Advertisement

ಅಡ್ಡಾದಿಡ್ಡಿ ಪಾರ್ಕಿಂಗ್‌ ನಿಂದ ಸಂಚಾರಕ್ಕೆ ಸಮಸ್ಯೆ : ಪಾದಚಾರಿಗಳ ಸಮಸ್ಯೆ ಹೇಳತೀರದು

03:14 PM Nov 30, 2020 | sudhir |

ಕಾರಟಗಿ: ಪಟ್ಟಣದ ವಿವಿಧ ಪ್ರಮುಖ ರಸ್ತೆಗಳು ಸೇರಿದಂತೆ ಜನಬೀಡ ಪ್ರದೇಶಗಳಲ್ಲಿ ವಾಹನಗಳ ಭರಾಟೆ ಹಾಗೂ ಅಡ್ಡಾದಿಡ್ಡಿ ವಾಹನಗಳ ನಿಲುಗಡೆಯಿಂದಾಗಿ ಪಾದಚಾರಿಗಳ ಸಂಚಾರಕ್ಕೆ ಭಾರಿ ಸಮಸ್ಯೆಯಾಗಿದೆ.

Advertisement

ಜನಪ್ರತಿನಿಧಿಗಳ ನಿರ್ಲಕ್ಷ್ಯ, ಅಧಿಕಾರಿಗಳ ಬೇಜವಾಬ್ದಾರಿತನದಿಂದ ಹಲವು ದಶಕಗಳಿಂದ ತೊಂದರೆ ಅನುಭವಿಸುತ್ತಿರುವ ಜನತೆ ಪುರಸಭೆ ಕಾರ್ಯವೈಖರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಕನಕದಾಸ ವೃತ್ತ ಹಾಗೂ ಹಳೆ ಬಸ್‌ ನಿಲ್ದಾಣಗಳಲ್ಲಿ ತಳ್ಳು ಬಂಡಿಗಳ ಹಾವಳಿ ಹೆಚ್ಚುತ್ತಿರುವುದರಿಂದ ಪಾದಚಾರಿ ರಸ್ತೆ ಮಾಯವಾಗಿ ಪ್ರಮುಖ ವೃತ್ತಗಳಲ್ಲಿ ವಾಹನ ಸವಾರರು ಪಾದಚಾರಿಗಳ
ಅನುಭವಿಸುತ್ತಿರುವ ತೊಂದರೆ ಹೇಳತೀರದಾಗಿದೆ.

ಪಟ್ಟಣದಲ್ಲಿ ಹೊಸಬಸ್‌ ನಿಲ್ದಾಣ ಆರಂಭಗೊಂಡು ದಶಕಗಳಾದರೂ ಯಾವೊಂದು ಬಸ್‌ಗಳಾಗಲಿ, ಪ್ರಯಾಣಿಕರಾಗಲಿ ಬಸ್‌ ನಿಲ್ದಾಣದತ್ತ ಸುಳಿಯುತ್ತಿಲ್ಲ. ಇದರಿಂದಾಗಿ ಹಳೆ ಬಸ್‌ ನಿಲ್ದಾಣ ಹಾಗೂ ಕನಕದಾಸ ವೃತ್ತಗಳಲ್ಲಿ ದೂರದ ಉರುಗಳಿಗೆ ತೆರಳುವ ಹಾಗೂ ದೂರದ ಉರುಗಳಿಂದ ಆಗಮಿಸುವ ಪ್ರಯಾಣಿಕರು ಈ ಸ್ಥಳದಿಂದಲೇ ಬಸ್‌ ಪ್ರಯಾಣ ಮಾಡುವುದು
ವಾಡಿಕೆಯಾಗಿಬಿಟ್ಟಿದೆ. ಹೀಗಾಗಿ ಜನಸಂದಣಿ ದಿನಕಳೆದಂತೆ ಹೆಚ್ಚುತ್ತಿದ್ದು, ಗೂಡಗಂಡಿಗಳು ಫುಟ್‌ಪಾತ್‌, ರಸ್ತೆಯಲ್ಲೆ ವ್ಯಾಪಾರ ವಹಿವಾಟು ನಡೆಸುತ್ತಾರೆ. ಸರಕಾರಿ, ಖಾಸಗಿ ಬಸ್‌ಗಳು ಕೂಡ ರಸ್ತೆಯಲ್ಲಿ ನಿಂತು ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಅನಿವಾರ್ಯತೆ ಉಂಟಾಗಿ ಅಡ್ಡಾದಿಡ್ಡಿ ವಾಹನಗಳ ಭರಾಟೆ ಹೆಚ್ಚಲು ಮುಖ್ಯ ಕಾರಣವಾಗಿದೆ.

