Advertisement
ಪೂರ್ವಜರು ನಿರ್ಮಾಣ ಮಾಡಿದ್ದ ಈ ಕೆರೆ ಸಹಜ ಜೀವ ಜಲದ ಸಂಪತ್ತುಗಳ ರಾಶಿಯಾಗಿಗೆ ಆಸರೆಯಾಗಿದೆ. ಕರಸುಳ್ಳಿ ಊರಿನ ಸುಮಾರು 25 ಎಕರೆ ಅಡಿಕೆ ತೋಟ, 25-30 ಎಕರೆ ಕೆರೆ ಭತ್ತದ ಗದ್ದೆಗೆ ಆಶ್ರಯವಾಗಿದೆ. ಆದರೆ, ಈಗ ಹೂಳು ತುಂಬಿದ್ದು, ಹೂಳು ತೆಗೆಯುವ ಜೊತೆಗೆ ಕೆರೆಯ ಏರಿ ಹಾಗೂ ಕೋಡಿಯು ದುರಸ್ತಿಗೆ ಕಾದಿದೆ. ಕೆರೆಯ ನೀರಿನ ಮೇಲೆ ನೀರ ಹುಲ್ಲೂ ಬೆಳೆದಿದೆ. ಒಂದು ಕಾಲಕ್ಕೆ ಬಾತುಕೋಳಿಗಳೂ ಓಡಾಡಿಕೊಂಡಿದ್ದವು ಈಗ ಪುನಶ್ಚೇತನಕ್ಕೆ ಹಾತೊರೆಯುತ್ತಿದೆ.
Related Articles
Advertisement
ಈ ಕೆರೆ ಸರಿಯಾಗಿದ್ದರೆ ಊರಿನ ಜಲ ಮಟ್ಟ ಕೂಡ ಏರುತ್ತದೆ. ದೊಡ್ಡ ಕೆರೆ ಆಗಿದ್ದರಿಂದ ಕೇವಲ ಗ್ರಾಮಸ್ಥರಿಂದ ಅಭಿವೃದ್ಧಿ ಕಷ್ಟ. ಅಂದಾಜು 25-30 ಲಕ್ಷ ರೂಪಾಯಿ ಬೇಕಾಗಬಹುದು. ಆದರೆ, ಗ್ರಾಮದ ಸರ್ವ ಹಿತದ ಕಾರಣದಿಂದ ಆಗಲೇಬೇಕಾದ ಅಭಿವೃದ್ಧಿ ಕಾರ್ಯವಾಗಿದೆ. ಈ ಜಲ ಪಾತ್ರೆ ಉಳಿಸಿಕೊಡಿ ಎಂದು ಜಲ ಕೈಂಕರ್ಯ ನಡೆಸುವವರಲ್ಲಿ ಕೇಳಿಕೊಳ್ಳುವದೇ ಆಗಿದೆ ಎನ್ನುತ್ತಾರೆ ಗ್ರಾಮಸ್ಥರಾದ ಅನಂತ ಭಟ್ಟ ಕರಸುಳ್ಳಿ ಹಾಗೂ ಪ್ರಶಾಂತ ಭಟ್ಟ, ಯೋಗೀಶ ಭಟ್ಟ.
ಇದಕ್ಕೆ ಒರತೆ ನೀರು ಇದೆ. ಕುಡಿಯುವ ನೀರಿಗೂ ಇದೇ ಮೂಲ. ಸರ್ವೆ ನಂಬರ್ 229 ನಲ್ಲಿದೆ ನಮ್ಮ ಜಲಪಾತ್ರೆ. ಜನಪ್ರತಿನಿಧಿಗಳ ಹಾಗೂ ಆಸಕ್ತರ ಮೂಲಕ ಈ ಕೆರೆ ಅಭಿವೃದ್ಧಿ ಮಾಡಿಕೊಡಿಸಲು ಮನವಿ ಮಾಡಿಕೊಳ್ಳುತ್ತೇವೆ. ಈಗ ಮಳೆಗಾಲ ಆಗಿದ್ದರಿಂದ ಹೂಳೆತ್ತಲು ಆಗದು. ಎಪ್ರೀಲ್ ಮೇ ತಿಂಗಳು ಸಕಾಲ ಆದರೂ ಈಗ ಪ್ರಸ್ತಾವನೆ ಸಲ್ಲಿಸಿದರೆ ಮುಂದಿನ ಮೇ ಹೊತ್ತಿಗೆ ಅಭಿವೃದ್ಧಿ ಕಾಣಬಹುದು ಎಂಬುದು ನಿರೀಕ್ಷೆ ಎನ್ನುತ್ತಾರೆ ಗ್ರಾಮದ ಗಿರೀಶ ಭಟ್ಟ ಹಾಗೂ ನಾಗರಾಜ್ ಜೋಶಿ.
ಶತಮಾನಗಳಿಂದ ಹೂಳೆತ್ತಿಸಿಕೊಳ್ಳದ, ಹೂಳು, ಕೆಸರಿನಿಂದ ತುಂಬಿದ ಕರಸುಳ್ಳಿಯ ದೊಡ್ಡ ಕೆರೆ ಸಮಗ್ರ ಅಭಿವೃದ್ಧಿಗೆ ಕಾದಿದೆ. ಸರಕಾರ ಹಾಗೂ ಸಹಕಾರಿಗಳಿಂದ ಜಲ ರಕ್ಷಣೆಯ ಕಾರ್ಯಕ್ಕೆ ಕೈ ಜೋಡಿಸುವ ಕಾರ್ಯ ಆಗಬೇಕಿದೆ.