Advertisement

ಉ-ಕ ಭಾಗದಲ್ಲಿ  ಏಮ್ಸ್‌  ಮಾದರಿ ಆಸ್ಪತ್ರೆ ಅಗತ್ಯ: ಶೆಟ್ಟರ

12:01 PM Feb 17, 2019 | |

ಕೊಪ್ಪಳ: ದೆಹಲಿಯಲ್ಲಿ ಅತ್ತ್ಯುನ್ನತ ಏಮ್ಸ್‌ ಆಸ್ಪತ್ರೆಯಿದೆ. ಅಂತಹ ಆಸ್ಪತ್ರೆಯನ್ನು ಕರ್ನಾಟಕಕ್ಕೆ ಕೊಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಅದರಲ್ಲೂ ಉತ್ತರ ಕರ್ನಾಟಕ ಭಾಗಕ್ಕೆ ಏಮ್ಸ್‌ ಆಸ್ಪತ್ರೆ ಮಂಜೂರು ಮಾಡುವಂತೆ ಹೇಳಿದ್ದು, ಕೇಂದ್ರವೂ ಈ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿದೆ ಎಂದು ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಹೇಳಿದರು.

Advertisement

ನಗರದಲ್ಲಿ ಮಾಜಿ ಶಾಸಕ ಕೆ. ಶರಣಪ್ಪ ಅವರ ಪುತ್ರ ಡಾ| ಕೆ. ಬಸವರಾಜ ಅವರ ಕೆ.ಎಸ್‌. ಆಸ್ಪತ್ರೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಏಮ್ಸ್‌ ಆಸ್ಪತ್ರೆಯು ಅತ್ತುನ್ನತ ಸೇವೆ ಕೊಡುವಲ್ಲಿ ಮುಂಚೂಣಿಯಲ್ಲಿದೆ. ಹಾಗಾಗಿ ಅಂತಹ ಆಸ್ಪತ್ರೆಗಳು ಕರ್ನಾಟಕದಲ್ಲಿ ಅವಶ್ಯವಾಗಿವೆ. ಕೇಂದ್ರಕ್ಕೆ ಮನವಿ ಮಾಡಿದ್ದು, ಉತ್ತರ ಕರ್ನಾಟಕದಲ್ಲಿ ಅಂತಹ ಆಸ್ಪತ್ರೆಗಳ ಅವಶ್ಯಕತೆಯಿದೆ ಎಂದಿದ್ದೇವೆ. ಈ ಕುರಿತು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದರು.

ಡಾ| ಬಸವರಾಜ ವೈದ್ಯಕೀಯ ಕಲಿತು ಬೆಂಗಳೂರಿನಲ್ಲಿ ಸೇವೆ ಮುಂದುವರಿಸದೇ ಈ ಭಾಗದ ಜನರಿಗೆ ಸೇವೆ ಕೊಡಬೇಕೆನ್ನುವ ಸದುದ್ದೇಶದಿಂದ ಆಸ್ಪತ್ರೆ ಆರಂಭಿಸಿದ್ದು ಒಳ್ಳೆಯ ವಿಚಾರ. ಅವರು ಸೇವಾ ಭಾವದಿಂದ ಈ ಆಸ್ಪತ್ರೆ ಆರಂಭಿಸಿದ್ದೇನೆ ಎನ್ನವ ಮಾತನ್ನಾಡಿದ್ದಾರೆ.

