Advertisement

Koratagere: 6 ವರ್ಷದ ಬಾಲಕಿಯನ್ನು ಎಳೆದೊಯ್ದು ಯುವಕನಿಂದ ಅತ್ಯಚಾರ

08:35 PM Jan 30, 2024 | Team Udayavani |

ಕೊರಟಗೆರೆ: ಮನೆಯ ಮುಂದೆ ಸ್ನೇಹಿತೆಯರ ಜತೆ ಆಟವಾಡುತ್ತಿದ್ದ ಅಪ್ರಾಪ್ತ ವಯಸ್ಕ ಬಾಲಕಿಯನ್ನು ಯುವಕನೋರ್ವ ಬಲವಂತವಾಗಿ ಮನೆಯೊಳಗೆ ಎಳೆದೊಯ್ದು ಅತ್ಯಾಚಾರ ಮಾಡಿ ಪರಾರಿ ಆಗಿರುವ ಘಟನೆ ಜ.29 ರ ಸೋಮವಾರ ಸಂಜೆ ನಡೆದಿದೆ.

Advertisement

ಕೊರಟಗೆರೆ ಪಟ್ಟಣದ 6 ವರ್ಷದ ಬಾಲಕಿ ತನ್ನ ಸ್ನೇಹಿತೆಯರ ಜತೆ ಮನೆಯ ಮುಂದೆ ಆಟವಾಡುತ್ತಿದ್ದ ವೇಳೆ ಖಾಸಗಿ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೋರ್ವ ಹೊರಗಡೆ ಹೊಂಚುಹಾಕಿ ಯಾರು ಇಲ್ಲದಿರುವುದನ್ನು ಗಮನಿಸಿ ಮನೆಯೊಳಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾನೆ.

ಅಸ್ವಸ್ಥಗೊಂಡ ಬಾಲಕಿಯನ್ನು ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಆರೋಪಿಗೆ ಕಠಿನ ಮರಣದಂಡನೆ ನೀಡುವಂತೆ ಕೊರಟಗೆರೆ ಜನತೆ ಪೊಲೀಸ್ ಠಾಣೆ ಮುಂದೆ ಜಮಾವಣೆಗೊಂಡು ಒತ್ತಾಯಿಸಿದ್ದಾರೆ.

ಮಧುಗಿರಿ ತಾಲೂಕು ಐ.ಡಿ.ಹಳ್ಳಿ ಗ್ರಾಮದ ಪವನ್.ಆರ್(23) ಬಂಧಿತ ಆರೋಪಿ. ಬಾಲಕಿಯ ಮೇಲೆ ಅತ್ಯಚಾರ ಎಸಗಿ ಪರಾರಿ ಆಗಿದ್ದ ಆರೋಪಿಯನ್ನ ತನ್ನ ಮನೆಯಲ್ಲಿ ಮಂಗಳವಾರ ಮುಂಜಾನೆಯೇ ಕೊರಟಗೆರೆ ಪೊಲೀಸರ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಕೊರಟಗೆರೆ ಸಿಪಿಐ ಅನಿಲ್, ಪಿಎಸೈ ಚೇತನ್, ಕೋಳಾಲ ಪಿಎಸೈ ರೇಣುಕಾ, ಸಿಡಿಪಿಓ ಅಂಬಿಕಾ, ಕಂದಾಯ ಇಲಾಖೆಯ ಗುರುಶಂಕರ್ ಮತ್ತು ನಕುಲ್ ಬೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಯುವಕನ ಮೇಲೆ ಪೋಕ್ಸೋ ಖಾಯ್ದೆಯಡಿ ಪ್ರಕರಣ ದಾಖಲಾಗಿದೆ.

Advertisement

ಪ್ರತಿಭಟಿಸಿ ತಹಶೀಲ್ದಾರ್‌ಗೆ ಮನವಿ
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವನ್ನು ಖಂಡಿಸಿ ಕೊರಟಗೆರೆ ಪಟ್ಟಣದ ಎ.ಪಿ.ಜೆ.ಅಬ್ದುಲ್‌ ಕಲಾಂ ಸಂಘಟನೆ, ಎಸ್‌ಡಿಪಿಐ ಮತ್ತು ಸಾರ್ವಜನಿಕರು ಕಂದಾಯ ಇಲಾಖೆಯ ಮುಂದೆ ಪ್ರತಿಭಟನೆ ನಡೆಸಿ ಆರೋಪಿಗೆ ಕಠಿಣ ಮರಣ ದಂಡನೆ ನೀಡುವಂತೆ ಆಗ್ರಹಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next