Advertisement
ಕೊರಟಗೆರೆ ಪಟ್ಟಣದ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ಜೂ.25ರ ಮಂಗಳವಾರ ಸುಮಾರು ಬೆಳಿಗ್ಗೆ 11 ಗಂಟೆಯ ಸಮಯ ಈ ಘಟನೆ ನಡೆದಿದೆ. ಡಾ.ನವೀನ್ ಜೂ.24ರ ಸೋಮವಾರ ಬೆ.9ರಿಂದ ಜೂ.25ರ ಮಂಗಳವಾರ ಬೆ.9 ರ ವರೆಗೆ ಕರ್ತವ್ಯನಿರತ ವೈದ್ಯರು. ಆದರೆ ಡಾ.ನವೀನ್‌ಗೆ ಜು. 25ರ ಬೆಳಿಗ್ಗೆ 11 ಗಂಟೆಯ ಮೇಲೂ ಆಸ್ಪತ್ರೆಯಲ್ಲಿ ಏನು ಕೆಲಸ ಇತ್ತು ? ವೈದ್ಯರು ಸಮವಸ್ತ್ರ ಧರಿಸದೇ ರೋಗಿಗಳ ಜೊತೆ ವರ್ತಿಸಿದ ರೀತಿ ಸರಿಯೇ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Related Articles
Advertisement
ಆಸ್ಪತ್ರೆಯ ವೈದ್ಯರಿಗೆ ನೊಟೀಸ್ ಜಾರಿ: ವೈದ್ಯರು ನಿಗದಿತ ಸಮಯಕ್ಕೆ ಆಸ್ಪತ್ರೆಗೆ ಆಗಮಿಸದೇ ರೋಗಿಗಳಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ ದೂರು ಬಂದಿವೆ. ವೈದ್ಯರಿಗೆ ಮೌಖಿಕವಾಗಿ ಹಲವು ಬಾರಿ ತಿಳಿಸಿದರೂ ಸಮಸ್ಯೆ ಸರಿ ಹೋಗಿಲ್ಲ. ಕರ್ತವ್ಯಕ್ಕೆ ನಿಗದಿತ ಸಮಯಕ್ಕೆ ಆಗಮಿಸದೇ ಇದ್ದರೆ ವೈದ್ಯರೇ ನೇರ ಹೊಣೆ ಆಗಬೇಕಾಗುತ್ತೆ. ಚಿಕ್ಕರಂಗಯ್ಯ ಮೇಲೆ ಡಾ.ನವೀನ್ ನೀಡಿರುವ ದೂರು ಪತ್ರ ಕುರಿತು ವಿಚಾರಣೆ ಪ್ರಯುಕ್ತ ಜೂ.25ರ ಮಧ್ಯಾಹ್ನ 3.30ಕ್ಕೆ ಹಾಜರಾಗುವಂತೆ ಮುಖ್ಯ ವೈದ್ಯಾಧಿಕಾರಿ ಡಾ. ಲಕ್ಷ್ಮೀಕಾಂತ ಅಧಿಕೃತ ಜ್ಞಾಪನ ಪತ್ರದಲ್ಲಿ ತಿಳಿಸಿದ್ದಾರೆ.
ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ರೌಡಿಗಳಂತೆ ಡಾ.ನವೀನ್ ಬೆದರಿಕೆ ಹಾಕುತ್ತಾರೆ. ಆಸ್ಪತ್ರೆಯಲ್ಲಿ ರೋಗಿಗಳಿಗೆ ವೈದ್ಯರಿಂದ ಆಗುತ್ತಿರುವ ಸಮಸ್ಯೆಯ ಬಗ್ಗೆ ಪ್ರಶ್ನೆ ಮಾಡಿದ್ದೇ ತಪ್ಪಾಯ್ತು. ಸಮವಸ್ತ್ರವೇ ಇಲ್ಲದ ಕೊರಟಗೆರೆ ಆಸ್ಪತ್ರೆಯ ವೈದ್ಯ ಡಾ.ನವೀನ್, ನನ್ನ ಮೈಮೇಲಿನ ಬಟ್ಟೆ ಎಳೆದು ಜಾತಿನಿಂದನೆ ಮಾಡಿದ್ದಾರೆ. ಡಾ.ನವೀನ್ ಮೇಲೆ ಪ್ರಕರಣ ದಾಖಲಿಸಲು ಠಾಣೆಗೆ ದೂರು ನೀಡಿದ್ದೇನೆ. -ಚಿಕ್ಕರಂಗಯ್ಯ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ, ತುಮಕೂರು
ಸರಕಾರಿ ಆಸ್ಪತ್ರೆಗೆ ಚಿಕ್ಕರಂಗಯ್ಯ ಚಿಕಿತ್ಸೆಗೆ ಬಂದಾಗ ಡಾ.ನವೀನ್ ನಡುವೆ ವಾಗ್ವಾದ ನಡೆದಿದೆ. ಆಸ್ಪತ್ರೆಗೆ ಬರುವ ರೋಗಿಗಳ ಬಗ್ಗೆ ಸೌಮ್ಯತೆಯಿಂದ ವರ್ತಿಸಲು ಈಗಾಗಲೇ ನವೀನ್‌ಗೆ ಸೂಚಿಸಲಾಗಿದೆ. ದೂರಿನ ಬಗ್ಗೆ ನನಗೇನು ಮಾಹಿತಿ ಇಲ್ಲ. ಆಸ್ಪತ್ರೆಯಲ್ಲಿ ಮತ್ತೆ ಇಂತಹ ಘಟನೆ ಆಗದಂತೆ ಎಲ್ಲರಿಗೂ ಸೂಚಿಸಲಾಗುವುದು. ಆರೋಗ್ಯ ಇಲಾಖೆಗೆ ಘಟನೆಯ ಬಗ್ಗೆ ವರದಿ ನೀಡಲಾಗಿದೆ. –ಡಾ. ಲಕ್ಷ್ಮೀಕಾಂತ ಟಿ.ಎಸ್., ಮುಖ್ಯ ಆಡಳಿತ ವೈದ್ಯಾಧಿಕಾರಿ, ಕೊರಟಗೆರೆ