Advertisement

ಕೊಪ್ಪಳ:  ಭಾನಾಪೂರ ಬಳಿ ಭೀಕರ ರಸ್ತೆ ಅಪಘಾತ ; ಅಪರಿಚಿತ ವಾಹನ ಢಿಕ್ಕಿ ಹೊಡೆದು ಐವರ ದುರ್ಮರಣ

12:44 AM Jul 24, 2022 | Team Udayavani |

ಕೊಪ್ಪಳ: ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪೂರ ಬಳಿ ಸ್ಕಾರ್ಪಿಯೊಗೆ ಯಾವುದೋ ವಾಹನ ಗುದ್ದಿದ್ದು ಈ ಅಪಘಾತದಲ್ಲಿ ಐವರು ಸ್ಥಳದಲ್ಲೆ ಮೃತಪಟ್ಟ ಘಟನೆ ಶನಿವಾರ ತಡರಾತ್ರಿ ನಡೆದಿದೆ.

Advertisement

ಮೃತರನ್ನು ಯಲಬುರ್ಗಾ ತಾಲೂಕಿನ ಬಿನ್ನಾಳ ಗ್ರಾಮದ ದೇವಪ್ಪ ಕೊಪ್ಪದ(62), ಮೃತರ ಸೊಸೆ ಗಿರಿಜಮ್ಮ(45), ಅಣ್ಣನ ಮಕ್ಕಳಾದ ಶಾಂತಮ್ಮ(35), ಪಾರ್ವತಮ್ಮ(32), ಸಂಬಂಧಿ  ಕಸ್ತೂರಮ್ಮ(20) ಗುರುತಿಸಲಾಗಿದೆ. ಚಾಲಕ ಹರ್ಷವರ್ಧನ, ಮಕ್ಕಳಾದ ಬಸವರಾಜ, ಪುಟ್ಟರಾಜ, ಭೂಮಿಕಾ ಜಿಲ್ಲಾಸ್ಪತ್ರೆಗೆ ರವಾನೆ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಕೊಪ್ಪಳದಿಂದ ಬರ್ತಡೆ ಪಾರ್ಟಿ ಮುಗಿಸಿಕೊಂಡು ತೆರಳುತ್ತಿದ್ದ ಸ್ಕಾರ್ಪಿಯೋ ವಾಹನಕ್ಕೆ ಯಾವುದೋ ಒಂದು ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ. ದೇವಪ್ಪ ಕೊಪ್ಪದ ಸೇರಿ ಅವರ ಕುಟುಂಬದ 5 ಜನ ಸಾವನ್ನಪ್ಪಿದ್ದಾರೆ. ಒಟ್ಟು 9 ಜನರು ಸ್ಕಾರ್ಪಿಯೋದಲ್ಲಿ ಪ್ರಯಾಣಿಸುತ್ತಿದ್ದರು. ಸ್ಥಳಕ್ಕೆ ಕುಕನೂರು ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next