ನಿಜಕ್ಕೂ ಮಾನವೀಯ ಸೇವೆ ಇದ್ದಲ್ಲಿ ಯಾವುದೇ ಕೆಲಸವೂ ಯಶಸ್ವಿಯಾಗಿ ನೆರವೇರಲಿದೆ ಎಂದರು. ನಾಡಿನ ಜನರಲ್ಲಿ ಆರೋಗ್ಯ ಸುರಕ್ಷತೆಯ ಬಗ್ಗೆ ಕಾಳಜಿ ಇರಬೇಕು. ಸರ್ಕಾರ, ಸಮಾಜ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಕೇಂದ್ರ ಸರ್ಕಾರವು ಬಡ ಜನರ ಆರೋಗ್ಯದ ರಕ್ಷಣೆಗಾಗಿ ಆಯುಷ್ಮಾನ ಭಾರತ ಯೋಜನೆ ಆರಂಭಿಸಿದೆ. ರಾಜ್ಯ ಸರ್ಕಾರವೂ ಆ ಯೋಜನೆ ಪಾಲುದಾರಿಕೆ ಹೊಂದಿದೆ. ಪ್ರತಿಯೊಬ್ಬರು 5 ಲಕ್ಷದವರೆಗೂ ಚಿಕಿತ್ಸಾ ಸೌಲಭ್ಯ ಪಡೆಯಬಹುದು. ನಾನು ಸಿಎಂ ಆಗಿದ್ದ ವೇಳೆ ಕೊಪ್ಪಳಕ್ಕೆ ಮೆಡಿಕಲ್‌ ಕಾಲೇಜು ಆರಂಭಿಸಲು ಅನುಮತಿ ಕೊಟ್ಟಿದ್ದೇನೆ. ಆದರೆ ನನ್ನ 10 ತಿಂಗಳಲ್ಲಿ ಅನುಷ್ಟಾನ ಮಾಡಲಾಗಲಿಲ್ಲ. ಈಗ ಕೊಪ್ಪಳದಲ್ಲಿ ಮೆಡಿಕಲ್‌ ಕಾಲೇಜು ಆರಂಭವಾಗಿದೆ. ಹಿಂದುಳಿದ ಪ್ರದೇಶಕ್ಕೆ ಮೆಡಿಕಲ್‌ ಕಾಲೇಜು ಸೇರಿದಂತೆ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಗಳು ಬರಲಾರಂಭಿಸಿವೆ ನಿಜಕ್ಕೂ ಸಂತಸ ತಂದಿದೆ.

ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆಗಳು ಬಡ ಜನರಿಗೆ ಅನುಕೂಲವಾಗಬೇಕಿದೆ. ದೊಡ್ಡ ಆಸ್ಪತ್ರೆಗಳು ಕೇವಲ ಶ್ರೀಮಂತರಿಗಷ್ಟೇ ಅಲ್ಲ ಬಡ ಜನರಿಗೂ ಸೇವೆ ಕೊಡಬೇಕು. ನಾವು ಸಹಿತ ರೋಗ ಬಾರದಂತೆ ನೋಡಿಕೊಳ್ಳಬೇಕು. ದಿನ ನಿತ್ಯದ ಆಹಾರ ಪದ್ಧತಿ ಬಗ್ಗೆ ನಾವು ಕಾಳಜಿ ವಹಿಸಬೇಕು ಎಂದರು.

Advertisement

ಡಾ| ಕೆ. ಬಸವರಾಜ ಮಾತನಾಡಿ, ತಂದೆ ಆಸೆಯಂತೆ ಕೊಪ್ಪಳದಲ್ಲಿ ಆಸ್ಪತ್ರೆ ಮಾಡಿದ್ದೇವೆ.
ಸೇವಾ ಮನೋಭಾವದಿಂದ ಈ ಆಸ್ಪತ್ರೆ ಕಟ್ಟಿದ್ದೇನೆ. ಪ್ರತಿಯೊಬ್ಬರ ಸಹಕಾರವೂ ನನಗೆ ಅಗತ್ಯವಾಗಿದೆ ಎಂದರು.

