ಕೊರಟಗೆರೆ ; ನೋಟ್ಸ್ ಬುಕ್ ಕೊಡುವ ನೆಪದಲ್ಲಿ ವಿದ್ಯಾರ್ಥಿನಿ ಮನೆಗೆ ಹೋದ ಸ್ನೇಹಿತ ಕೂಲ್ ಡ್ರಿಂಕ್ಸ್ ನಲ್ಲಿ ಪ್ರಜ್ಞೆ ತಪ್ಪುವ ಔಷಧಿ ಬೆರೆಸಿ ಕೊಡಿಸಿ ಅತ್ಯಾಚಾರವೆಸಗಿರುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.
ಕೊರಟಗೆರೆ ಪಟ್ಟಣದ ಇಮ್ರಾನ್ ಪಾಷಾ ಮಗ ಅಸ್ಲಾಂ ಎಂಬ ಯುವಕ ಖಾಸಗಿ ಪ್ರೌಢಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಗೆ ನೋಟ್ಸ್ ಕೊಡುವ ನೆಪದಲ್ಲಿ ಮನೆಗೆ ಹೋಗಿ ಕೂಲ್ ಡ್ರಿಂಕ್ಸ್ ನಲ್ಲಿ ಮತ್ತು ಬರುವ ಔಷಧಿಯನ್ನು ಬೆರೆಸಿ ಕುಡಿಸಿ ಅತ್ಯಾಚಾರವೆಸಗಿ ಘಟನೆಯನ್ನು ಪೋಷಕರಿಗೆ ಅಥವಾ ಇತರರಿಗೆ ತಿಳಿಸಿದರೆ ಪ್ರಾಣ ತೆಗೆಯುವುದಾಗಿ ಬೆದರಿಕೆ ಹಾಕಿದ ಪರಿಣಾಮ ಪ್ರಕರಣ ನಿಧಾನವಾಗಿ ಬಂದಿದೆ ಎನ್ನಲಾಗಿದೆ.
ವಿದ್ಯಾರ್ಥಿನಿ ಇತ್ತೀಚಿಗೆ ಅನಾರೋಗ್ಯ ನಿಮಿತ್ತ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋಗಿದ್ದಾಗ ಅಪ್ರಾಪ್ತ ಬಾಲಕಿ ಗರ್ಭವತಿಯಾಗಿರುವುದು ಬೆಳಕಿಗೆ ಬಂದು ಅಲ್ಲಿನ ವೈದ್ಯರು ಪೊಲೀಸರಿಗೆ ವಿಚಾರ ಮುಟ್ಟಿಸಿದ ನಂತರ ಪ್ರಕರಣ ಪೋಷಕರ ಗಮನಕ್ಕೆ ಬಂದಿದ್ದು ನಂತರ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಸಿದ್ದರಾಮೇಶ್ವರ ಹಾಗೂ ಪಿಎಸ್ಐ ನಾಗರಾಜು ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ನಡೆಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : ರಾಜಮೌಳಿಯ “ಆರ್ ಆರ್ ಆರ್” ಸಿನಿಮಾ ಟ್ರೈಲರ್ ಬಿಡುಗಡೆಗೆ ರಾಮ್ ಚರಣ್ ಗೈರು, ಕಾರಣವೇನು?