Advertisement
ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ವಜ್ಜನಕುರಿಕೆ ಗ್ರಾ.ಪಂ. ವ್ಯಾಪ್ತಿಯ ಪುಟ್ಟನರಸಮ್ಮನ ಪಾಳ್ಯ ಮತ್ತು ಮರಚರಹಳ್ಳಿ ಗ್ರಾಮದಲ್ಲಿ ಜಿ.ಪಂ. ಇಲಾಖೆಯಿಂದ ಏರ್ಪಡಿಸಲಾಗಿದ್ದ 1 ಕೋಟಿ 75 ಲಕ್ಷ ವೆಚ್ಚದ ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿ ಬಳಿಕ ಮಾತನಾಡಿದರು.
Related Articles
Advertisement
ಸಿದ್ದರಬೆಟ್ಟದ ಶ್ರೀವೀರಭದ್ರ ಶಿವಚಾರ್ಯ ಸ್ವಾಮೀಜಿಗಳ ದಿವ್ಯ ಸಾನಿದ್ಯದಲ್ಲಿ ಸಿದ್ದರಬೆಟ್ಟ, ನೇಗಲಾಲ, ಮಾರಿಪಾಳ್ಯ ಮತ್ತು ಮರೇನಾಯಕನಹಳ್ಳಿ ಕೆರೆಗಳಿಗೆ ಶಾಸಕ ಡಾ.ಜಿ.ಪರಮೇಶ್ವರ್ ಗಂಗಾಪೂಜೆ ನೇರವೇರಿಸಿದ ನಂತರ 600ಕ್ಕೂ ಅಧಿಕ ಮಹಿಳೆಯರಿಗೆ ಬಾಗೀನ ನೀಡಿದರು. ನಂತರ ಜೆಟ್ಟಿ ಅಗ್ರಹಾರ ಮತ್ತು ವಡ್ಡಗೆರೆಯ ದೀಪೋತ್ಸವ ಹಾಗೂ ಗೊಡ್ರಹಳ್ಳಿಯ ಹೂವಿನ ರಥೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
68 ಕೋಟಿ ವೆಚ್ಚದ ಹೈಟೇಕ್ ಕ್ರಿಡಾಂಗಣ
ಕಲ್ಪತರು ನಾಡಿನ ಗ್ರಾಮೀಣ ಪ್ರದೇಶದ ಉನ್ನತ ವ್ಯಾಸಂಗಕ್ಕೆ ವಿಶ್ವವಿದ್ಯಾನಿಲಯ ಮಂಜೂರು ಮತ್ತು 68 ಕೋಟಿ ವೆಚ್ಚದಲ್ಲಿ ತುಮಕೂರು ಜಿಲ್ಲಾ ಹೈಟೆಕ್ ಕ್ರಿಡಾಂಗಣ ಲೋಕಾರ್ಪಣೆಗೆ ಸಿದ್ದವಾಗಿದೆ. ಕೊರಟಗೆರೆ ಕ್ಷೇತ್ರದ ನಾಲ್ಕು ದಿಕ್ಕಿನಲ್ಲಿಯು ಶಿಕ್ಷಣಕ್ರಾಂತಿ ಮಾಡಿದ್ದೇನೆ. ಗ್ರಾಮೀಣ ಪ್ರದೇಶದ ಬಡವರ ಮಕ್ಕಳನ್ನು ಶೈಕ್ಷಣಿಕವಾಗಿ ಅಭಿವೃದ್ದಿ ಮಾಡುವುದೇ ನನ್ನ ಪ್ರಮುಖ ಧ್ಯೇಯವಾಗಿದೆ ಎಂದು ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಕೊರಟಗೆರೆಯಲ್ಲಿ ತಿಳಿಸಿದರು.
ಕೋಡ್ಲಹಳ್ಳಿಯ ಶಿಕ್ಷಕನ ನೀರಾವರಿಯ ಕನಸು ನನಸು ಆಗುವ ಕಾಲ ಹತ್ತಿರ ಬಂದಿದೆ. ಎತ್ತಿನಹೊಳೆ ಯೋಜನೆಯಿಂದ ಕೊರಟಗೆರೆ ಕ್ಷೇತ್ರದ 109 ಕೆರೆಗಳಿಗೆ ಎತ್ತಿನಹೊಳೆ ನೀರು ಹರಿಯಲಿದೆ. ಬಯಲು ಸೀಮೆ ಪ್ರದೇಶವಾದ ಕೊರಟಗೆರೆ ಕ್ಷೇತ್ರದ ರೈತರಿಗೆ ಎತ್ತಿನಹೊಳೆ ಯೋಜನೆಯು ವರದಾನವಾಗಿ ಅಂರ್ತಜಲ ಅಭಿವೃದ್ದಿಗೆ ಸಹಕಾರಿ ಆಗಲಿದೆ. ಶಾಶ್ವತ ನೀರಾವರಿಯ ಕನಸನ್ನು ನನಸು ಮಾಡಿದ್ದೇನೆ ಎಂಬ ವಿಶ್ವಾಸವಿದೆ. -ಡಾ.ಜಿ.ಪರಮೇಶ್ವರ ಮಾಜಿ ಡಿಸಿಎಂ. ಕೊರಟಗೆರೆ