ಸಚಿವ ಶಿವಾನಂದ ಪಾಟೀಲ್‌ ಮಾತನಾಡಿ, ವೈದ್ಯಕೀಯ ಸೇವೆಯಲ್ಲಿ ರಾಜ್ಯದ ಅನೇಕರು ಸಾಧನೆ ಮಾಡಿದ್ದಾರೆ. ಪ್ರಸ್ತುತ ದಿನದಲ್ಲಿ ವೈದ್ಯವೃತ್ತಿ ದುಡ್ಡು ಗಳಿಸುವ ವೃತ್ತಿಯಾಗುತ್ತಿದೆ.
ವೈದ್ಯಸೇವೆ ಪವಿತ್ರ ವೃತ್ತಿ. ವೃತ್ತಿಗೆ ತಕ್ಕಂತೆ ವೈದ್ಯರು ನಡೆದುಕೊಂಡು ರೋಗಿ ಯೋಗಕ್ಷೇಮ
ವಿಚಾರಿಸಿದರೆ ರೋಗಿಯಲ್ಲಿನ ಅರ್ಧ ರೋಗ ವಾಸಿಯಾಗುತ್ತದೆ ಎಂದರು.

ರಾಜ್ಯ ಹಾಗೂ ಕೇಂದ್ರ ಸರ್ಕಾರ ಆಯುಷ್ಮಾನ ಯೋಜನೆ ಜಾರಿ ತಂದಿದೆ. ದೊಡ್ಡ ದೊಡ್ಡ ಖಾಯಿಲೆಗಳಿಗೆ ಈ ಯೋಜನೆಯಡಿ ಚಿಕಿತ್ಸೆ ದೊರೆತು ಬಡ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಡಾ| ಕೆ. ಬಸವರಾಜ ಅವರು ಕೊಪ್ಪಳದಂತಹ ಪ್ರದೇಶದಲ್ಲಿ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆ ಆರಂಭಿಸಿದ್ದಾರೆ. ಅವರು ನಮ್ಮೊಂದಿಗೆ ಕೈ ಜೋಡಿಸಿದರೆ ಸರ್ಕಾರದಿಂದ ದೊರೆಯಬೇಕಾದ ನೆರವು ನೀಡಲಾಗುವುದು. ಹಣಕ್ಕಿಂತ ಗುಣ ಮುಖ್ಯವಾಗಿದೆ. ಗುಣವಂತ ಆಸ್ಪತ್ರೆಯಾಗಲಿ ಎಂದರು. ಸಂಸದ ಸಂಗಣ್ಣ ಕರಡಿ, ಶಾಸಕರಾದ ಹಾಲಪ್ಪ ಆಚಾರ್‌, ಅಮರೇಗೌಡ ಬಯ್ನಾಪುರ, ಮಾಜಿ ಸಂಸದ ಶಿವರಾಮೆಗೌಡ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್‌ ಸೇರಿದಂತೆ ಇತರರು ಮಾತನಾಡಿದರು. ಗವಿಸಿದ್ದೇಶ್ವರ ಸ್ವಾಮೀಜಿ, ಚನ್ನಬಸವ ಶಿವಾಚಾರ್ಯ ಸಾನಿಧ್ಯ ವಹಿಸಿದ್ದರು. ಸಚಿವ ವೆಂಕಟರಾವ್‌ ನಾಡಗೌಡ, ಶಾಸಕರಾದ ಪರಣ್ಣ ಮನುವಳ್ಳಿ, ಶಾಸಕ ಕಳಕಪ್ಪ ಬಂಡಿ, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ವಿರೂಪಾಕ್ಷಪ್ಪ ಅಗಡಿ, ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು, ವೈದ್ಯ ಡಾ| ಕೆ.ಜಿ. ಕುಲಕರ್ಣಿ, ಡಾ| ಮಲ್ಲಿಕಾರ್ಜುನ ರಾಂಪೂರು, ನಗರಸಭೆ ಮುತ್ತು ಕುಷ್ಟಗಿ, ಜಿ.ಎಲ್‌. ಪಾಟೀಲ್‌, ನವೀನ್‌ ಗುಳಗಣ್ಣವರ್‌, ಗುರು, ಅಡಿವೆಪ್ಪ ಬಾವಿಮನಿ, ಸಿ.ವಿ. ಚಂದ್ರಶೇಖರ, ಮಾಲತಿ ನಾಯಕ್‌, ಕೆ. ಮಹೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next