Advertisement

ಅಧಿಕಾರಕ್ಕೆ ಬಂದು ಸುಳ್ಳಿನ ಕನಸು ಬಿತ್ತಿದ ಬಿಜೆಪಿ: ಹಿಟ್ನಾಳ

06:19 PM Sep 05, 2021 | Team Udayavani |

ಕೊಪ್ಪಳ: ಬಿಜೆಪಿ ಸರ್ಕಾರ ಅಧಿಕಾರಕ್ಕೆಬಂದ ಬಳಿಕ ಜನರಿಗೆ ಬರಿ ಸುಳ್ಳಿನ ಕನಸನ್ನೇಬಿತ್ತುತ್ತಿದೆ. ಒಂದೂ ಅಭಿವೃದ್ಧಿ ಕೆಲಸವನ್ನುಮಾಡುತ್ತಿಲ್ಲ. ಮೋದಿ ಸರ್ಕಾರ ದೇಶದ ಆಸ್ತಿಗಳನ್ನು ಉಳ್ಳವರಿಗೆ ಮಾರುತ್ತಿದೆ ಎಂದುಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.

Advertisement

ನಗರದ ವಿವಿಧ ವಾರ್ಡ್‌ಗಳಲ್ಲಿಸುಮಾರು 1.82 ಕೋಟಿ ರೂ. ವೆಚ್ಚದ ವಿವಿಧಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿಮಾತನಾಡಿದರು. ಎಲ್ಲ ಬೆಲೆಗಳು ಏರುತ್ತಿದ್ದು,ಜನರ ಜೀವನ ಮಾತ್ರ ಕುಸಿಯುತ್ತಿದೆ.ಯುಪಿಎ ಸರಕಾರ ಮಾಡಿದ ಎಲ್ಲ ಜನಪರಕಾರ್ಯಕ್ರಮ ನಿಲ್ಲಿಸಿದ್ದು,ಕೊರೊನಾ ಹೆಸರಲ್ಲಿಜನರನ್ನು ಸುಲಿಯುತ್ತಿದ್ದಾರೆ.
ಮಾನವೀಯತೆ ಎನ್ನುವುದು ಬಿಜೆಪಿಯಲ್ಲಿ ಇಲ್ಲ, ಅವರುವ್ಯಾಪಾರಿಗಳಾಗಿದ್ದಾರೆ.

ಅವರಿಂದ ಇನ್ನೇನನ್ನುನಿರೀಕ್ಷೆ ಮಾಡಲು ಸಾಧ್ಯವಿದೆ ಎಂದರಲ್ಲದೇ,ಕ್ಷೇತ್ರದ ಅಭಿವೃದ್ಧಿಗೆ ಇನ್ನಷ್ಟು ಪ್ರಯತ್ನಮಾಡಲಾಗುವುದು. ಕಳೆದ 8 ವರ್ಷದಲ್ಲಿಮಾಡಿದ ಕೆಲಸಗಳೇ ನಮ್ಮನ್ನು ಮುಂದಿನಎಲ್ಲ ಚುನಾವಣೆಗಳ ಗೆಲುವಿನ ಮಂತ್ರ.ಕಾರ್ಯಕರ್ತರು ಸಂಘಟಿತರಾಗಿ ಕೆಲಸಮಾಡಿ ಮತ್ತೂಮ್ಮೆ ಕಾಂಗ್ರೆಸ್‌ ಅಧಿಕಾರಕ್ಕೆತರೋಣ ಎಂದರು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next