Advertisement

ಮತ ಚಲಾಯಿಸಿ ಮಾದರಿಯಾದರು

04:21 PM Apr 24, 2019 | Team Udayavani |

ಯಲಬುರ್ಗಾ: ಚುನಾವಣೆ ದಿನ ರಜೆ ಇರುವುದರಿಂದ ಮತದಾನ ಮಾಡದೆ ಸುತ್ತಾಡಲು ಹೋಗಿ ಪ್ರಜಾಪ್ರಭುತ್ವದ ಕರ್ತವ್ಯ ಮರೆಯುವವರಿಗೆ ವಿದೇಶದಿಂದ ಬಂದು ಸ್ವಗ್ರಾಮದಲ್ಲಿ ಮತದಾನ ಮಾಡಿದ ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದ ಪ್ರಾಧ್ಯಾಪಕಿ ಮಾದರಿಯಾಗಿದ್ದಾರೆ.

Advertisement

ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದ ನಿವಾಸಿ ನಿವೃತ್ತ ಸಬ್‌ ಪೋಸ್ಟ್‌ ಮಾಸ್ಟರ್‌ ಡಿ.ಎಸ್‌. ಮಸಾಲಿ ಅವರ ಪುತ್ರಿ ಅನುಪಮಾ ಮಸಾಲಿ ಪ್ರಾಧ್ಯಾಪಕರು ವಿದೇಶದಿಂದ ಬಂದು ತಮ್ಮ ಹಕ್ಕು ಚಲಾಯಿಸಿದವರು. ಭೂತಾನ್‌ ದೇಶದ ವಿಶ್ವವಿದ್ಯಾಲಯದಲ್ಲಿ ಅರ್ಥಶಾಶ÷ ವಿಷಯದ ಪ್ರಾಧ್ಯಾಪಕರಾಗಿ ಡಾ| ಅನುಪಮಾ ಕಾರ್ಯ ನಿರ್ವಹಿಸುತ್ತಿದ್ದಾರೆ. ಅನುಪಮ ಮಸಾಲಿ ಅವರು ಥಾಯ್ಲೆಂಡ್‌ ರಾಜಧಾನಿ ಬ್ಯಾಂಕಾಕ್‌ನಲ್ಲಿರುವ ಚುಲಾಲೊಂಗಕೊರ್ನ ಅಂತರಾಷ್ಟ್ರೀಯ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಸಹ ಪಡೆದಿದ್ದಾರೆ.

ಮತದಾನಕ್ಕೆಂದೇ ಭೂತಾನ್‌ ದೇಶದಿಂದ ಊರಿಗೆ ಬಂದಿರುವ ಅನುಪಮಾ ನಿಜಕ್ಕೂ ಮಾದರಿಯಾಗಿದ್ದಾರೆ. ಚಿಕ್ಕಮ್ಯಾಗೇರಿ ಗ್ರಾಮದ ಮತಗಟ್ಟೆ ಸಂಖ್ಯೆ ಬೂತ್‌ ನಂ. 1ರಲ್ಲಿ ಪಾಲಕರೊಂದಿಗೆ ಆಗಮಿಸಿ ಮತಚಲಾಯಿಸಿದರು.

ವಿದೇಶದಲ್ಲಿ ಗೌರವ: ವಿದೇಶಿ ನೆಲದಲ್ಲಿ ಭಾರತೀಯರು ಎಂದು ಹೇಳಲು ಹೆಮ್ಮೆಯಾಗುತ್ತಿದೆ. ನಮ್ಮ ದೇಶದ ಗೌರವ ಹೆಚ್ಚಾಗಿದೆ. ದೇಶದ ಅತೀ ದೊಡ್ಡ ಸಂಭ್ರಮವಾದ ಚುನಾವಣೆಯಲ್ಲಿ ಪಾಲ್ಗೊಂಡಿರುವುದಕ್ಕೆ ಅತೀವ ಸಂತಸವಾಗಿದೆ ಎನ್ನುತ್ತಾರೆ.

ವಿದೇಶದಿಂದ ಬಂದು ಮತದಾನ ಮಾಡಿರುವ ಡಾ| ಅನುಪಮಾ ಅವರ ಕಾರ್ಯಕ್ಕೆ ತಾಲೂಕಿನಾದ್ಯಂತ ಮೆಚ್ಚುಗೆ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣದಲ್ಲೂ ಇವರು ಮತದಾನ ಮಾಡಿರುವುದು ಸಾಕಷ್ಟು ವೈರಲ್ ಆಗಿದೆ.

Advertisement

ಅಮೇರಿಕಾದಿಂದ ಬಂದು ಮತದಾನ: ಮತದಾನದ ಜಾಗೃತಿ ಯಾವ ರೀತಿ ಮೊಳಗಿದೆಯಂದರೆ, ದೇಶ ವಿದೇಶದಲ್ಲೂ ಭಾರತೀಯರು ತಮ್ಮ ಹಕ್ಕಿನ ಬಗ್ಗೆ ಜಾಗೃತರಾಗಿದ್ದಾರೆ. ಅಮೇರಿಕಾದಲ್ಲಿ ಇಂಜನಿಯರ್‌ ಆಗಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲೆಯ ಕಾರಟಗಿ ತಾಲೂಕಿನ ಯರಡೋಣಾ ನಿವಾಸಿ ಅಭಿಷೇಕ ಪಾಟೀಲ ಮಂಗಳವಾರ ಹಕ್ಕು ಚಲಾಯಿಸಿದರು. ಈ ವೇಳೆ ಮಾತನಾಡಿದ ಅವರು, ಪ್ರತಿಯೊಬ್ಬರು ತಮ್ಮ ಹಕ್ಕನ್ನು ಚಲಾಯಿಸಿ ಪ್ರಜಾಪ್ರಭುತ್ವ ಗೆಲ್ಲಿಸಿ ಎನ್ನುವ ಸಂದೇಶ ನೀಡಿದರು.

ಮತ ಚಲಾಯಿಸುವುದು ನಮ್ಮ ಹಕ್ಕು. ಮತದಾನದ ಅವಕಾಶದಿಂದ ಯಾರು ವಂಚಿತರಾಗಬಾರದು. ಎಲ್ಲರೂ ತಪ್ಪದೇ ಮತದಾನ ಮಾಡಿ. ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ಪ್ರತಿಯೊಬ್ಬರು ಚಲಾಯಿಸಬೇಕು.
•ಡಾ| ಅನುಮಪ ಮಸಾಲಿ,
 ಪ್ರಾಧ್ಯಾಪಕಿ

Advertisement

Udayavani is now on Telegram. Click here to join our channel and stay updated with the latest news.

Next