ಕೊಪ್ಪಳ: ಕೋವಿಡ್ ವೈರಸ್ ನಿಯಂತ್ರಣ ಮಾಡುವ ಹಿನ್ನೆಲೆಯಲ್ಲಿ ಜಿಲ್ಲೆಯನ್ನು ಲಾಕ್‌ಡೌನ್ ಮಾಡಲಾಗಿದೆ. ಸರ್ಕಾರವು ಸರ್ಕಾರಿ ಜಿಲ್ಲಾ ಆಸ್ಪತ್ರೆಯನ್ನು ಕೋವಿಡ್ -19 ಆಸ್ಪತ್ರೆಯಾಗಿ ಪರಿವರ್ತನೆ ಮಾಡಿದ್ದು, ಜಿಲ್ಲೆಯಲ್ಲಿನ ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆ ವ್ಯವಸ್ಥೆಗಾಗಿ ಕೊಪ್ಪಳದ ಗವಿಸಿದ್ದೇಶ್ವರ ಆರ್ಯುವೇದ ಆಸ್ಪತ್ರೆಯನ್ನು ಪ್ರಸ್ತುತ ಪರಿವರ್ತಿತ ಜಿಲ್ಲಾ ಆಸ್ಪತ್ರೆಯನ್ನಾಗಿ ಮಾಡಿ ಕ್ರಮ ಕೈಗೊಂಡಿದೆ.
ಪ್ರಸ್ತುತ ಜಿಲ್ಲಾಸ್ಪತ್ರೆಯಲ್ಲಿನ ಒಳರೋಗಿಗಳನ್ನು ಸಂಪೂರ್ಣ ಸ್ಥಳಾಂತರಿಸಲಾಗಿದೆ. ಆದ್ದರಿಂದ ಜಿಲ್ಲೆಯ ವಿವಿಧ ತಾಲೂಕಿಗಳಿಂದ ಚಿಕಿತ್ಸೆಗೆ ಬರುವ ಜನತೆ ಆಯಾ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು. ಹೆಚ್ಚಿನ ಹೆಚ್ಚಿನ ಚಿಕಿತ್ಸೆಗಾಗಿ ಬರಬೇಕೆಂದರೆ ಆಯಾ ತಾಲೂಕು ಆಸ್ಪತ್ರೆ ವೈದ್ಯಾ ಧಿಕಾರಿಗಳು ಶಿಫಾರಸ್ಸು ಮಾಡಿದ ಪ್ರಕರಣಗಳನ್ನು ಮಾತ್ರ ಕೊಪ್ಪಳದ ಗವಿಸಿದ್ಧೇಶ್ವರ ಆರ್ಯುವೇದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು.
ಒಪಿಡಿ ರೋಗಿಗಳಿಗೆ ಚಿಕಿತ್ಸೆ ನೀಡಲು ಗವಿಸಿದ್ಧೇಶ್ವರ ಆರ್ಯುವೇದ ಆಸ್ಪತ್ರೆಯನ್ನು ಪರಿವರ್ತಿತ ಜಿಲ್ಲಾ ಆಸ್ಪತ್ರೆಯೆಂದು ಗುರುತಿಸಲಾಗಿದೆ. ಈ ಕುರಿತು ತಪಾಸಣೆ ನಡೆಸಲು ಜಿಲ್ಲಾ ಆರೋಗ್ಯಾಧಿಕಾರಿ, ನೋಡಲ್ ವೈದ್ಯಾ ಧಿಕಾರಿ ಮತ್ತು ಸರ್ಕಾರಿ ವೈದ್ಯರು ಹಾಗೂ ಪ್ರಾಥಮಿಕ ಆರೋಗ್ಯ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಈ ಆಸ್ಪತ್ರೆಗೆ ವಿರೂಪಾಕ್ಷಪ್ಪ ಎಸ್. ಮಾದಿನೂರು ಮೊ.ಸಂ. 9449843261 ಹಾಗೂ ಸುನೀಲ್ ಕುಮಾರ್ ದೇಸಾಯಿ ಮೊ.9448777225 ಅವರನ್ನು ನೋಡಲ್ ಅಧಿ ಕಾರಿಗಳನ್ನಾಗಿ ನೇಮಿಸಿದೆ.
