ಗಂಗಾವತಿ: ಇಲ್ಲಿನ ತಹಸೀಲ್ದಾರ್ ಕಚೇರಿ ಸಿಬ್ಬಂದಿಯೊಬ್ಬರಿಗೆ ಕೋವಿಡ್ ಸೋಂಕು ದೃಢಗೊಂಡ ಕಾರಣದಿಂದಾಗಿ ಇಡೀ ತಹಸೀಲ್ದಾರ್ ಕಚೇರಿಗೆ ಬೀಗ ಹಾಕಿ ಸೀಲ್ ಡೌನ್ ಮಾಡಲಾಗಿದೆ.ಇದರಿಂದ ನೋಂದಣಿ ಕಚೇರಿ ಆಹಾರ ಇಲಾಖೆ ಚುನಾವಣಾ ಕಚೇರಿ ಸರ್ವೇ ಇಲಾಖೆಯ ಕಚೇರಿಯನ್ನು ಸೋಮವಾರ(ಮೇ. 3) ಒಂದು ದಿನದ ಮಟ್ಟಿಗೆ ಮುಚ್ಚಲಾಗಿದೆ.
ಓದಿ : ಆಕ್ಸಿಜನ್ ಸಮಸ್ಯೆಯಿಂದ ದುರಂತ ನಡೆದಿದ್ದರೆ ಸರ್ಕಾರವೇ ಹೊಣೆ ಹೊರಬೇಕು: ಸಿ.ಟಿ.ರವಿ
ಇನ್ನು, ಸಾರ್ವಜನಿಕ ಪರವಾನಿಗೆ ಕೊಡುವ ಪ್ರಥಮದರ್ಜೆ ಸಹಾಯಕನೊರ್ವನಿಗೆ ಕೊವಿಡ್ ದೃಡಗೊಂಡಿದ್ದು, ಕೋವಿಡ್ ಸಂದರ್ಭದಲ್ಲಿ ಪರವಾನಿಗೆ ಕೊಡುವ ವಿಭಾಗದಲ್ಲಿ ನಿತ್ಯವೂ ಹಲವು ಜನರು ಬಂದು ಹೋಗುವ ಕಾರಣದಿಂದಾಗಿ ಯಾರಿಂದ ಅಥವಾ ಯಾವಾಗ ಸೋಂಕು ತಗುಲಿದೆ ಎಂದು ಈವರೆಗೆ ತಿಳಿದಿಲ್ಲ. ಸೋಂಕಿತನಿಗೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಮನೆಯಲ್ಲಿ ಹೋಂ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ. ಪ್ರಾಥಮಿಕ ಮತ್ತು ದ್ವಿತಿಯ ಸಂಪರ್ಕಿತರ ಪತ್ತೆ ಕಾರ್ಯ ನಡೆಯುತ್ತಿದೆ.
ಕಚೇರಿಗೆ ಸೋಂಕು ನಿವಾರಣೆ ಸಿಂಪಡಣೆ: ಪ್ರಥಮದರ್ಜೆ ಸಹಾಯಕನೊರ್ವನಿಗೆ ಕೋವಿಡ್ ಸೋಂಕು ದೃಢಗೊಂಡ ಹಿನ್ನಲೆಯಲ್ಲಿ ಮನೆಯಲ್ಲಿ ಪ್ರತೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಮವಾರದ ಮಟ್ಟಿಗೆ ತಹಸೀಲ್ದಾರ್ ಕಚೇರಿ ಸೇರಿ ಇಲ್ಲಿ ಕಾರ್ಯನಿರ್ವಾಹಿಸುವ ಎಲ್ಲಾ ಕಚೇರಿಗಳನ್ನು ಬಂದ್ ಮಾಡಿ ಸೋಂಕು ನಿವಾರಕವನ್ನು ಸಿಂಪಡಣೆ ಮಾಡಲಾಗುತ್ತದೆ. ಮಂಗಳವಾರ ದಿಂದ ಯಥಾ ಪ್ರಕಾರ ತಹಸೀಲ್ದಾರ್ ಕಚೇರಿ ಕಾರ್ಯ ನಿರ್ವಹಿಸಲಿದೆ ಎಂದು ತಹಸೀಲ್ದಾರ್ ಯು.ನಾಗರಾಜ ಉದಯವಾಣಿ ಗೆ ತಿಳಿಸಿದ್ದಾರೆ.
ಓದಿ : ಐಪಿಎಲ್ ಗೆ ಕೋವಿಡಾಘಾತ: ಚೆನ್ನೈ ಸೂಪರ್ ಕಿಂಗ್ಸ್ ನ ಇಬ್ಬರಿಗೆ ಕೋವಿಡ್ ಪಾಸಿಟಿವ್