ಇದನ್ನೂ ಓದಿ:ಗೌರಿ ಹುಣ್ಣಿಮೆಗೆ ಸಕ್ಕರೆ ಗೊಂಬೆ ಖರೀದಿ ಜೋರು :ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿದ ಬೇಡಿಕೆ

Advertisement

ಈ ಕುರಿತು ಹಲವಾರು ಭಾರಿ ಪಟ್ಟಣದ ಸಾರ್ವಜನಿಕರು, ಸಂಘ-ಸಂಸ್ಥೆಗಳು ಸಂಬಂಧಿಸಿದವರ ಗಮನಕ್ಕೆ ತಂದರೂ ಯಾವೊಬ್ಬ ಅಧಿಕಾರಿಯಾಗಲಿ, ಸಿಬ್ಬಂದಿಯಾಗಲಿ ಗಮನಹರಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಸಂಚಾರಿ ಠಾಣೆಯಿಂದ ಜಾಗೃತಿ ಫಲಕ
ಕೊಪ್ಪಳ: ನಗರದಲ್ಲಿ ಬೈಕ್‌ ಹಾಗೂ ವಾಹನ ಸವಾರರಿಗೆ ಸಂಚಾರಿ ನಿಯಮ ಪಾಲಿಸಲು ಪೊಲೀಸ್‌ ಇಲಾಖೆಯು ವಿವಿಧ ಜಾಗೃತಿ ಫಲಕಗಳನ್ನು ಬರೆಸುವ ಮೂಲಕ ಅಪಘಾತವನ್ನು ತಡೆಯುವಂತೆ ವಾಹನ ಸವಾರರಲ್ಲಿ ಎಚ್ಚರಿಕೆ ಮೂಡಿಸಿದೆ. ನಗರದಲ್ಲಿ ಹಲವು ದಿನಗಳಿಂದ ಸಂಚಾರಿ ನಿಯಮಗಳೇ ಸರಿಯಾಗಿ ಪಾಲನೆಯಾಗುತ್ತಿರಲಿಲ್ಲ. ಇದರಿಂದಾಗಿ ವಾಹನ ಸವಾರರು
ಎಲ್ಲೆಂದರಲ್ಲಿ, ಅಡ್ಡಾದಿಡ್ಡಿಯಾಗಿ ವಾಹನ ಚಾಲನೆ ಮಾಡಿ ಪಾದಚಾರಿಗಳಿಗೆ ಡಿಕ್ಕಿ ಹೊಡೆದು ಅಪಘಾತವನ್ನುಂಟು ಮಾಡುತ್ತಿದ್ದರು. ಸಂಚಾರಿ ಪೊಲೀಸರು ಎಷ್ಟೇ ಜಾಗೃತಿ ಮೂಡಿಸಿ ಸಂಚಾರಿ ನಿಯಮ ಪಾಲಿಸುವಂತೆ ಹೇಳಿದರೂ ಸಹಿತ ಸರಿಯಾಗಿ ಪಾಲನೆ ಆಗುತ್ತಿಲ್ಲ. ಕೊನೆಗೆ ಪೊಲೀಸ್‌ ಇಲಾಖೆಯೇ ವಿವಿಧೆಡೆ ಇರುವ ಬ್ಯಾರಿಕೇಡ್‌ ಹಾಗೂ ರಸ್ತೆ ಬದಿಯಲ್ಲಿ ಹಾಕಿದ್ದ ಬ್ಯಾರಿಕೇಡ್‌ಗೆ ಸಂಚಾರಿ ನಿಯಮ ಪಾಲನೆಯ ಕುರಿತು ಫಲಕ ಬರೆಸಿದರು. ಈ ವೇಳೆ ಡಿಎಸ್‌ಪಿ ವೆಂಕಟಪ್ಪ ನಾಯಕ್‌ ಸೇರಿದಂತೆ ಇತರೆ ಪೊಲೀಸ್‌ ಅ ಧಿಕಾರಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next