ಕೊರಟಗೆರೆ : ವಿಷಪೂರಿತ ಹಾವೊಂದು ಕಚ್ಚಿ ಕೂಲಿ ಕಾರ್ಮಿಕ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಕೊರಟಗೆರೆ ತಾಲೂಕಿನ ಕಸಬಾ ಹೋಬಳಿ ಮಾದವಾರ ಗ್ರಾಮದಲ್ಲಿ ನಡೆದಿದೆ.
ಮಾದವಾರ ಗ್ರಾಮದ ನಿವಾಸಿಯಾಗಿರುವ ಕೂಲಿಕಾರ್ಮಿಕ ಮಹಿಳೆ ಶ್ರೀಮತಿ ಕಾಮಕ್ಕ (55 ವರ್ಷ) ಮೃತ ಮಹಿಳೆ.
ಜಮೀನಿನಲ್ಲಿ ರಾಗಿ ತೆನೆ ಕೊಯ್ಯುವಾಗ ಯಾವುದೋ ವಿಷಪೂರಿತ ಹಾವು ಕಚ್ಚಿದೆ ಪರಿಣಾಮ ಮಹಿಳೆಯನ್ನು ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.
ಮೃತಳ ಮೈದುನನಾದ ಶ್ರೀನಿವಾಸ್ ನೀಡಿದ ದೂರಿನ ಮೇರೆಗೆ ಕೊರಟಗೆರೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಘಟನಾ ಸ್ಥಳಕ್ಕೆ ತಹಶಿಲ್ದಾರ್ ನಾಹೀದ ಜಮ್ ಜಮ್ ಭೇಟಿ ನೀಡಿ ಮೃತಳ ಕುಟುಂಬಕ್ಕೆ ಸಾಂತ್ವನ ತಿಳಿಸಿದ್ದಾರೆ. ಇಲಾಖೆಯಿಂದ ಬರುವ ಪರಿಹಾರ ಧನವನ್ನು ಕೊಡಿಸಲಾಗುವುದು ಎಂದರು. ಪಿಎಸ್ಐ ನಾಗರಾಜು ಹೆಚ್ಚಿನ ತನಿಖೆಕೈಗೊಂಡಿದ್ದಾರೆ.