸಾಗುವಳಿ ಚೀಟಿ ನೀಡಲಾಗಿದೆ. ಕೊರಟಗೆರೆ ಕ್ಷೇತ್ರದ ರೈತರಿಗೆ ಸಾಗುವಳಿ ಚೀಟಿ ನೀಡದಿದ್ದರೇ ರೈತರು ಚುನಾವಣೆ ಬಹಿಷ್ಕಾರ ಮಾಡಿ ಮತ ಕೇಳಲು ರೈತರ ಬಳಿಗೆ ಬಂದಾಗ ಅವರಿಗೆ ತಕ್ಕಪಾಠ ಕಲಿಸುತ್ತೇವೆ.
– ಸಿದ್ದರಾಜು. ಅಧ್ಯಕ್ಷ. ರೈತಸಂಘ. ಕೊರಟಗೆರೆ