Advertisement
ಹುಳಸೊಪ್ಪಿನಹಳ್ಳಿ ಗ್ರಾಮದ ವೆಂಕಟಶಾಮಯ್ಯ ಮಗನಾದ ಮಧುಸೂಧನ್ ಮೃತ ವ್ಯಕ್ತಿ. ತಾಲೂಕಿನ ನೀಲಗೊಂಡನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಅಳಾಲ ಸಂದ್ರ ಗ್ರಾಮದ ತೋಟವೊಂದರ ಹಲಸಿನ ಮರದಿಂದ ಕಾಲು ಜಾರಿ ಬಿದ್ದಿದ್ದು ಮೃತಪಟ್ಟಿದ್ದಾರೆ.
Related Articles
Advertisement
ಕೂಲಿ ಕಾರ್ಮಿಕ ಮಧುಸೂಧನ್ ತನ್ನ ತಾಯಿಯ ಆರೋಗ್ಯ ನೋಡಿಕೊಂಡು ಜೀವನ ಸಾಗಿಸುತ್ತಿದ್ದ. ಆತನ ತಾಯಿ, ಮಗನಿಗೆ ಮದುವೆ ಮಾಡಿ ಸಂತೋಷವನ್ನು ಕಾಣಲು ಕನಸು ಕಟ್ಟಿಕೊಂಡಿದ್ದು ಈಗ ಮಗನ ಸಾವಿನಿಂದ ನೋವು ಅನುಭವಿಸುತ್ತಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ತಾಯಿಯಿಂದ ಮಗನನ್ನು ದೂರ ಮಾಡಿರುವುದಲ್ಲದೇ ಆತನ ಮೇಲೆ ಕಳ್ಳತನದ ಆರೋಪ ಕೂಡಾ ಹಾಕಿದ್ದಾನೆ. ಮೃತನಾದ ಬಳಿಕ ಎರಡು ಲಕ್ಷ ಹಣದ ಆಸೆ ತೋರಿಸಿ ತೋಟದ ಮಾಲೀಕನ ಜೊತೆ ಸೇರಿ ಊರಿನ ಮುಖಂಡರಾದ ಸೀನಪ್ಪ, ಜಯರಾಮಯ್ಯ, ಚಂದ್ರು, ಶ್ರೀನಿವಾಸ್, ಮಂಜಣ್ಣ ಎಂಬವರು ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಿದ್ದು ಪ್ರಕರಣದ ಸಂಪೂರ್ಣ ಮಾಹಿತಿ ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಸ್ಥಳಕ್ಕೆ ಕೋಳಾಲ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪ್ರತಿದಿನ ಮಧುಸೂಧನ್ ತನ್ನ ತೋಟದ ಕೆಲಸಕ್ಕೆ ಬರುತ್ತಿದ್ದ. ನನಗೆ ಹೊರಗಡೆ ತಿಂಡಿ ತಿನ್ನುವ ಅಭ್ಯಾಸವಿಲ್ಲ. ತೋಟಕ್ಕೆ ನೀರು ಬಿಡುವಂತೆ ತಿಳಿಸಿ ಮನೆಗೆ ತೆರಳಿದೆ. ಕೆಲಸಗಾರನಿಗೂ ತಿಂಡಿ ತಂದಾಗ ಅಷ್ಟೋತ್ತಿಗಾಗಲೇ ಆತ ಮರದಡಿ ಬಿದ್ದದ್ದ. ಕೂಡಲೇ ಸ್ನೇಹಿತರಿಗೆ ಕರೆ ಮಾಡಿ ತಿಳಿಸಿದ್ದೇನೆ. ಸ್ವಲ್ಪ ಸಮಯದ ನಂತರವೇ ಈ ಘಟನೆ ಬಗ್ಗೆ ಗೊತ್ತಾಗಿರುವುದು. ನಾನು ಯಾವ ಹಲಸಿನಕಾಯಿ ಕೀಳುವುದಕ್ಕೂ ಹೇಳಿಲ್ಲಾ, ನನಗೆ ಮೊಟ್ಟ ಮೊದಲು ಆರೋಗ್ಯವೇ ಸರಿ ಇಲ್ಲಾ. – ಬಸವರಾಜು , ತೋಟದ ಮಾಲೀಕ
ನನ್ನ ಪತಿ ಸಹ ಮುಂಚೆಯೇ ನಿಧನರಾಗಿದ್ದರು. ಒಬ್ಬನೇ ಮಗನೆಂದು ಬಹಳ ಪ್ರೀತಿಯಿಂದ ಸಾಕಿದ್ದೇ. ನನ್ನ ಮಗ ಕೆಲಸಕ್ಕೆ ಬರುವುದಿಲ್ಲ ಎಂದರೂ ಈ ತೋಟದ ಮಾಲೀಕ ಬಸವರಾಜು ಬಿಡದೇ ಕರೆದುಕೊಂಡು ಹೋಗುತ್ತಿದ್ದ. ನನಗೆ ಕಣ್ಣಿನ ಸಮಸ್ಯೆ ಬೇರೆ ಇತ್ತು. ಇವತ್ತು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇನೆ ಎಂದಿದ್ದನು. ನನಗೆ ಇನ್ಯಾರು ದಿಕ್ಕು. – ರಂಗಮ್ಮ, ಕೂಲಿ ಕಾರ್ಮಿಕನ ತಾಯಿ