ಆಸ್ಪತ್ರೆಯು ಸರ್ಕಾರವು ನಿಗದಿಪಡಿಸಿದ ಸಿ.ಜಿ.ಎಸ್ ದರದಂತೆ ಚಿಕಿತ್ಸೆ ನೀಡಲು (ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಎಬಿ-ಎಆರ್‌ಕೆ) ಬಿಲ್ ತಯಾರಿಸಿಕೊಂಡು ಸರ್ಕಾರದಿಂದ ಕ್ಲೇಮು ಪಡೆದುಕೊಳ್ಳಬಹುದು. ಕ್ಲೇಮು ಕುರಿತು ಮಾಹಿತಿ ಪಡೆಯಲು ಎಬಿ-ಎಆರ್‌ಕೆ ಜಿಲ್ಲಾ ಟ್ರಸ್ಟ್ ಸಂಪರ್ಕಿಸಿ ಮಾಹಿತಿ ಪಡೆಯಬಹುದು. ಜನತೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಮತ್ತು ರೋಗಿಗಳೊಂದಿಗೆ ಬಂದಿರುವ ಸಂಬಂ ಧಿಕರಿಂದ ಚಿಕಿತ್ಸೆಗೆಂದು ಯಾವುದೇ ಹಣ ಪಡೆಯುವಂತಿಲ್ಲ. ಈ ಕುರಿತು ಸಾರ್ವಜನಿಕರು ದೂರು ನೀಡಬಹುದು. ಸಂಬಂಧಪಟ್ಟ ಆಸ್ಪತ್ರೆಗೆ, ಸಂಸ್ಥೆ ಜವಾಬ್ದಾರಿಯಿಂದ ಲಾಕ್‌ಡೌನ್ ತುರ್ತು ಪರಿಸ್ಥಿತಿ ಸಮಯದಲ್ಲಿ ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕೆಂದು ಜಿಲ್ಲಾಧಿ ಕಾರಿ ಮನವಿ ಮಾಡಿದ್ದಾರೆ.
ಖಾಸಗಿ ಆಸತ್ರೆ ಕಾರ್ಯ ನಿರ್ವಹಣೆ: ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲಾಡಳಿತವು ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಅಲ್ಲದೇ, ಜಿಲ್ಲಾಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆಯನ್ನಾಗಿ ಪರಿವರ್ತನೆ ಮಾಡಿದ ಬಳಿಕ ಸಾಮಾನ್ಯ ರೋಗಿಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಸೂಚನೆ ನೀಡಿದೆ. ಜಿಲ್ಲೆಯಲ್ಲಿ 311 ಆಸ್ಪತ್ರೆಗಳಿದ್ದು, 201 ಆಸ್ಪತ್ರೆ ಕಾರ್ಯ ನಿರ್ವಹಿಸುತ್ತಿವೆ. 93 ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿಲ್ಲ. 17 ಆಸ್ಪತ್ರೆಗಳು ಸ್ಥಗಿತಗೊಂಡಿವೆ. ಇನ್ನು 168 ಖಾಸಗಿ ಆಯುಷ್ ಆಸ್ಪತ್ರೆಗಳಿವೆ. ಅವೆಲ್ಲವೂ ಕಾರ್ಯ ನಿರ್ವಹಿಸುತ್ತಿವೆ. ಇನ್ನೂ 97 ಖಾಸಗಿ ಆಸ್ಪತ್ರೆ ಕೂಡಲೇ ಆರಂಭಿಸಿ ಚಿಕಿತ್ಸೆ ನೀಡುವಂತೆಯೂ ಸೂಚನೆ ನೀಡಲಾಗಿದೆ. ತಪ್ಪಿದರೆ ವಿಪತ್ತು ನಿರ್ವಹಣಾ ಕಾಯ್ದೆ ಅನುಸಾರ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ಜಿಲ್ಲಾಡಳಿತ ನೀಡಿದೆ.